ಮದುವೆಯಾಗಿ 14 ವರ್ಷಗಳ ಬಳಿಕ ತಾಯಿಯಾದ ಮಹಿಳೆ, ಡೆಲಿವರಿ ದಿನ ನಡೆಯಿತು ಊಹಿಸದ ಘಟನೆ, ಆಪರೇಷನ್ ಮಾಡಿದ ಡಾಕ್ಟರ್ ಪರಿಸ್ಥಿತಿ ಏನಾಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮದುವೆಯಾಗುವ ಪ್ರತಿ ಮಹಿಳೆ ಖಂಡಿತವಾಗಿಯೂ ತಾಯಿಯಾಗಬೇಕೆಂದು ಬಯಸುತ್ತಾಳೆ, ಮಾತೃತ್ವದ ಮಾಧುರ್ಯಕ್ಕಾಗಿ ಹಂಬಲಿಸುತ್ತಾಳೆ. ತನ್ನ ಮಗುವನ್ನು ಈ ಜಗತ್ತಿಗೆ ತರುವ ಕನಸು ಮಾತ್ರವಲ್ಲ, ತಾನು ಗರ್ಭಿಣಿ ಎಂದು ತಿಳಿದರೆ ತಾಯಿ ಮತ್ತು ಹೆಚ್ಚಿನ ಕಾಳಜಿ ವಷಿಸುವ ಬಗ್ಗೆ ಅವಳು ತುಂಬಾ ಚಿಂತೆ ಮಾಡುತ್ತಾಳೆ.
ಆ ಮಗುವಿಗೆ ಜನ್ಮ ನೀಡುವವರೆಗೂ ಈ ಜಗತ್ತಿಗೆ ಅವಳು ಎಷ್ಟು ಜಾಗರೂಕಳಾಗಿರಬೇಕು ಅದಕ್ಕೂ ಕೊಂಚ ಹೆಚ್ಚು ಜಾಗರೂಕಳಾಗಿ ಇರುತ್ತಾಳೆ, ಆದರೆ ಇದು ಅವಳಿಗಾಗಿ ಅಲ್ಲ, ಬದಲಾಗಿ ತನ್ನ ಹೊಟ್ಟೆಯಲ್ಲಿರುವ ಮಗುವಿಗಾಗಿ. ಹೀಗೆ ಎಲ್ಲಾ ರೀತಿಯಲ್ಲೂ ಕಾಳಜಿಯಾಗಿಯೇ ಇದ್ದ ತಾಯಿಯ ಕಥೆಯನ್ನು ಈಗ ಡಾಕ್ಟರ್ ಒಬ್ಬರು ನೋಡಿ ಕಣ್ಣೀರು ಹಾಕಿ ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ, ಬನ್ನಿ ಈ ಕುರಿತು ಹೆಚ್ಚು ಮಾಹಿತಿ ನೀಡುತೇವೆ.
ಸ್ನೇಹಿತರೆ ಐರ್ಲೆಂಡ್‌ನ ವೈದ್ಯರು ಪೋಸ್ಟ್ ಒಂದನ್ನು ಮಾಡಿ ಅದರಲ್ಲಿ ಒಂದು ಫೋಟೋ ಸಮೇತ ವಿವರಣೆ ನೀಡಿದ್ದಾರೆ ಇದು ನನ್ನ ಜೀವನದಲ್ಲಿ ಅತ್ಯಂತ ನೋವಿನ ದಿನವಾಗಿದೆ ಎಂದು ಬರೆದುಕೊಂಡಿದ್ದಾರೆ. ನಾನು ಹಲವರಿಗೆ ವೈದ್ಯನಾಗಿದ್ದೆ, ಹಲವಾರು ಆಪರೇಷನ್ ಮಾಡಿದ್ದೇನೆ, ಆಪರೇಷನ್ ರೂಮ್‌ನಲ್ಲಿ ಹೆರಿಗೆ ನೋವು ಸಹಿಸಲಾಗದ ಆ ತಾಯಂದಿರಿಗೆ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದೆ, ಆದರೆ ಆ ದಿನ ದೇವರು ನನ್ನ ಪ್ರಾರ್ಥನೆಯನ್ನು ಕೇಳಲಿಲ್ಲ.
ಇದು ಸಾಮಾನ್ಯ ಮಹಿಳೆ ಆಗಿದ್ದರೆ ಕಣ್ಣೀರು ಹಾಕಿ, ಮರುದಿನ ನನ್ನ ಕರ್ತವ್ಯ ನೆನಪು ಮಾಡಿಕೊಂಡು ಕೆಲಸಕ್ಕೂ ಹೋಗುತ್ತಿದ್ದೆ, ಆದರೆ ಈ ಮಹಿಳೆಯ ಹಿನ್ನೆಲೆ ತಿಳಿದ ಮೇಲೆ ಮುಂದಿನ ನಾಲ್ಕು ದಿನಗಳವರೆಗೆ ಆಸ್ಪತ್ರೆಗೆ ಹೋಗಲು ಸಾಧ್ಯವಾಗಲಿಲ್ಲ ಅಷ್ಟು ಕಣ್ಣೀರು ಸುರಿಸಿದ್ದೇನೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಯಾಕೆಂದರೆ ಆಕೆಗೆ ಮದುವೆಯಾಗಿ 14 ವರ್ಷಗಳು ಕಳೆದಿವೆ ಆದರೂ ಮಕ್ಕಳು ಇರಲಿಲ್ಲ. ಕೊನೆಗೆ ಬೇರೆ ಆಯ್ಕೆ ಇಲ್ಲದೆ, ಕೃತಕ ಗರ್ಭಧಾರಣೆಯ ಮೂಲಕ ಅವಳು ಗರ್ಭಿಣಿಯಾದಳು, ಕುಟುಂಬವು ತುಂಬಾ ಸಂತೋಷವಾಗಿತ್ತು ಆದರೆ ಅವಳ ಹೊಟ್ಟೆಯಲ್ಲಿ ಮಗು ಬೆಳೆದಂತೆ, ಗೆಡ್ಡೆ ಬೆಳೆಯಲು ಪ್ರಾರಂಭಿಸಿತು.
ಆಪರೇಷನ್ ದಿನ ಬಂದೆ ಬಿಟ್ಟಿತು, ಸಾಮಾನ್ಯವಾಗಿ ಕೆಲವು ನಿಮಿಷಗಳ ನೋವನ್ನು ಕೂಡ ಸಹಿಸಿಕೊಳ್ಳಲು ಸಾಧ್ಯವಿಲ್ಲ, ಅದರಲ್ಲೂ ಹೆರಿಗೆ ನೋವು ಸಹಿಸಿಕೊಳ್ಳುವುದು ತಾಯಿಯ ಕೈಯಲ್ಲಿ ಮಾತ್ರ ಸಾಧ್ಯ. ಆದರೆ ಇಲ್ಲಿ ಒಂದಲ್ಲ ಎರದಲ್ಲಿ ಬರೋಬ್ಬರಿ 7 ಗಂಟೆಗಳ ಆಪರೇಷನ್ ಮಾಡುವ ಪರಿಸ್ಥಿತಿ ಬಂತು, ಆಕೆ ಎಷ್ಟು ನೋವು ಅನುಭವಿಸಿರಬಹುದು, ಕೊನೆಗೂ ಮಗು ಹೊರಗಡೆ ಬಂದ ತಕ್ಷಣ ನೋವೆಲ್ಲಾ ಮರೆತು ನೋಡಿ ಖುಷಿ ಪಟ್ಟು ನಕ್ಕು ಬಿಟ್ಟಳು,
ಆದರೆ ಆ ಮಗುವನ್ನು ನೋಡುತ್ತಾ ನೋಡುತ್ತಾ ಹಾಗೆ ಕಣ್ಣು ಮುಚ್ಚಿ ಬಿಟ್ಟಳು. ನಿಜಕ್ಕೂ ಹಲವಾರು ತಾಯಂದಿರು ಪ್ರಾಣ ಬಿಡುವುದನ್ನು ನೋಡಿದ್ದೇನೆ, ಆದರೆ 7 ಗಂಟೆಗಳ ಕಾಲ ನೋವು ಅನುಭವಿಸಿ, ಮಗುವಿಗೆ ಜನ್ಮ ನೀಡಿ ನಕ್ಕು ಬಿಟ್ಟು, ಪ್ರಾಣ ಬಿಟ್ಟ ಮಹಾ ತಾಯಿಯನ್ನು ನೋಡಿದ ನನಗೆ ಮಗಳಂತೆ ಬಾಸವಾಗಿ, ಕಣ್ಣೀರು ಹಾಕಿ ಬಿಟ್ಟೆ. ಮುಂದಿನ ನಾಲ್ಕು ದಿನ ನಾನು ಆಸ್ಪತ್ರೆ ಕಡೆ ಕೂಡ ಹೋಗಲಿಲ್ಲ. ಅಂದು ನನ್ನ ತಾಯಿಗೆ ಹಾಗೂ ನನ್ನ ಮಕ್ಕಳಿಗೆ ಜನ್ಮ ನೀಡಿದ ನನ್ನ ಹೆಂಡತಿಗೆ ನಾನು ಜೀವನ ಪೂರ್ತಿ ಋಣಿಯಾಗಿರಬೇಕು ಎಂದು ನನಗೆ ಸ್ಪಷ್ಟವಾಗಿ ಅರ್ಥವಾಯಿತು ಎಂದು ಬರೆದುಕೊಂಡಿದ್ದಾರೆ.