ಹಿಂದೂ ಧರ್ಮದಲ್ಲಿ ಮನೆಯಲ್ಲಿ ಈ ದೇವರುಗಳನ್ನು ಪೂಜಿಸಲೇಬಾರದು, ಪೂಜಿಸಿದ ಸಮಸ್ಯೆ ತಪ್ಪಿದಲ್ಲ. ಯಾವ್ಯಾವ ದೇವರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಧರ್ಮ ಯಾವುದೇ ಆಗಿರಲಿ ಅದರಲ್ಲಿನ ಆಚರಣೆಗಳಿಗೆ ಅದರದೇ ಆದ ನಿಯಮಗಳು ನಿರ್ಬಂಧಗಳಿರುತ್ತವೆ. ಅದರಲ್ಲೂ ಮುಕ್ಕೋಟಿ ದೇವತೆಗಳನ್ನು ಪೂಜಿಸುವ ಹಿಂದೂ ಧರ್ಮದಲ್ಲಿ ಪ್ರತಿ ಪೂಜೆಗೂ ಅದರದೇ ಆದ ನಿಯಮಗಳು ಹಾಗೂ ಉದ್ದೇಶಗಳು ಇರುತ್ತವೆ. ಯಾವ ದೇವರನ್ನು ಮನೆಯ ದೇವರ ಗುಡಿಯಲ್ಲಿ ಇಟ್ಟು ಪೂಜಿಸಬೇಕು, ಹೇಗೆ ಪೂಜಿಸಬೇಕು, ಯಾವಾಗ ಪೂಜಿಸಬೇಕು ಎಲ್ಲದಕ್ಕೂ ಶಾಸ್ತ್ರಗಳು ಕೆಲವು ನಿಯಮಗಳನ್ನು ಹೇಳುತ್ತವೆ. ಅದರ ಪ್ರಕಾರವೇ ನಡೆದುಕೊಂಡಾಗ ಮಾತ್ರ ಮನೆಯಲ್ಲಿ ಸುಖ ಶಾಂತಿ ಆರ್ಥಿಕ ಸಮೃದ್ಧಿ ಉಂಟಾಗಲು ಸಾಧ್ಯ. ದೇವರು ಎಂದರೆ ಎಲ್ಲರೂ ಒಂದೇ ಆದರೂ ಕೆಲವು ದೇವ-ದೇವತೆಯರ ವಿಗ್ರಹವನ್ನು ಮನೆಯಲ್ಲಿ ಇಟ್ಟು ಪೂಜಿಸುವುದು ಮಂಗಳಕರವಲ್ಲ. ಈ ವಿಚಾರದ ಬಗ್ಗೆ ನಾವಿಂದು ತಿಳಿಸಿ ಕೊಡ್ತೀವಿ.
ಮೊದಲನೆಯದಾಗಿ ಕಾಳಿದೇವಿ. ಕಾಳಿ ಮಾತೆ, ಭಗವತಿಯ ರುದ್ರ ರೂಪ. ರಾಕ್ಷಸರ ಸಂಹಾರಕ್ಕಾಗಿಯೇ ದೇವಿ ರುದ್ರ ರೂಪವನ್ನು ತಾಳಿದ್ದು. ಕಾಳಿಮಾತೆಯ ಕಾಲಡಿಯಲ್ಲಿ ಶಿವನು ಮಲಗಿ ಆಕೆಯ ಕೋಪವನ್ನು ಶಮನಗೊಳಿಸುತ್ತದೆ. ಕಾಳಿ ಭಗವತಿ ಆಗಿ ಮತ್ತೆ ಕಾಣಿಸಿಕೊಂಡಾಗ ಆಕೆಯನ್ನು ದೇವಾಲಯದಲ್ಲಿ ಪೂಜಿಸಲಾಗುತ್ತದೆ. ಹಾಗಾಗಿ ಕಾಳಿಮಾತೆಯನ್ನು ಎಂದಿಗೂ ಮನೆಯಲ್ಲಿ ಇಟ್ಟು ಪೂಜಿಸಬಾರದು.

ಶನಿ. ಶನಿದೇವರ ವಕ್ರದೃಷ್ಟಿ ಬಿತ್ತು ಅಂದ್ರೆ ಜೀವನದಲ್ಲಿ ಸಮಸ್ಯೆಗಳು ಶುರುವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಸರಿಯಾದ ರೀತಿಯಲ್ಲಿ ಶನಿದೇವನನ್ನು ಪೂಜಿಸಿದರೆ ಅದರಿಂದ ಒಳಿತಾಗುವುದು ಶತಃಸಿದ್ಧ. ಆದರೂ ಧರ್ಮಗ್ರಂಥಗಳು ಹೇಳುವ ಪ್ರಕಾರ ಶನಿ ದೇವರ ವಿಗ್ರಹವನ್ನು ಮನೆಯಲ್ಲಿ ಇಟ್ಟು ಪೂಜಿಸಬಾರದು.
ಭೈರವ ಬಾಬಾ. ಶಿವನ ಕೋಪದ ಪ್ರತೀಕ ಭೈರವ. ಹಾಗಾಗಿ ಮನೆಯಲ್ಲಿ ಬೈರವನ ಮೂರ್ತಿಯನ್ನು ಪ್ರತಿಷ್ಠಾಪಿಸುವುದು ನಿಷಿದ್ಧ. ಕೋಪದ ರೂಪವಾಗಿರುವ ಭೈರವನನ್ನು ಮನೆಯಲ್ಲಿ ಪೂಜಿಸಿದರೆ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿಗೆ ಭಂಗ ಬರಬಹುದು. ಹಾಗಾಗಿ ಈ ದೇವ-ದೇವತೆಯರನ್ನು ಬಿಟ್ಟು ಉಳಿದ ದೇವರುಗಳನ್ನು ಮನೆಯಲ್ಲಿ ಪೂಜಿಸುವುದರಿಂದ ಒಳಿತಾಗುತ್ತದೆ.