ಜಿಯೋ, ಏರ್ಟೆಲ್ ಗೆ ಠಕ್ಕರ್ ನೀಡಿದ BSNL, ಕಡಿಮೆ ಹಣದಲ್ಲಿ ಜಾಸ್ತಿ ವ್ಯಾಲಿಡಿಟಿ ಪ್ಲಾನ್ ಬಿಡುಗಡೆ, ಎಷ್ಟೆಲ್ಲಾ ಲಾಭ ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಟೆಲಿಕಾಂ ಕಂಪನಿಗಳ ನಡುವಿನ ಪೈಪೋಟಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಸರ್ಕಾರಿ ಸ್ವಾಮ್ಯದ ಬಿ ಎಸ್ ಎನ್ ಎಲ್ ಕೂಡ ತನ್ನ ಗ್ರಾಹಕರನು ಹಿಡಿದಿಟ್ಟುಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಿದೆ. ಯಾಕೆಂದರೆ, ಹಲವು ಹೊಸ ಹೊಸ ಗ್ರಾಹಕ ಸ್ನೇಹಿ ಪ್ರೀಪೇಯ್ಡ್ ಯೋಜನೆಗಳನ್ನು ಬಿ ಎಲ್ ಎನ್ ಎಲ್ ಪರಿಚಯಿಸುತ್ತಿದೆ. ಅದರಲ್ಲೂ ಈ ಯೋಜನೆಯಂತೂ ಇದುವರೆಗೆ ಯಾವ ಖಾಸಗಿ ಟೆಲಿಕಾಂ ಕಂಪನಿಗಳೂ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಬನ್ನಿ ಈ ಯೋಜನೆಯ ಪ್ರಯೋಜನಗಳ ಬಗ್ಗೆ ತಿಳಿಯೋಣ.

ರೂ. 197ರ ಯೋಜನೆ: ಈ ಯೋಜನೆಯ ಅತ್ಯಂತ ಪ್ರಮುಖ ಪ್ರಯೋಜನವೆಂದರೆ ಇದರ ವ್ಯಾಲಿಡಿಟಿ. ಇದು 150 ದಿನಗಳ ಅಂದರೆ ಐದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆಯಲ್ಲಿ ಗ್ರಾಹಕರು ದಿನಕ್ಕೆ 2ಜಿಬಿ ಡೇಟಾವನ್ನು ಪಡೆಯುತ್ತಾರೆ. ದೈನಂದಿನ ಡೇಟಾ ಮುಕ್ತಾಯದ ನಂತರವೂ 80kbps ವೇಗದಲ್ಲಿ ಡೇಟಾ ಸಿಗುತ್ತದೆ. ಅನಿಯಮಿತ ಕರೆ ಹಾಗೂ ಪ್ರತಿದಿನ 100 ಎಸ್ ಎಂ ಎಸ್ ಸೌಲಭ್ಯ ಈ ಯೋಜನೆಯಲ್ಲಿದೆ.ಆದರೆ, ಇದೀಗ ಈ ಯೋಜನೆಯಲ್ಲೂ ಬದಲಾವಣೆ ತಂದಿರುವ ಬಿ ಎಸ್ ಎನ್ ಎಲ್, ಅನಿಯಮಿತ ಕರೆಗಳು ಮತ್ತು ದೈನಂದಿನ ಡೇಟಾ ಪ್ರಯೋಜನಗಳನ್ನು 18 ದಿನಗಳವರೆಗೆ ಮಾತ್ರ ನೀಡುತ್ತಿದೆ. 18 ದಿನಗಳ ನಂತರ ದೈನಂದಿನ ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯಗಳು ಇನ್ನು ಮುಂದೆ ಲಭ್ಯವಿಲ್ಲ.

ಇನ್ ಕಮಿಂಗ್ ಕಾಲ್ ಮತ್ತು ದಿನಕ್ಕೆ 100 ಎಸ್ ಎಮ್ ಎಸ್ ಗಳ ಸೌಲಭ್ಯ 150 ದಿನಗಳೂ ದೊರೆಯುತ್ತದೆ. ವಾಯಿಸ್ ಕರೆ ಮಾಡಬೇಕಾದರೆ ಪುನಃ ರೀಚಾರ್ಜ್ ಮಾಡಬೇಕು. ಇದು ಗ್ರಾಹಕರಿಗೆ ತುಸು ಬೇಸರ ತಂದಿದ್ದೂ ನಿಜ. ಆದರೂ ಇದಕ್ಕೆ ಪರ್ಯಯವಾಗಿ ಇನ್ನೂ ಎರಡು ಇತರ ರೀಚಾರ್ಜ್ ಯೋಜನೆಗಳನ್ನು ಬಿ ಎಸ್ ಎನ್ ಎಲ್ ನೀಡುತ್ತಿದೆ. ಅವುಗಳಲ್ಲಿ ಮೊದಲನೆಯದಾಗಿ 199ರೂ ಗಳ ಯೋಜನೆ:: ಈ ಯೋಜನೆಯು 30 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ. ಜೊತೆಗೆ 30 ದಿನಗಳವರೆಗೆ ಅನಿಯಮಿತ ಕರೆ, ದಿನಕ್ಕೆ 2ಜಿಬಿ ಡೇಟಾ ಹಾಗೂ ಪ್ರತಿದಿನ 100 ಎಸ್ ಎಂ ಎಸ್ ಸೌಲಭ್ಯಗಳನ್ನು ಈ ಯೋಜನೆಯ ಮೂಲಕ ನೀಡಲಾಗುತ್ತಿದೆ. ಅಂತೆಯೇ 28 ದಿನಗಳ ವ್ಯಾಲಿಡಿಟಿಯ 187ರೂ ಯೋಜನೆ: ಇದರಲ್ಲೂ ಅನಿಯಮಿತ ಕರೆ, ದಿನಕ್ಕೆ 2ಜಿಬಿ ಡೇಟಾ ಹಾಗೂ ಪ್ರತಿದಿನ 100 ಎಸ್ ಎಂ ಎಸ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇಲ್ಲಿ ವ್ಯಾಲಿಡಿಟಿ 30 ದಿನದ ಬದಲು 28 ದಿನಗಳು.

Get real time updates directly on you device, subscribe now.