ಅಮ್ಮಾ ಈ ಬಿಸ್ಕಟ್ ನಲ್ಲಿ ಸಣ್ಣ ಸಣ್ಣ ರಂದ್ರಗಳು ಏಕಿರತ್ತೆ? ನಿಮ್ಮ ಮಗುವೂ ಇ ಪ್ರಶ್ನೆ ಕೇಳಿರಬೇಕಲ್ಲವೇ? ಅಷ್ಟಕ್ಕೂ ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಮಕ್ಕಳಿಗಷ್ಟೇ ಅಲ್ಲ, ಬಿಸ್ಕಟ್ ನೋಡಿ ಹಲವರಿಗೆ ಅನ್ನಿಸಿರಬಹುಉದ್ ಇದರಲ್ಲಿ ಸಣ್ಣ ಸಣ್ಣ ರಂಧ್ರಗಳು ಯಾಕಿರತ್ತೆ, ಹೇಗಿರತ್ತೆ ಅಂತ. ನಾವು ದಿನವೂ ಬಳಸುವ ಹಲವು ವಿಷಯಗಳಲ್ಲಿ ಹೀಗೆ ಹಲವಾರು ಕೌತುಕದ ವಿಷಯಗಳು ಅಡಕವಾಗಿರುತ್ತವೆ. ಇಂದು ಬಿಸ್ಕಿಟ್ಟಿನಲ್ಲಿ ಇರುವ ರಂಧ್ರದ ಕುರಿತು ಮಾಹಿತಿ ಹೊತ್ತು ಬಂದಿದ್ದೇವೆ.
ಬಿಸ್ಕಟ್ ನಲ್ಲಿ ಹಲವಾರು ವೈವಿಧ್ಯತೆಗಳಿವೆ. ಕ್ರೀಮ್ ಬಿಸ್ಕಟ್, ಸಾದಾ ಬಿಸ್ಕಟ್ ಅವುಗಳಲ್ಲಿ ತರಾವರಿ ಪ್ಲೇವರ್ ಗಳು.. ಹೀಗೆ ಆದರೆ ಇಷ್ಟು ವರ್ಷಗಳಿಂದ ಬದಲಾಗದೇ ಇರುವುದು ಅಂದ್ರೆ ಕೆಲವು ಬಿಸ್ಕಟ್ ನಲ್ಲಿ ಇರುವ ರಂಧ್ರಗಳು. ಇದಕ್ಕೆ ಕಾರಣ ಏನು ಗೊತ್ತಾ? ಈ ರಂಧ್ರಗಳನ್ನು ಸಾಮಾನ್ಯವಾಗಿ ಸಿಹಿ ಮತ್ತು ಉಪ್ಪಿನ ರುಚಿಯುಳ್ಳ ಬಿಸ್ಕತ್ತಿನಲ್ಲಿ ಮತ್ತು ಬಾರ್ಬನ್‌ನಂತಹ ಕ್ರೀಂ ಬಿಸ್ಕತ್ತಿನಲ್ಲಿ ಕಾಣಬಹುದು. ಇದು ತಯಾರಿಕಾ ಕಂಪನಿಗೆ ಸಂಬಂಧಪಟ್ಟ, ಅವರ ವಿನ್ಯಾಸಕ್ಕೆ ಸಂಬಂಧಪಟ್ಟ ವಿಷಯವಾಗಿದೆ. ಇಂತಹ ಬಿಸ್ಕತ್ತುಗಳನ್ನು ತಯಾರಿಸುವಾಗ ಗಾಳಿ ಹೋಗಲಿ ಎಂದು ಈ ರೀತಿಯ ಚಿಕ್ಕ ಚಿಕ್ಕ ರಂಧ್ರಗಳನ್ನು ಬಿಡಲಾಗುತ್ತದೆ, ಇಲ್ಲವಾದರೆ ಬಿಸ್ಕತ್ತು ಇನ್ನಷ್ಟು ಉಬ್ಬುತ್ತದೆ, ತೆಳುವಾಗಿ ಇರುವುದಿಲ್ಲ.
ಇನು ಈ ಬಿಸ್ಕತ್ ಗಳನ್ನು ಹೇಗೆ ತಯಾರಿಸುತ್ತಾರೆ ಎಂದು ನೋಡಬೇಕು. ತಯಾರಕರು ಮೊದಲಿಗೆ ಬಿಸ್ಕತ್ತು ಮಾಡಲು ಬೇಕಿರುವ ಹಿಟ್ಟನ್ನು, ಸಕ್ಕರೆ ಮತ್ತು ಉಪ್ಪನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಅದನ್ನು ಒಂದು ಟ್ರೇಯಂಥ ಶೀಟ್ ಮೇಲೆ ಹಾಕಿ ಬಳಿಕ ಅದನ್ನು ಯಂತ್ರದಲ್ಲಿ ಇರಿಸಲಾಗುತ್ತದೆ.
ಆ ಯಂತ್ರದಲ್ಲಿ ಈ ರೀತಿಯ ರಂಧ್ರಗಳು ಉಂಟಾಗುತ್ತವೆ. ಈ ರಂದ್ರಗಳು ಇಲ್ಲದಿದ್ದರೆ ಬಿಸ್ಕೆಟ್ ಅನ್ನು ರುಚಿಕರವಾಗಿ ಮಾಡಲು ಸಾಧ್ಯವಿಲ್ಲ. ಬಿಸ್ಕತ್ತಿನಲ್ಲಿ ಈ ರೀತಿಯ ರಂಧ್ರಗಳನ್ನು ಮಾಡದೆಯೇ ಬಿಸ್ಕತ್ತನ್ನು ಚೆನ್ನಾಗಿ ಮಾಡಲು ಸಾಧ್ಯವಿಲ್ಲ. ಕನ್ನಡ ಹೀಗೆ ರಂದ್ರಗಳನ್ನು ಮಾಡುವುದರಿಂದ ಬಿಸ್ಕತ್ತಿನ ಆಕಾರ ದೊಡ್ಡದಾಗುತ್ತದೆ ಮತ್ತು ಸೂಕ್ತವಾದ ಒಂದು ಆಕಾರ ಬರುತ್ತದೆ ಎಂದು ಹೇಳಬಹುದು. ಇದಲ್ಲದೆ ಬಿಸ್ಕತ್ತು ತಯಾರಾದ ಮೇಲೆ ತಿನ್ನಲು ತುಂಬಾನೇ ಗರಿಗರಿಯಾಗಿರುತ್ತದೆ.
ಅಷ್ಟೇಅಲ್ಲ, ಈ ರಂಧ್ರಗಳನ್ನು ಮಾಡದೆ ಹೋದರೆ ಬಿಸ್ಕತ್ತಿನಲ್ಲಿರುವ ಉಷ್ಣಾಂಶ ಹೊರಗೆ ಹೋಗದೆ ಅಲ್ಲಿಯೇ ಉಳಿದುಕೊಳ್ಳುತ್ತದೆ ಇದರಿಂದ ಬಿಸ್ಕತ್ ನಲ್ಲಿ ಬಿರುಕು ಉಂಟಾಗಬಹುದು. ಈ ಎಲ್ಲಾ ಕಾರಣಗಳಿಂದ ಬಿಸ್ಕತ್ ನಲ್ಲಿ ರಂಧ್ರಗಳನ್ನು ಮಾಡುವುದು ಅನಿವಾರ್ಯವೂ ಹೌದು. ರುಚಿಯೂ ಹೌದು. ಹೇಗಾದ್ರೂ ಸರಿ ಬಿಸ್ಕತ್ ಇಷ್ಟಪಡೋರಂತೂ ಬಿಸ್ಕೆಟ್ ತಿಂತಾನೆ ಇರುತ್ತಾರೆ!