ನೀವು ಜೀವನದಲ್ಲಿ ಸೋಮಾರಿತನ ಅನುಭವಿಸುತ್ತಿದ್ದೀರಾ?? ಹಾಗಿದ್ದರೆ ಏನೇನೋ ಸಾಧನೆ ಮಾಡಿರುವ ಜಪಾನಿಗರ ಈ ತಂತ್ರ ಅನುಸರಿಸಿ, ಯಶಸ್ಸು ಖಂಡಿತಾ

14

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಜೀವನದಲ್ಲಿ ಗುರಿ, ಮಹಾತ್ವಾಂಕ್ಷೆಗಳು ಎಷ್ಟೇ ಇದ್ದರೂ ಕೆಲವೊಮ್ಮೆ ನಮ್ಮ ದೇಹದಲ್ಲಿರುವ ಸೋಮಾರಿತನ ಅದ್ಯಾವುದನ್ನೂ ಸಾಧಿಸಲು ಬಿಡುವುದಿಲ್ಲ. ಇಂದು ಮಾಡುವ ಕೆಲಸವನ್ನು ನಾಳೆ ಮಾಡಿದರಾಯಿತು, ನಾಡಿದ್ದು ಮಾಡಿದರಾಯಿತು ಎಂದು ಮುಂದೂಡುತ್ತೇವೆ. ಇದರಿಂದ ನಮ್ಮ ಕನಸುಗಳೂ ಕೂಡ ನಮ್ಮಿಂದ ದೂರ ಸಾಗುತ್ತಲೇ ಇರುತ್ತವೆ. ಇನ್ನು ಸೋಮಾರಿತನ ನನ್ನ ಶತ್ರು ಆದರೂ ನನಗೆ ಇದರಿಂದ ಆಚೆ ಬರಲು ಸಾಧ್ಯವೇ ಆಗುತ್ತಿಲ್ಲ ಎನ್ನುವವರಿಗೆ ಇಲ್ಲಿದೆ ಜಪಾನ್ ಕೆಲವು ಉಪಾಯಗಳು. ಈ ಲೇಖನ ಪೂರ್ತಿ ಓದಿದರೆ ನಿಮಗೆ ಸಾಕಷ್ಟು ಟಿಪ್ಸ್ ಗಳು ಲಭ್ಯವಾಗುತ್ತವೆ.

ಜಪಾನಿನ ಪ್ರಭಾವಶಾಲಿ ತಂತ್ರದ ಹೆಸರೇ ‘ಕೈಜೆನ್’. ಇದು ನಿಮ್ಮ ಸೋಮಾರಿತನವನ್ನು ಸಂಪೂರ್ಣವಾಗಿ ದೂರಮಾಡುತ್ತದೆ. ಸೋಮಾರಿತನವನ್ನು ಬಿಟ್ಟು ನಿಮ್ಮ ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸಲು ಸಹಾಯಮಾಡುವಂಥ ’ಒಂದು ನಿಮಿಷದ ತತ್ವ’. ಕೈಜೆನ್ ಎಂದರೆ ‘ಕೈ’ ಅಂದಾರೆ ಬದಲಾವಣೆ ಮತ್ತು ‘ಜೆನ್’ ಎಂದರೆ ಬುದ್ಧಿವಂತಿಕೆ. ಇದನ್ನು ಕಂಡುಹಿಡಿದವರು ಜಪಾನಿನ ನಿರ್ವಹಣಾ ಸಲಹೆಗಾರ್ತಿ ಮಸಾಕಿ ಇಮಾಯ್. ಕೈಜನ್ ನ ಉದ್ದೇಶವೇ ನಿಮ್ಮ ಒಂದು ದಿನವೂ ಕೂಡ ಏನನ್ನೂ ಮಾಡದೇ ವ್ಯರ್ಥವಾಗಬಾರದು.

ಕೈಜೆನ್ ತಂತ್ರ ಹೇಗೆ ಕೆಲಸ ಮಾಡುತ್ತದೆ ಎಂದರೆ, ನೀವು ಒಂದು ಕೆಲಸಕ್ಕೆ ದಿನದ ಒಂದು ನಿಮಿಷವನ್ನು ಮೀಸಲಿಡಬೇಕು. ನೀವು ಎಷ್ಟೇ ಸೋಮಾರಿಯಾಗಿದ್ದರೂ, ಎಷ್ಟೇ ಕೆಲಸ ಮಾಡಿ ದಣಿದಿದ್ದರೂ ಆ ಒಂದು ನಿಮಿಷವನ್ನು ಆ ಕೆಲಸಕ್ಕೆ ಮೀಸಲಿಡಬೇಕು. ಉದಾಹರಣೆಗೆ ನೀವು ಏನನ್ನಾದರೂ ಓದುವುದು, ಧ್ಯಾನ, ಯೋಗ ಯಾವುದನ್ನೇ ಆ ಒಂದು ನಿಮಿಷದಲ್ಲಿ ಮಾಡುವುದಾದರೆ ದಿನವೂ ಅದೇ ಒಂದು ನಿಮಿಷವನ್ನು ಈ ಕೆಲಸಕ್ಕಾಗಿ ಮೀಸಲಿಡಬೇಕು. ಕೈಜೆನ್ ಸಂಪೂರ್ಣ ಉಪಯೋಗ ಸಿಗಬೇಕೆಂದರೆ ನೀವು ದೀರ್ಘಕಾಲದವರೆಗೆ ಇದನ್ನು ಮಾಡಬೇಕು. ಯಾವುದೇ ಕಾರಣಕ್ಕೂ ತಪ್ಪಿಸಬಾರದು. ದಿನಕಳೆದಂತೆ ಒಂದು ನಿಮಿಷದ ಸಮಯವನ್ನು ಹೆಚ್ಚಿಸುತ್ತಾ ಹೆಚ್ಚಿಸುತ್ತಾ ಬಂದರೆ ಸೋಮಾರಿತನ ನಿಮ್ಮನ್ನು ಬಿಟ್ಟು ಓಡಿಹೋಗುತ್ತದೆ. ನೀವು ಯಶಸ್ಸನ್ನೂ ಕಾಣುತ್ತೀರಿ. ಹಾಗಾದರೆ ದಿನವೂ ಒಂದು ನಿಮಿಷ ಒಂದು ಉತ್ತಮ ಕೆಲಸಕ್ಕಾಗಿ ಮೀಸಲಿಡುತ್ತೀರಿ ಅಲ್ಲವೇ?

Get real time updates directly on you device, subscribe now.