ವಯಸ್ಸು 40 ರ ಬಳಿ ಹಾಗೂ ಅದಕ್ಕಿಂತ ಹೆಚ್ಚಾಗಿದ್ದರೂ ಕೂಡ ಇನ್ನೂ ಮದುವೆಯಾಗದ ಕನ್ನಡದ ನಟರು ಯಾರೆಲ್ಲಾ ಗೊತ್ತಾ??
ನಮಸ್ಕಾರ ಸ್ನೇಹಿತರೇ ಸೆಲೆಬ್ರೆಟಿಗಳ ಮದುವೆ ಎಂದರೆ ಖಂಡಿತವಾಗಿಯೂ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತೆ. ಆದರೆ ಈಗ ಸುದ್ದಿಯಾಗುತ್ತಿರುವುದು ವಯಸ್ಸು 40 ವರ್ಷವಾದರೂ ಕೂಡ ಮದುವೆಯಾಗದಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಕುರಿತಂತೆ. ಹಾಗಿದ್ದರೆ ಈ ಸಾಲಿನಲ್ಲಿ ಯಾರೆಲ್ಲ ಬರುತ್ತಾರೆ ಎಂಬುದನ್ನು ತಿಳಿಯೋಣ ಬನ್ನಿ.
ನಟ ಡೆಡ್ಲಿ ಆದಿತ್ಯ ರವರಿಗೆ 43 ವರ್ಷ ವಯಸ್ಸಾಗಿದ್ದರೂ ಕೂಡ ಇಂದಿಗೂ ಮದುವೆಯಾಗಿಲ್ಲ. ಎರಡನೇ ದಾಗಿ ಕನ್ನಡ ಕಿರುತೆರೆಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಎಲ್ಲರಿಗೆ ಪರಿಚಿತರಾಗಿ ಬಿಗ್ ಬಾಸ್ ಹಾಗೂ ಹಿಂದಿ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿರುವ ಜೆಕೆ ಅಂದರೆ ಜಯರಾಂ ಕಾರ್ತಿಕ್ ರವರು 43 ವರ್ಷವಾಗಿದ್ದರೂ ಇನ್ನು ಮದುವೆ ಆಗಿಲ್ಲ. ಕನ್ನಡ ಚಿತ್ರರಂಗದ ಖ್ಯಾತ ಯುವ ನಟ ನಿರ್ದೇಶಕ ಹಾಗೂ ನಿರ್ಮಾಪಕ ರಾಗಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಕೂಡ ಇನ್ನೂ ಮದುವೆಯಾಗಿಲ್ಲ ವಯಸ್ಸು 38. ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ ಆಗಿರುವ ಡಾಲಿ ಧನಂಜಯ್ ಅವರು ಕೂಡ ಇನ್ನೂ ಮದುವೆಯಾಗಿಲ್ಲ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಚಾಕಲೇಟ್ ಹೀರೋ ಆಗಿದ್ದ ತರುಣ್ ಚಂದ್ರ ರವರು ಕೂಡ ಇನ್ನೂ ಮದುವೆಯಾಗಿಲ್ಲ.
ಕಿರಾತಕ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ನಟ ಚಿಕ್ಕಣ್ಣನವರು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯನಟ. ಆದ್ರೂ ಕೂಡ ಇನ್ನೂ ಮದುವೆಯಾಗಿಲ್ಲ. ಗಂಡ ಹೆಂಡತಿ ಹಾಗೂ ಉಗ್ರಂ ಚಿತ್ರದ ಮೂಲಕ ಕನ್ನಡ ಸಿನಿರಸಿಕರಿಗೆ ಪರಿಚಯವಾಗಿರುವ ತಿಲಕ್ ಶೇಖರ್ ಅವರು ಕೂಡ ಇನ್ನೂ ಮದುವೆಯಾಗಿಲ್ಲ. ಕನ್ನಡ ಚಿತ್ರರಂಗದ ಲೆಜೆಂಡರಿ ಖಳನಾಯಕ ನಟನಾಗಿರುವ ಕೀರ್ತಿರಾಜ ರವರ ಪುತ್ರನಾಗಿರುವ ಧರ್ಮ ಕೀರ್ತಿರಾಜ್ ರವರು ನವಗ್ರಹ ಚಿತ್ರದ ಮೂಲಕ ಎಲ್ಲರಿಗೂ ಚಿರಪರಿಚಿತರು. ಇವರು ಕೂಡ ಇನ್ನೂ ಮದುವೆಯಾಗಿಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.