ಪೋಸ್ಟ್ ಆಫೀಸ್ ನಲ್ಲಿ ಕೇವಲ ನೂರು ರೂಪಾಯಿಯಿ ಹೂಡಿಕೆ ಆರಂಭಿಸಿ ಕೇವಲ ಐದು ವರ್ಷಕ್ಕೆ 20 ಲಕ್ಷ ಹಣ ಪಡೆಯಿರಿ. ಹೇಗೆ ಗೊತ್ತೇ??

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಹಣಕಾಸಿನ ವಿಚಾರದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ವಿಚಾರವನ್ನು ಇಟ್ಟುಕೊಂಡಿರುತ್ತಾರೆ. ಕೆಲವರಿಗೆ ದುಡಿಯುವುದೊಂದೆ ಮುಖ್ಯ ಗುರಿಯಾಗಿದ್ದರೆ, ಕೆಲವರಿಗೆ ದುಡಿದು ಗಳಿಸಿದ ಹಣವನ್ನು ಉಳಿತಾಯ ಮಾಡಬೇಕು ಎನ್ನುವ ಹಂಬಲ ಇರುತ್ತದೆ. ಆದರೆ ಹಣ ಕೂಡಿಟ್ಟರೆ ಸಾಲದು ಅದು ಕೆಲವು ವರ್ಷಗಳಲ್ಲಿ ಹೆಚ್ಚಾಗುವಂತೆಯೂ ನೋಡಿಕೊಳ್ಳಬೇಕು. ಅದಕ್ಕಾಗಿ ನಾವು ಸರಿಯಾದ ಉಳಿತಾಯ ಯೋಜನೆಗಳನ್ನು ಆಯ್ದುಕೊಳ್ಳಬೇಕು. ಹಾಗಂತ ಹಣ ದುಪ್ಪಟ್ಟಾಗಿಸುವ ಮೋಸದ ಜಾಲದಲ್ಲಿ ಸಿಲುಕಬೇಡಿ, ಹಣ ಹೂಡಿಕೆ ವಿಚಾರದಲ್ಲಿ ನಂಬಿಕೆಗೆ ಅರ್ಹವಾದ ಸರ್ಕಾರಿ ಯೋಜನೆಗಳ ಆಯ್ಕೆಯನ್ನು ಮಾಡಿಕೊಳ್ಳುವುದು ಹೆಚ್ಚು ಸೂಕ್ತ.

ಹಣ ಹೂಡಿಕೆಗೆ ಹಾಗೂ ಹೂಡಿಕೆ ಮಾಡಿದ ಹಣವನ್ನು ಹೆಚ್ಚಿಸಲು ಅತ್ಯುತ್ತಮವಾದ ವೇದಿಕೆ ಭಾರತೀಯ ಅಂಚೆ ಕಚೇರಿ. ಇದರಲ್ಲಿ ಪರಿಚಯಿಸುವ ಎಲ್ಲಾ ಯೋಜನೆಗಳೂ ಅತ್ಯುತ್ತಮವಾಗಿದ್ದು ಸಾಕಷ್ಟು ಪ್ರಯೋಜನಗಳನ್ನು ಹೂಡಿಕೆದಾರನಿಗೆ ನೀಡುತ್ತದೆ. ಇವು ಸುರಕ್ಷಿತ ಯೋಜನೆಗಳಾಗಿರುತ್ತವೆ ಕೂಡ. ನಾವಿಂದು ಮಾಹಿತಿ ನೀಡುತ್ತಿರುವುದು, ಪೋಸ್ಟ್ ಆಫೀಸ್ ನೀಡುವ ಸಮಯ ಪರೀಕ್ಷಿತ ಯೋಜನೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ. ಈ ಯೋಜನೆಯ ಅಡಿಯಲ್ಲಿ ನೀವು ಕೆಲವು ವರ್ಷಗಳಲ್ಲಿ ಹೆಚ್ಚು ಹಣವನ್ನು ಕೂಡಿಡಬಹುದು.

ಇನ್ನು ಈ ಯೋಜನೆಯ ಪ್ರಯೋಜನಗಳು ಬಗ್ಗೆ ನೋಡೋಣ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯ ಮುಕ್ತಾಯ ಅವಧಿ 5 ವರ್ಷಗಳು. ಆದರೆ ಕೆಲವು ಷರತ್ತುಗಳೊಂದಿಗೆ 1 ವರ್ಷದ ನಂತರ ನೀವು ನಿಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಪ್ರತಿ ಮೂರು ತಿಂಗಳಿಗೆ ಬಡ್ಡಿದರವನ್ನು ನಿಗದಿಪಡಿಸಲಾಗುತ್ತದೆ. ಈ ಯೋಜನೆಯು ವರ್ಷಕ್ಕೆ ಶೇ. 6.8ಬಡ್ಡಿಯನ್ನು ಒದಗಿಸುತ್ತದೆ.

ಇನ್ನು ತೆರಿಗೆ ವಿನಾಯಿತಿ ಈ ಯೋಜನೆಯ ಪ್ಲಸ್ ಪಾಯಿಂಟ್ ಆಗಿದ್ದು, ಈ ಯೋಜನೆಯಡಿ, ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ವರ್ಷಕ್ಕೆ 1.5 ಲಕ್ಷ ರೂಪಾಯಿಗಳ ತೆರಿಗೆ ವಿನಾಯಿತಿ ಪಡೆಯಬಹುದು. ಹಾಗಾದರೆ ಈ ಯೋಜನೆಯಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎಂದರೆ, ಹೂಡಿಕೆದಾರ ತಿಂಗಳಿಗೆ 100 ರೂಪಾಯಿಯಂತೆ ಹೂಡಿಕೆ ಮಾಡಬಹುದು. ಇದರಿಂದ 5 ವರ್ಷಗಳ ನಂತರ 20.85 ಲಕ್ಷ ಹಣ 6.8 ರ ಬಡ್ಡಿದರದಲ್ಲಿ ಸಿಗುತ್ತದೆ ಬಡ್ಡಿಯಾಗಿ ಸುಮಾರು 6 ಲಕ್ಷ ಲಾಭವನ್ನು ಗಳಿಸುತ್ತಾರೆ. ಕೆಲವು ಸಣ್ಣ ಹೂಡಿಕೆಗಳು ನಮ್ಮ ಗಮನಕ್ಕೆ ಬರದೆ ಕೆಲವೇ ವರ್ಷಗಳಲ್ಲಿ ದೊಡ್ದ ಮೊತ್ತವಾಗಿ ಕೈಸೇರುತ್ತದೆ. ಹಾಗಾಗಿ ಈ ಯೋಜನೆ ಭವಿಷ್ಯದ ಆರ್ಥಿಕ ಸಹಾಯಕ್ಕಾಗಿ ಅತ್ಯಂತ ಸೂಕ್ತವಾದ ಯೋಜನೆಯಾಗಿದೆ.

Get real time updates directly on you device, subscribe now.