ಈ ಬಾರಿಯ ಹರಾಜಿನಲ್ಲಿ ಮಾರಾಟವಾಗದೆ ಉಳಿಯಬಹುದಾದ ನಾಲ್ಕು ಟೀಮ್ ಇಂಡಿಯಾ ಆಟಗಾರರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಐಪಿಎಲ್ 2022ರ ಹರಾಜು ಹತ್ತಿರವಾಗುತ್ತಿದ್ದಂತೆ, ಈಗ ಎಲ್ಲರ ಗಮನ ಹರಾಜಿನತ್ತ ನೆಟ್ಟಿದೆ. ಯಾರು ಹೆಚ್ಚು ಮೊತ್ತಕ್ಕೆ ಹರಾಜಾಗಬಹುದು, ಯಾರು ಕಡಿಮೆ ಮೊತ್ತಕ್ಕೆ ಹರಾಜಾಗಬಹುದು ಎಂಬ ಚರ್ಚೆ ನಡುಯುತ್ತಿರುವ ವೇಳೆಯಲ್ಲಿಯೇ, ಕೆಲವು ಭಾರತೀಯ ಆಟಗಾರರು ಹರಾಜಾಗದೇ ಉಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹರಾಜಾಗದೇ ಉಳಿಯುವ ನಾಲ್ಕು ಭಾರತೀಯ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.
1.ಮುರಳಿ ವಿಜಯ್ : ತಮಿಳುನಾಡಿನ ಆರಂಭಿಕ ಬ್ಯಾಟ್ಸಮನ್ ಮುರಳಿ ವಿಜಯ್ ಸದ್ಯ 37 ರ ಹರೆಯ. ಆದರೇ ಸ್ಪರ್ಧಾತ್ಮಕ ಕ್ರಿಕೇಟ್ ನಿಂದ ದೂರವುಳಿದು ಬಹುದಿನಗಳೇ ಆಯಿತು. ಹೀಗಾಗಿ 50 ಲಕ್ಷ ಮೂಲಬೆಲೆ ಹೊಂದಿರುವ ಮುರಳಿ ವಿಜಯ್ ರನ್ನು ಫ್ರಾಂಚೈಸಿಗಳು ಖರೀದಿಸಲು ಹಿಂದೇಟು ಹಾಕುವ ಸಾಧ್ಯತೆಯಿದೆ.

2.ಕೇದಾರ್ ಜಾಧವ್ : ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಕೇದಾರ್ ಜಾಧವ್ 1 ಕೋಟಿ ಮೂಲಬೆಲೆ ಹೊಂದಿದ್ದಾರೆ.ಆದರೇ ಸದ್ಯದ ಸಂಪೂರ್ಣ ಫಾರ್ಮ್ ಕಳೆದುಕೊಂಡಿರುವ ಇವರತ್ತ ಫ್ರಾಂಚೈಸಿಗಳು ಗಮನಹರಿಸುವುದು ಕಷ್ಟ. ಹೀಗಾಗಿ ಇವರು ಅನಸೋಲ್ಡ್ ಆಗುವ ಸಾಧ್ಯತೆ ಇದೆ.
3.ಇಶಾಂತ್ ಶರ್ಮಾ : ಲಂಬೂ ವೇಗಿ ಇಶಾಂತ್ ಶರ್ಮಾ ರೂ 2 ಕೋಟಿ ಮೂಲಬೆಲೆ ಹೊಂದಿದ್ದಾರೆ. ಆದರೇ ಇತ್ತಿಚಿನ ದಿನಗಳಲ್ಲಿ ಇವರು ಟಿ 20 ಕ್ರಿಕೇಟ್ ನಲ್ಲಿ ಕಳಪೆ ಫಾರ್ಮ್ ಹೊಂದಿರುವ ಕಾರಣ, ದುಬಾರಿ ಮೂಲ ಬೆಲೆಗೆ ಇವರನ್ನ ಫ್ರಾಂಚೈಸಿಗಳು ಖರೀದಿಸುವುದು ಅನುಮಾನ. ಹೀಗಾಗಿ ಇವರು ಅನ್ ಸೋಲ್ಡ್ ಆಗುವ ಸಾಧ್ಯತೆ ಇದೆ.
4.ಪಿಯೂಶ್ ಚಾವ್ಲಾ : ಲೆಗ್ ಸ್ಪಿನ್ನರ್ ಪಿಯೂಶ್ ಚಾವ್ಲಾ ಮೂಲಬೆಲೆ 1 ಕೋಟಿ ರೂಪಾಯಿ ಇದೆ. ಆದರೇ ಕಳೆದ ಕೆಲವು ಸೀಸನ್ ಗಳಿಂದ ಅವರು ವಿಕೇಟ್ ಪಡೆಯುತ್ತಿಲ್ಲ.ಹಾಗಾಗಿ ಅವರನ್ನು ಫ್ರಾಂಚೈಸಿಗಳು ಖರೀದಿಸುವುದು ಅನುಮಾನ.ಹಾಗಾಗಿ ಇವರು ಅನಸೋಲ್ಡ್ ಆಗುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.