ನಿಮ್ಮ ಕಣ್ಣುಗಳ ಬಣ್ಣದಿಂದ ನಿಮ್ಮ ವ್ಯಕ್ತಿತ್ವ ತಿಳಿಯಿರಿ. ಅದರಲ್ಲಿಯೂ ಕಪ್ಪು ಕಣ್ಣು ಹೊಂದಿರುವ ಸ್ವಭಾವವೇನು ಗೊತ್ತೇ??

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಪೂರ್ವಜರು ಹಲವಾರು ಶಾಸ್ತ್ರ ಪುರಾಣಗಳ ಪ್ರಕಾರ ಜನರನ್ನು ಅವರ ಗುಣ ಹೇಗೆ ಹಾಗೂ ಅವರ ಭವಿಷ್ಯ ಏನೆಂಬುದನ್ನು ಕಂಡುಹಿಡಿಯಲು ಹಲವಾರು ಕ್ರಮಗಳನ್ನು ಕಂಡುಹಿಡಿದಿದ್ದರು. ಆದರೆ ಇಂದು ನಾವು ಹೇಳಲು ಹೊರಟಿರುವುದು ಸಾಮುದ್ರಿಕಾಶಾಸ್ತ್ರದ ಪ್ರಕಾರ ಕಣ್ಣಿನ ಬಣ್ಣದ ಮೂಲಕ ವ್ಯಕ್ತಿ ಆತನ ಗುಣವಿಶೇಷಗಳು ಏನು ಎಂಬುದನ್ನು ಕಂಡು ಹಿಡಿಯುವುದರ ಕುರಿತಂತೆ ಇಂದಿನ ವಿಚಾರದಲ್ಲಿ ಹೇಳಲು ಹೊರಟಿದ್ದೇವೆ.

ಕಂದು ಬಣ್ಣ. ಕಂದುಬಣ್ಣದ ಕಣ್ಣನ್ನು ಹೊಂದಿರುವವರು ಬೌದ್ಧಿಕವಾಗಿ ಸಾಕಷ್ಟು ಚುರುಕಾಗಿರುತ್ತಾರೆ. ಇನ್ನು ಈ ಬಣ್ಣದ ವ್ಯಕ್ತಿಗಳಿಗೆ ತಮ್ಮ ಸಂಬಂಧದ ಮೌಲ್ಯದ ಕುರಿತಂತ ಸಾಕಷ್ಟು ನಂಬಿಕೆ ಹಾಗೂ ಗೌರವ ಇರುತ್ತದೆ. ಇನ್ನು ಈ ಕಣ್ಣಿನವರಿಗೆ ಎಂಥವರನ್ನು ಕೂಡ ಆಕರ್ಷಿಸಬಲ್ಲ ಅಂತಹ ಚಾಕಚಕ್ಯತೆ ಇರುತ್ತದೆ. ಬೂದು ಬಣ್ಣ ಬೂದುಬಣ್ಣದ ಕಣ್ಣಿನ ಅವರು ಅಂತಹ ಕೆಲಸವನ್ನು ಆದರೂ ಕೂಡ ನಿರ್ಧರಿಸಿದ ಮೇಲೆ ಮಾಡಿಯೇ ತೀರುತ್ತಾರೆ. ಇನ್ನು ಇವರು ಹೃದಯದಿಂದ ತುಂಬಾನೇ ಶುದ್ಧವಾಗಿರುತ್ತಾರೆ.

ನೀಲಿ ಕಣ್ಣು ನೀಲಿ ಕಣ್ಣಿನ ಅವರು ತಮ್ಮೊಂದಿಗೆ ಎಂತಹ ಕಠಿಣ ರು ಬಂದರು ಕೂಡ ಅವರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಇವರಿಗೆ ಅಸಾಧ್ಯವಾದ ಕೆಲಸವೇ ಯಾವುದು ಈ ಪ್ರಪಂಚದಲ್ಲಿ ಇಲ್ಲ ಎಂದು ಹೇಳಬಹುದಾಗಿದೆ. ಇವರನ್ನು ಇವರ ಸುತ್ತಮುತ್ತಲಿನ ಜನರು ಸಾಕಷ್ಟು ಇಷ್ಟಪಡುತ್ತಾರೆ ಹಾಗೂ ಇವರು ಜೀವನದಲ್ಲಿ ಸಾಕಷ್ಟು ಉನ್ನತಿಯನ್ನು ಸಾಧಿಸಿ ಎತ್ತರದ ಮಟ್ಟಕ್ಕೆ ಹೋಗುತ್ತಾರೆ.

ಕಪ್ಪು ಕಣ್ಣು ಸರ್ವೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುವುದು ಕಪ್ಪು ಕಣ್ಣು ಎಂದು ಹೇಳಬಹುದಾಗಿದೆ. ಇವರು ಯಾವಾಗಲೂ ಸದಾ ಮೋಸದಿಂದ ದೂರವಿರುತ್ತಾರೆ ಯಾರನ್ನಾದರೂ ಇವರು ಅಷ್ಟು ಸುಲಭವಾಗಿ ನಂಬುವುದಿಲ್ಲ. ಇನ್ನು ಈಗ ನಾವು ಹೇಳಿರುವ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.