ರಕ್ಷಿತ್ ಶೆಟ್ಟಿ ರವರ ಜೊತೆ ಬ್ರೇಕ್ ಅಪ್ ನಂತರ ಮೊದಲ ಬಾರಿಗೆ ತನ್ನ ಮುಂದಿನ ಜೀವನ, ಪ್ರೀತಿ ಹಾಗೂ ಮದುವೆ ಕುರಿತು ಮಾತನಾಡಿದ ರಶ್ಮಿಕಾ, ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದ ಮೂಲಕ ತಮ್ಮ ಸಿನಿಮಾ ಜರ್ನಿ ಯನ್ನು ಪ್ರಾರಂಭಿಸಿ ಈಗ ಬಹುತೇಕ ಎಲ್ಲಾ ಪ್ರಮುಖ ಚಿತ್ರರಂಗಗಳಲ್ಲಿ ಕೂಡ ರಶ್ಮಿಕಾ ಮಂದಣ್ಣ ನವರು ತಮ್ಮ ಹೆಸರನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಾನ್ವಿ ಆಗಿ ಎಲ್ಲರ ಮನಗೆದ್ದು. ನಂತರ ತೆಲುಗಿನಲ್ಲಿ ನಟಿಸುವ ಮೂಲಕ ನ್ಯಾಷನಲ್ ಕ್ರಶ್ ಆಗುತ್ತಾರೆ. ಈಗಾಗಲೇ ಭಾರತೀಯ ಚಿತ್ರರಂಗದ ಬಹುತೇಕ ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ರಶ್ಮಿಕ ಮಂದಣ್ಣ ನವರ ಕುರಿತಂತೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ವಿಚಾರಗಳು ಸುದ್ದಿಯಾಗುತ್ತಲೇ ಇರುತ್ತವೆ. ಎಷ್ಟೇ ಆದ್ರೂ ನ್ಯಾಷನಲ್ ಕೃಷ್ ಅಲ್ವಾ ಖಂಡಿತವಾಗಿ ಸುದ್ದಿಯಾಗುತ್ತಲೇ ಇರುತ್ತದೆ. ಇನ್ನು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ರಕ್ಷಿತ್ ಶೆಟ್ಟಿ ಅವರೊಂದಿಗೆ ಮುರಿದು ಹೋಗಿದ್ದು ಕೂಡ ನಿಮಗೆ ಗೊತ್ತಿದೆ. ಇದಕ್ಕೆ ರಶ್ಮಿಕ ಮಂದಣ್ಣ ನವರು ವಿಜಯ್ ದೇವರಕೊಂಡ ರವರಿಗೆ ಹತ್ತಿರವಾಗಿದ್ದೇ ಕಾರಣ ಎಂಬುದಾಗಿ ಹಲವಾರು ಬಾರಿ ಸುದ್ದಿಯಾಗಿತ್ತು. ಯಾಕೆಂದರೆ ಇವರಿಬ್ಬರು ಹಲವಾರು ಬಾರಿ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು. ಕೇಳಿದಾಗಲೆಲ್ಲ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂಬುದಾಗಿ ಹೇಳುತ್ತಿದ್ದರು.
ಇತ್ತೀಚಿಗಷ್ಟೇ ಪ್ರೀತಿ ಹಾಗೂ ಮದುವೆಯ ಕುರಿತಂತೆ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣನ ಅವರು ಮಾತನಾಡಿದ್ದಾರೆ. ರಶ್ಮಿಕ ಮಂದಣ್ಣ ನವರು ಹೇಳುವಂತೆ ಪ್ರೀತಿಯೆಂದರೆ ಒಬ್ಬರಿಗೊಬ್ಬರು ಗೌರವ ಹಾಗೂ ಪ್ರೀತಿಯನ್ನು ನೀಡುವುದು. ಪ್ರೀತಿಪಾತ್ರರಿಗೆ ಸಮಯವನ್ನು ನೀಡುವುದು. ಪ್ರೀತಿಯನ್ನು ಬಣ್ಣಿಸುವುದು ಕಷ್ಟ ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿಯೆನ್ನುವುದು ಒಂದೇ ಕಡೆ ಇರಬಾರದು ಎರಡು ಕಡೆ ಇರಬೇಕು ಎಂದು ಹೇಳುತ್ತಾರೆ. ಪ್ರೀತಿಯೆನ್ನುವುದು ಭಾವನೆಗಳಿಗೆ ಸಂಬಂಧಪಟ್ಟ ವಿಚಾರ. ಮದುವೆ ಬಗ್ಗೆ ಹೇಳುವಷ್ಟು ನಾನು ದೊಡ್ಡವಳಲ್ಲ ನನ್ನ ಪ್ರಕಾರ ಮದುವೆಯೆಂದರೆ ನಮಗೆ ಸರಿಹೊಂದುವ ವರ ಜೊತೆಗೆ ಇರುವುದು ಎಂಬುದಾಗಿ ರಶ್ಮಿಕ ಮಂದಣ್ಣ ನವರು ಪ್ರೀತಿ ಹಾಗೂ ಮದುವೆಯ ಕುರಿತಂತೆ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.