ಹಲವು ಗಾಯಕರಿಗೆ ಗುರುವಾಗಿರುವ ನಾದ ಬ್ರಹ್ಮ ಹಂಸಲೇಖ ಅವರ ಗುರು ಯಾರು ಗೊತ್ತಾ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶನ ಎಂಬ ವಿಷಯ ಬಂದರೆ ನಮ್ಮ ಕಣ್ಣ ಮುಂದೆ ಬರುವುದೇ ನಾದ ಬ್ರಹ್ಮ ಹಂಸಲೇಖ ಅವರು. ಸರಿಗಮಪ ಕಾರ್ಯಕ್ರಮದ ಗೌರವ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಇವರ ಮಾರ್ಗದರ್ಶನದಲ್ಲಿ ಸಂಗೀತ ಕಲಿಯುತ್ತಿರುವವರು ಅದೆಷ್ಟೋ!

ಸಂಗೀತ ಮಾಂತ್ರಿಕ, ಹಂಸಲೇಖ ಅವರು, ಆಧ್ಯಾತ್ಮದ ಹಾಡುಗಳನ್ನು ಬರೆಯುವುದಕ್ಕೂ ಸೈ, ಪ್ರೇಮಲೋಕದಲ್ಲಿ ಗಾಯನ ಪ್ರೀಯರನ್ನೂ ತೇಲಿಸುವುದಕ್ಕಾದರೂ ಸೈ ಕನ್ನಡದಲ್ಲಿ ಅದೆಷ್ಟು ಚಿತ್ರಗಳಿಗೆ ಸಾಂಗೀತದ ಸುಧೆ ನೀಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಹಂಸಲೇಖ ಅವರ ಸಾಧನೆಯ ಬಗ್ಗೆ ಹೇಳುವುದಾದರೆ ದಿನಗಳೇ ಸಾಲದು. ಅವರ ಈ ಶಬ್ದ ಬಂಡಾರಕ್ಕೆ, ಸಾಹಿತ್ಯ ವಿದ್ವತ್ತಿಗೆ ಬೆನ್ನೆಲುಬಾಗಿದ್ದವರು ಅವರ ಗುರು! ಯಾರು ಗೊತ್ತಾ?

ಕೊರ ಸಿತಾರಾಮ್ ಶಾಸ್ತ್ರಿ. ಕನ್ನಡ ಚಿತ್ರರಂಗದ ದಿನಗಳನ್ನು ನೆನೆಯುವಾಗ ಸಾಹಿತ್ಯ ವಿದ್ವಾಂಸ ಸೀತಾರಾಮ್ ಶಾಸ್ತ್ರಿಯವರು ನೆನಪಾಗದೇ ಇರಲು ಸಾಧ್ಯವೇ ಇಲ್ಲ. ಸೀತಾರಾಮ ಶಾಸ್ತ್ರಿಯವರ ಸಾಹಿತ್ಯ ವಿದ್ವತ್ತು ಅದೆಷ್ಟರ ಮಟ್ಟಿಗೆ ಇದೆ ಎಂದರೆ ಒಂದು ಕಾಲದಲ್ಲಿ ಅವರ ಸಾಹಿತ್ಯವಿಲ್ಲದೆ ಯಾವ ಚಿತ್ರಗಳೂ ಹಾಡುಗಳನ್ನು ಕಾಣುತ್ತಿರಲಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಇನ್ನು ಅವರ ಸಾಹಿತ್ಯ ಶಕ್ತಿಯ ಬಗ್ಗೆ ತಿಳಿದು ಕೊಳ್ಳಬೇಕೆಂದರೆ, ಭೂಕೈಲಾಸ ಚಿತ್ರದ ’ರಾಮನ ಅವತಾರ ರಘುಕುಲ ಸೋಮನ ಅವತಾರ’, ಅಥವಾ ಕಲ್ಪವೃಕ್ಷ ಚಿತ್ರದ ’ಜಯತೆ ಜಯತೆ ಸತ್ಯಮೇವ ಜಯತೆ’ ಮೊದಲಾದ ಹಾಡುಗಳೇ ಸಾಕ್ಷಿ.

ಇನ್ನು ಹಂಸಲೇಖ ಒಮ್ಮೆ ಸೀತಾರಾಮ ಶಾಸ್ತ್ರಿಯವರನ್ನು ಬೇಟಿಯಾದ ಸಂದರ್ಭ. ಆಗ ಹಂಸಲೇಖ ಬರೆದ ಹಾಡೊಂದನ್ನು ಕೇಳಿ ಇಂಥ ವೈರಾಗ್ಯದ ಹಾಡು ಇಷ್ಟು ಚಿಕ್ಕ ವಯಸ್ಸಿನಲ್ಲಿ ಯಾಕೆ ಎಂಬ ಪ್ರಶ್ನೆಗೆ ಹಂಸಲೇಖ ಅಗತ್ಯಕ್ಕೆ ತಕ್ಕ ಹಾಗೆ ಸಾಹಿತ್ಯ ರಚಿಸಿರುವುದಾಗಿ ಹೇಳುತ್ತಾರೆ. ಹೀಗೆ ಪ್ರತಿ ಹಂತದಲ್ಲೂ ಹಂಸಲೇಖ ಅವರನ್ನು ತಿದ್ದುತ್ತಾ ಬಂದ ಸೀತಾರಾಮ ಶಾಸ್ತ್ರಿಯವರು ಹಂಸಲೇಖ ಅವರ ಗುರು ಎಂದೇ ಹೇಳಬಹುದು.

Get real time updates directly on you device, subscribe now.