ಏರ್ಟೆಲ್ ಜಿಯೋ ಗೆ ಠಕ್ಕರ್ ನೀಡಿದ ಬಿಎಸ್ಎನ್ಎಲ್, ಕಡಿಮೆ ಬೆಳೆಗೆ 2GB ಡೇಟಾ, 150 ದಿನಗಳ ವ್ಯಾಲಿಡಿಟಿ. ಎಷ್ಟೆಲ್ಲಾ ಲಾಭ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ಸಮಯಗಳಲ್ಲಿ ಭಾರತೀಯ ಟೆಲಿಕಾಂ ಸಂಸ್ಥೆಗಳು ಜನರಿಗೆ ಇಷ್ಟವಾಗುವಂತಹ ಹೊಸ ಹೊಸ ರೀಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸಿ ಅತ್ಯಂತ ಹೆಚ್ಚು ಗ್ರಾಹಕರನ್ನು ಸೆಳೆದುಕೊಳ್ಳುವ ಯತ್ನವನ್ನು ಮಾಡುತ್ತಿವೆ. ಅವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸರಕಾರಿ ಸ್ವಾಮ್ಯದ ಸಂಸ್ಥೆಯಾಗಿರುವ ಬಿಎಸ್ಎನ್ಎಲ್ ಕೂಡ ಕೆಲವೊಂದು ಯೋಜನೆಗಳ ಮೂಲಕ ಮತ್ತೊಮ್ಮೆ ತನ್ನ ಗ್ರಾಹಕರನ್ನು ಮರಳಿ ಪಡೆಯುವ ಯತ್ನವನ್ನು ಮಾಡುತ್ತಿದೆ.
ಖಾಸಗಿ ಸಂಸ್ಥೆಗಳು ಈಗಾಗಲೇ ಹಲವಾರು ವಿಶಿಷ್ಟವಾದ ಯೋಜನೆಗಳನ್ನು ಪರಿಚಯಿಸುವುದರಿಂದಾಗಿ ಬಿಎಸ್ಎನ್ಎಲ್ ಸಂಸ್ಥೆಗೆ ತನ್ನ ಗ್ರಾಹಕರನ್ನು ಮರುಕಳಿಸಿ ಪಡೆಯಲು ಹಲವಾರು ಹರಸಾಹಸ ಮಾಡಬೇಕಾದಂತಹ ಪರಿಸ್ಥಿತಿ ಒದಗಿ ಬಂದಿದೆ. ಇದೇ ಕಾರಣಕ್ಕಾಗಿಯೇ ಬಿಎಸ್ಎನ್ಎಲ್ ಸಂಸ್ಥೆ ಯಾರು ಕೂಡ ಕೊಡದಂತಹ ಕಡಿಮೆ ಬೆಲೆಯಲ್ಲಿ ಪ್ರೀಪೇಯ್ಡ್ ಸೇವೆಗಳನ್ನು ನೀಡುವುದಾಗಿ ಘೋಷಿಸಿಕೊಂಡಿತು. ಒಂದು ಲೆಕ್ಕದಲ್ಲಿ ಹೇಳುವುದಾದರೆ ಬಿ ಎಸ್ ಎನ್ ಎಲ್ ಪರಿಚಯಿಸಿರುವ ಅಂತಹ ಈ ಪ್ರೀತಿ ಪ್ಲಾನ್ ಯೋಜನೆ ಎಷ್ಟೊಂದು ಕಡಿಮೆಯಲ್ಲಿ ಬೇರೆಯಾವ ಟೆಲಿಕಾಂ ಸಂಸ್ಥೆಗಳಲ್ಲಿ ಕೊಡುತ್ತಿರುವುದು ವಿರಳಾತಿವಿರಳ. ಅಷ್ಟಕ್ಕೂ ಇಷ್ಟೊಂದು ಅಗ್ಗದ ಬೆಲೆಯಲ್ಲಿ ಯಾವ ಯೋಜನೆಯನ್ನು ಬಿಎಸ್ಎನ್ಎಲ್ ಪರಿಚಯಿಸಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹೌದು ಗೆಳೆಯರೇ ಬಿಎಸ್ಎನ್ಎಲ್ ಸಂಸ್ಥೆ 197 ರೂಪಾಯಿಗಳಿಗೆ 157 ದಿನಗಳ ವ್ಯಾಲಿಡಿಟಿ ಅಂದರೆ ಐದು ತಿಂಗಳ ವ್ಯಾಲಿಡಿಟಿ. ದೈನಂದಿನ 2gb ಡೇಟಾವನ್ನು ಹಾಗೂ 100 ಮೆಸೇಜುಗಳನ್ನು ನೀಡಲು ಪ್ರಾರಂಭಿಸಿತು. ಖಂಡಿತವಾಗಿಯೂ ಯಾವುದೇ ಟೆಲಿಕಾಂ ಸಂಸ್ಥೆ ಇಷ್ಟೊಂದು ಅಗ್ಗದಲ್ಲಿ ಇಷ್ಟೊಂದು ಅತ್ಯುತ್ತಮ ಸೇವೆಗಳನ್ನು ನೀಡಲು ಸಾಧ್ಯವೇ ಇಲ್ಲ. ಈಗ ಈ ಪ್ಲಾನ್ ಗೆ ಬಿಎಸ್ಎನ್ಎಲ್ ಸಂಸ್ಥೆ ಮತ್ತೊಂದು ರೋಚಕ ತಿರುವನ್ನು ನೀಡಿದೆ. ಅದೇನೆಂದರೆ ಅನ್ಲಿಮಿಟೆಡ್ ಕರೆ ಹಾಗೂ ಡೇಟಾವನ್ನು ಕೇವಲ 18 ದಿನಗಳಿಗೆ ಮಾತ್ರ ನೀಡಲಾಗಿದೆ. 18 ದಿನಗಳ ನಂತರ ಯೋಜನೆಯಲ್ಲಿ ಇವೆರಡು ಸೌಲಭ್ಯಗಳು ಸಿಗುವುದಿಲ್ಲ. ಇನ್ಕಮಿಂಗ್ ಕರೆ ಹಾಗೂ ದೈನಂದಿನ 100 ಮೆಸೇಜ್ಗಳು 150 ದಿನಗಳ ಕಾಲ ಮುಂದುವರಿಯಲಿವೆ. ಒಂದು ವೇಳೆ ಬೇರೆಯವರಿಗೆ ಕರೆಮಾಡಲು ನೀವು ಬೇರೆ ರಿಚಾರ್ಜ್ ಮಾಡಬೇಕಾಗುತ್ತದೆ. ಅತಿ ಕಡಿಮೆ ಬೆಲೆಯ ಸೇವೆಯನ್ನು ಅಪೇಕ್ಷಿಸುವವರು ಈ ರಿಚಾರ್ಜ್ ಮಾಡಬಹುದಾಗಿದೆ.