ಕನ್ನಡದಿಂದ ರೀಮೇಕ್ ಆಗಿ ತೆಲುಗುದಲ್ಲಿ ತೆಗೆದಾಗ ಸೋತ ಸಿನಿಮಾಗಳು ಯಾವ್ಯಾವು ಗೊತ್ತೇ?? ಅಚ್ಚರಿಯ ಸಿನಿಮಾಗಳು ಲಿಸ್ಟಿನಲ್ಲಿ
ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ತೆರೆಕಾಣುವ ಸಾಕಷ್ಟು ಹಿಟ್ ಸಿನಿಮಾಗಳು ಪರಭಾಷೆಗಳಿಗೂ ಕೂಡ ಅನುವಾದಗೊಂಡು ತೆರೆಕಾಣುತ್ತವೆ. ಇಂದಿನ ದಿನಗಳಲ್ಲಿ ಇಂತಹ ಸಿನಿಮಾಗಳು ಹೆಚ್ಚಾಗಿ ತೆರೆಕಾಣುತ್ತಿವೆ ಎಂದೇ ಹೇಳಬಹುದು. ಆದರೆ ರಿಮೇಕ್ ಮಾಡಿದ ಎಲ್ಲಾ ಸಿನಿಮಾಗಳು ಹಿಟ್ ಆಗುತ್ತವೆ ಎಂದು ಹೇಳಲಾಗುವುದಿಲ್ಲ. ಮೊದಲಿಗೆ ಮಾತೃಭಾಷೆಯಲ್ಲಿ ತೆರೆಕಂಡ ಸಿನಿಮಾಗಳು ಯಶಸ್ಸನ್ನು ಕಂಡರೆ, ಅದೇ ಸಿನಿಮಾಗಳು ಪರಭಾಷೆಗೆ ರಿಮೇಕ್ ಆದಾಗ ಸೋತ ಕಹಿ ಅನುಭವವನ್ನು ಪಡೆಯುತ್ತವೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ತೆರೆಕಂಡು ಜನರ ಮನಸ್ಸನ್ನು ಗೆದ್ದಿರುವ ಸಿನಿಮಾಗಳು ತೆಲುಗು ಚಿತ್ರರಂಗಕ್ಕೆ ಕೂಡ ರೀಮೇಕ್ ಆಗಿವೆ. ಹೀಗೆ ತೆಲುಗು ಭಾಷೆಯಲ್ಲಿ ತೆರೆಕಂಡ ಕನ್ನಡದ ಸಾಕಷ್ಟು ರಿಮೇಕ್ ಸಿನಿಮಾಗಳು ಸೋಲನ್ನು ಕಂಡಿವೆ. ಹಾಗಾದರೆ ಕನ್ನಡದಿಂದ ರೀಮೇಕ್ ಆಗಿ ತೆಲುಗು ಪ್ರೇಕ್ಷಕರಿಂದ ತಿರಸ್ಕಾರಕ್ಕೆ ಒಳಪಟ್ಟ ಸಿನಿಮಾಗಳು ಯಾವವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಕನ್ನಡ ಭಾಷೆಯಲ್ಲಿ 2005ರಲ್ಲಿ ತೆರೆಕಂಡ ರಿಷಿ ಸಿನಿಮಾ ಕೌಟುಂಬಿಕ ಮನರಂಜನೆ ನೀಡುವ ಸಿನಿಮಾ. ಈ ಸಿನಿಮಾದಲ್ಲಿ ಖ್ಯಾತ ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ರಾಧಿಕಾ ಕುಮಾರಸ್ವಾಮಿ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಂದಿನ ದಿನಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಇನ್ನು ಈ ಸಿನಿಮಾವನ್ನು 2009ರಲ್ಲಿ ತೆಲುಗು ಭಾಷೆಯಲ್ಲಿ ‘ಬಂಗಾರು ಬಾಬು’ ಎಂಬ ಹೆಸರಿನಿಂದ ರಿಮೇಕ್ ಮಾಡಲಾಯಿತು. ಈ ತೆಲುಗು ಸಿನಿಮಾದಲ್ಲಿ ಜಗಪತಿಬಾಬು ಹಾಗೂ ಮೀರಾ ಜಾಸ್ಮಿನ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಆದರೆ ಕನ್ನಡ ಸಿನಿಮಾದಂತೆ ಈ ಸಿನಿಮಾ ಜನರ ಮೆಚ್ಚುಗೆ ಗಳಿಸುವಲ್ಲಿ ವಿಫಲವಾಯಿತು.
2004ರಲ್ಲಿ ಬಿಡುಗಡೆಯಾದ ಮಾಲಾಶ್ರೀ ಅಭಿನಯದ ಮಹಿಳಾ ಪ್ರಧಾನ ಚಿತ್ರವಾದ ‘ದುರ್ಗಿ’ ಸಿನಿಮಾ ಕೂಡ ಅಂದಿನ ದಿನಗಳಲ್ಲಿ ಜನರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಈ ಸಿನಿಮಾದಿಂದ ಮಾಲಾಶ್ರೀ ಅವರು ಆಕ್ಷನ್ ಕ್ವೀನ್ ಎಂದೇ ಪ್ರಖ್ಯಾತರಾದರು. ಈ ಸಿನಿಮಾದ ಯಶಸ್ಸನ್ನು ಕಂಡು ತೆಲುಗು ಚಿತ್ರರಂಗದಲ್ಲಿ 2005ರಲ್ಲಿ ‘ನರಸಿಂಮುಡು’ ಎಂಬ ಶೀರ್ಷಿಕೆಯೊಂದಿಗೆ ರಿಮೇಕ್ ಆಯಿತು. ಈ ಚಿತ್ರದಲ್ಲಿ ಜೂನಿಯರ್ ಎನ್ ಟಿ ಆರ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ ಈ ಸಿನಿಮಾ ತೆಲುಗು ಪ್ರೇಕ್ಷಕರಿಂದ ತಿರಸ್ಕರಿಸಲಾಯಿತು. ಅದೇ ರೀತಿ 2019ರಲ್ಲಿ ಕನ್ನಡ ಚಿತ್ರರಂಗದಲ್ಲಿ ತೆರೆಕಂಡ ‘ಕವಲುದಾರಿ’ ಸಿನಿಮಾ ಕೂಡಾ ತನ್ನ ಚಿತ್ರಕಥೆ ಹಾಗೂ ವಿಶೇಷವಾದ ದೃಶ್ಯಗಳಿಂದ ಕನ್ನಡಿಗರ ಮನಸ್ಸನ್ನು ಗೆದ್ದಿತ್ತು. ಈ ಸಿನಿಮಾವನ್ನು ಕೂಡ ತೆಲುಗು ಭಾಷೆಯಲ್ಲಿ ‘ಕಪಟ ದಾರಿ’ ಎಂಬ ಹೆಸರಿನೊಂದಿಗೆ ತೆರೆಗೆ ತರಲಾಯಿತು. ಆದರೆ ಇದು ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸನ್ನು ಕಾಣಲಿಲ್ಲ.
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪೂಜಾಗಾಂಧಿ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಭದ್ರವಾದ ನೆಲೆಯನ್ನು ತಂದುಕೊಟ್ಟ ಸಿನಿಮಾ ‘ಮುಂಗಾರುಮಳೆ’. ಈ ಸಿನಿಮಾ ಸಾಕಷ್ಟು ದಿನಗಳವರೆಗೆ ಚಿತ್ರಮಂದಿರಗಳಲ್ಲಿ ಯಶೋಗಾಥೆಯನ್ನು ಬರೆಯಿತು. ಈ ಸಿನಿಮಾ ಅಂದಿನ ದಿನಗಳಲ್ಲಿ ಸುಮಾರು 70 ಕೋಟಿಗಿಂತ ಹೆಚ್ಚಿನ ಗಳಿಕೆಯನ್ನು ಕಂಡಿತ್ತು. ಹೀಗಾಗಿ ಈ ಸಿನಿಮಾ ಹಿಟ್ ಆದ ನಂತರ ಇದನ್ನು ತೆಲುಗು ಭಾಷೆಯಲ್ಲಿ ‘ವಾನ’ ಎಂಬ ಹೆಸರಿನೊಂದಿಗೆ 2008ರಲ್ಲಿ ರಿಮೇಕ್ ಆಯಿತು. ಆದರೆ ಇದು ಕೂಡ ಸೋಲನ್ನು ಅನುಭವಿಸಿತು. ಇನ್ನೂ ಅದೇ ರೀತಿ 2009ರಲ್ಲಿ ತೆರೆಕಂಡ ‘ಜೋಶ್’ ಸಿನಿಮಾ ಪ್ರೇಮ ಕಥೆಯುಳ್ಳ ಸಿನಿಮಾ. ಇದು ಕೂಡ ಅಂದಿನ ದಿನಗಳಲ್ಲಿ ಸಾಕಷ್ಟು ಗಳಿಕೆಯನ್ನು ಕಂಡಿತು. ಹೀಗಾಗಿ ಈ ಸಿನಿಮಾವನ್ನು ‘ಕಿರಾಟಂ’ ಆಗಿ ತೆಲುಗು ಭಾಷೆಯಲ್ಲಿ ತೆರೆಕಂಡಿತ್ತು. ಆದರೆ ಈ ಸಿನಿಮಾ ಕೂಡ ಬಾಕ್ಸಾಫೀಸ್ ನಲ್ಲಿ ಫ್ಲಾಪ್ ಆಯ್ತು.

ಇನ್ನು 2005ರಲ್ಲಿ ಶಿವರಾಜ್ ಕುಮಾರ್ ಅಭಿನಯದ ‘ಜೋಗಿ’ ಸಿನಿಮಾ ಅಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿತ್ತು. ಸುಮಾರು 100 ದಿನಗಳವರೆಗೆ ಯಶಸ್ವಿ ಪ್ರದರ್ಶನ ಕಂಡ ಈ ಚಿತ್ರವನ್ನು ತೆಲುಗು ಭಾಷೆಯಲ್ಲಿ ‘ಯೋಗಿ’ ಎಂಬ ಹೆಸರಿನೊಂದಿಗೆ 2007ರಲ್ಲಿ ರಿಮೇಕ್ ಮಾಡಲಾಯಿತು. ಈ ಸಿನಿಮಾದಲ್ಲಿ ಖ್ಯಾತ ನಟ ಪ್ರಭಾಸ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಆದರೆ ಈ ಸಿನಿಮಾ ಕನ್ನಡದ ಜೋಗಿ ಸಿನಿಮಾದಂತೆ ಯಶಸ್ಸನ್ನು ಗಳಿಸಲು ವಿಫಲವಾಯಿತು. ಇನ್ನು ವಿಷ್ಣುವರ್ಧನ್ ಅವರು ಅಭಿನಯಿಸಿರುವ ಕೊನೆಯ ಸಿನಿಮಾ ‘ಆಪ್ತರಕ್ಷಕ’ ಅಂದಿನ ದಿನಗಳಲ್ಲಿ ಬಾಕ್ಸಾಫೀಸ್ ನಲ್ಲಿ ಹಿಟ್ ಆಗಿತ್ತು. ಹೀಗಾಗಿ ಈ ಸಿನಿಮಾವನ್ನು ತೆಲುಗು ಭಾಷೆಯಲ್ಲಿ ‘ನಾಗವಲ್ಲಿ’ ಎಂದು ರಿಮೇಕ್ ಮಾಡಲಾಯಿತು. ಆದರೆ ಇದು ಕೂಡ ಉಳಿದ ಸಿನಿಮಾದಂತೆ ನಿರೀಕ್ಷೆಯನ್ನು ಹುಸಿಗೊಳಿಸಿತು.
ಇನ್ನು 2015ರಲ್ಲಿ ತೆರೆಕಂಡ ಕನ್ನಡದ ಹಾಸ್ಯ ಸಿನಿಮಾ ‘ಫಸ್ಟ್ ರಾಂಕ್ ರಾಜು’ ಜನರ ಮೆಚ್ಚುಗೆಯನ್ನು ಪಡೆದುಕೊಂಡಿತು. ಇದನ್ನು ಕೂಡ ತೆಲುಗು ಭಾಷೆಯಲ್ಲಿ ‘ಫಸ್ಟ್ ರಾಂಕ್ ರಾಜು’ ಎಂಬ ಅದೇ ಹೆಸರಿನೊಂದಿಗೆ ತೆರೆಗೆ ತರಲಾಯಿತು. ಆದರೆ ಇದು ಕೂಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾಯಿತು. 2013ರಲ್ಲಿ ತೆರೆಕಂಡ ‘ವಿಕ್ಟರಿ’ ಎಂಬ ಸಿನಿಮಾ ಕೂಡ ಕನ್ನಡ ಚಿತ್ರದಲ್ಲಿ ಹಾಸ್ಯದ ಮೂಲಕ ಮನರಂಜನೆ ನೀಡಿ ಜನರ ಪ್ರೀತಿಗೆ ಪಾತ್ರವಾಗಿತ್ತು. ಈ ಸಿನಿಮಾದಲ್ಲಿ ಖ್ಯಾತ ನಟ ಶರಣ್ ಅವರು ಅಭಿನಯಿಸಿದ್ದರು. ಇನ್ನು ಈ ಸಿನಿಮಾವನ್ನು ‘ಸೆಲ್ಫಿ ರಾಜಾ’ ಎಂಬ ಹೆಸರಿನೊಂದಿಗೆ ತೆಲುಗು ಭಾಷೆಗೆ ರಿಮೇಕ್ ಮಾಡಲಾಯಿತು. ಆದರೆ ಇದು ಕೂಡ ವಿಫಲವಾಗಿದೆ. ನಟ ಶಿವರಾಜ್ ಕುಮಾರ್ ಹಾಗೂ ರಾಧಿಕಾ ಕುಮಾರಸ್ವಾಮಿಯವರು ಅಣ್ಣ-ತಂಗಿ ಪಾತ್ರದಲ್ಲಿ ಅಭಿನಯಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದ ಸಿನಿಮಾ ‘ಅಣ್ಣ-ತಂಗಿ’. ಈ ಸಿನಿಮಾ ಕೂಡ ತೆಲುಗು ಭಾಷೆಗೆ ರೀಮೇಕ್ ಆಗಿದ್ದು, ‘ಗೋರಿಂಟಾಕು’ ಎಂಬ ಹೆಸರಿನೊಂದಿಗೆ ತೆರೆಕಂಡಿತ್ತು. ಆದರೆ ಇದು ಕೂಡ ತೆಲುಗು ಪ್ರೇಕ್ಷಕರಿಂದ ತಿರಸ್ಕಾರಕ್ಕೆ ಒಳಪಟ್ಟಿತ್ತು.
ಅದೇ ರೀತಿ ನೆನಪಿರಲಿ ಖ್ಯಾತಿಯ ಪ್ರೇಮ್ ಅಭಿನಯದ ‘ಚಾರ್ ಮಿನಾರ್’ ಎಂಬ ಸಿನಿಮಾವನ್ನು ತೆಲುಗು ಭಾಷೆಯಲ್ಲಿ ‘ಕೃಷ್ಣನಮ್ಮ ಕಲಿಪಿಂದಿ ಇದಿರಾಣಿ’ ಎಂಬ ಹೆಸರಿನಲ್ಲಿ ರಿಮೇಕ್ ಆಯಿತು. ಆದರೆ ಇದು ಕೂಡ ಗಲ್ಲಾಪೆಟ್ಟಿಗೆಯಲ್ಲಿ ಗಳಿಕೆಯನ್ನು ಮಾಡಲು ವಿಫಲವಾಯಿತು. ಅದೇ ರೀತಿ ಕನ್ನಡ ಚಿತ್ರಂಗದಲ್ಲಿ ರಿಯಲ್ ಕಥೆಯೊಂದಿಗೆ ತೆರೆಕಂಡ ಸಿನಿಮಾ ‘ಡೆ-ಡ್ಲಿ ಸೋಮ’. ಈ ಸಿನಿಮಾದಲ್ಲಿ ಖ್ಯಾತ ನಟ ಆದಿತ್ಯ ಹಾಗೂ ರಕ್ಷಿತಾ ಅವರು ಅಭಿನಯಿಸಿದ್ದಾರೆ. ಈ ಸಿನಿಮಾವನ್ನು ತೆಲುಗು ಭಾಷೆಗೆ ‘ನಂದೀಶ್ವರುಡು’ ಎಂಬ ಹೆಸರಿನೊಂದಿಗೆ ರಿಮೇಕ್ ಆಯಿತು. ಆದರೆ ಇದು ಕೂಡ ಬಾಕ್ಸಾಫೀಸ್ ನಲ್ಲಿ ಫ್ಲಾಪ್ ಆಯಿತು. ಇದಿಷ್ಟು ಕನ್ನಡದಿಂದ ತೆಲುಗು ಭಾಷೆಗೆ ರಿಮೇಕ್ ಆಗಿ ಫ್ಲಾಪ್ ಆದ ಸಿನಿಮಾಗಳಾಗಿವೆ. ಇನ್ನು ಈ ಸಿನಿಮಾಗಳಲ್ಲಿ ನಿಮ್ಮ ನೆಚ್ಚಿನ ಸಿನಿಮಾ ಯಾವುದು ಎಂಬುದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.