ಭಾರತ ತಂಡದಲ್ಲಿ ಸಿಆರ್‌ಪಿಎಫ್ ಯೋಧನ ಮಗನ ಮಿಂಚಿಂಗ್, ಭಾರತದ ಭವಿಷ್ಯಕ್ಕೆ ಹೊಸ ವೇಗದ ಅಸ್ತ್ರ.

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಕ್ರಿಕೆಟ್ ತಂಡ ಎನ್ನುವುದು ಈಗಾಗಲೇ ನಮ್ಮ ಭಾರತ ದೇಶದ ಹಲವಾರು ಕ್ರಿಕೆಟ್ ಯುವ ಪ್ರತಿಭೆಗಳಿಗೆ ಅವಕಾಶವನ್ನು ನೀಡಿ ಪ್ರೇಕ್ಷಕರಿಗೆ ಅವರ ಸಾಮರ್ಥ್ಯವನ್ನು ತೋರಿಸುವ ವೇದಿಕೆಯನ್ನು ಮಾಡಿಕೊಟ್ಟಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ನೀವು ಅಂಡರ್-19 ತಂಡದ ಪ್ರದರ್ಶನವನ್ನು ನೋಡುತ್ತಿರಬಹುದು. ಇದೇ ಮಾದರಿಯ ಕ್ರಿಕೆಟ್ ನಿಂದಲೇ ಇಂದು ಭಾರತೀಯ ಕ್ರಿಕೆಟ್ ತಂಡಕ್ಕೆ ಹಲವಾರು ಸೂಪರ್ ಸ್ಟಾರ್ ಗಳು ಸಿಕ್ಕಿದ್ದಾರೆ. ಇನ್ನು ಇದೇ ವಿಚಾರವಾಗಿ ಇಂದಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿದ್ದೇವೆ.

ಭಾರತೀಯ ಕ್ರಿಕೆಟ್ ತಂಡ ಅಂಡರ್-19 ಕ್ರಿಕೆಟ್ ಟೂರ್ನಮೆಂಟ್ ನಲ್ಲಿ 10ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿರುವ ದಾಖಲೆಯನ್ನು ನಿರ್ಮಿಸಿದೆ. ಕ್ವಾರ್ಟರ್ಫೈನಲ್ನಲ್ಲಿ ಬಾಂಗ್ಲಾದೇಶ ತಂಡವನ್ನು ಐದು ವಿಕೆಟ್ ಗಳಿಂದ ಸೋಲಿಸಿ ಭಾರತೀಯ ಕ್ರಿಕೆಟ್ ತಂಡ ಗೆದ್ದು ಬೀಗಿದೆ. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡ ಬಾಂಗ್ಲಾದೇಶವನ್ನು 111 ರನ್ನುಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಎರಡು ವರ್ಷಗಳ ಹಿಂದಿನ ಸೇಡನ್ನು ಈಗ ಭಾರತೀಯ ಕ್ರಿಕೆಟ್ ತಂಡ ಬಾಂಗ್ಲಾದೇಶದ ವಿರುದ್ಧ ತೀರಿಸಿಕೊಂಡಂತಾಗಿದೆ. ಹಾಗಿದ್ದರೆ ಈ ಗೆಲುವಿನ ರೂವಾರಿ ಯಾರೆಂದು ತಿಳಿಯುವುದಾದರೆ ಅದು ರವಿಕುಮಾರ್.

ಹೌದು ಗೆಳೆಯರೇ ರವಿಕುಮಾರ್ ಅವರು 7 ಓವರ್ ಗಳನ್ನು ಬೌಲ್ ಮಾಡಿ 14 ರನ್ನುಗಳನ್ನು ನೀಡಿ 3 ವಿಕೆಟ್ ಗಳನ್ನು ಕಿತ್ತಿದ್ದಾರೆ. ಇವರ ಅದ್ಭುತ ಇನ್ ಸ್ವಿಂಗ್ ಹಾಗೂ ಔಟ್ ಸ್ವಿಂಗ್ ಬೌಲಿಂಗ್ ನಿಂದಾಗಿ ಭಾರತೀಯ ಅಂಡರ್ 19 ಕ್ರಿಕೆಟ್ ತಂಡ ಅದ್ಭುತವಾಗಿದೆ ಎಲ್ಲವನ್ನು ಸಾಧಿಸಿದೆ. ಇನ್ನು ಎಲ್ಲರೂ ಆಶ್ಚರ್ಯಪಡುವಂತಹ ಇನ್ನೊಂದು ವಿಚಾರವೆಂದರೆ ಇವರ ತಂದೆ ಸಿಆರ್ಪಿಎಫ್ ಯೋಧ ಆಗಿದ್ದಾರೆ. ರವಿಕುಮಾರ್ ಅವರು ಭರ್ಜರಿ ಬೌಲಿಂಗ್ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಜಹೀರ್ ಖಾನ್ ಇರ್ಫಾನ್ ಪಠಾಣ್ ಹಾಗೂ ಆಶಿಶ್ ನೆಹ್ರಾ ರವರ ನಂತರ ಭಾರತೀಯ ಕ್ರಿಕೆಟ್ ತಂಡ ಎಡಗೈ ವೇಗಿಯ ಹುಡುಕಾಟದಲ್ಲಿದ್ದು ರವಿಕುಮಾರ್ ಅವರು ಈ ಸ್ಥಾನಕ್ಕೆ ಸಂಪೂರ್ಣವಾಗಿ ಫಿಟ್ ಆಗುತ್ತಾರೆ ಎಂದು ಹೇಳಲಾಗುತ್ತಿದೆ.

Get real time updates directly on you device, subscribe now.