ವಿಶಾಖಪಟ್ಟಣಂ ಗ್ಯಾಸ್ ಲಿಕ್ ಘಟನೆಯಲ್ಲಿ ಸಾವಿರಾರು ಜನರ ಪ್ರಾಣ ಉಳಿಸಿದ ಮೊಬೈಲ್ ಗೇಮ್ ಪಬ್ಜಿ ! ಹೇಗೆ ಗೊತ್ತೆ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿಗಿನ ದಿನಗಳಲ್ಲಿ ಯುವಕರು ಎಲ್ಲಿ ನೋಡಿದರೂ ವಿಡಿಯೋ ಗೇಮ್ ಗಳಲ್ಲಿ ನಿರತರಾಗಿರುತ್ತಾರೆ. ಆಂಡ್ರಾಯ್ಡ್ ಫೋನ್ ನಲ್ಲಿ ಸಾಕಷ್ಟು ಉಚಿತ ಗೇಮ್ಗಳು ಸಿಗುವ ಕಾರಣ ಯುವಕರು ಹೆಚ್ಚಿನ ಸಮಯವನ್ನು ಮೊಬೈಲ್ನಲ್ಲಿ ಕಳೆಯುತ್ತಿದ್ದಾರೆ. ಆದರೆ ಇವರನ್ನು ಕಂಡ ಪ್ರೇಕ್ಷಕರು ಮೊಬೈಲ್ನಲ್ಲಿ ಆಟವಾಡ ಬೇಡ ಎಂದು ಬುದ್ಧಿ ಹೇಳುವುದೆ ಹೆಚ್ಚು. ಅದರಲ್ಲಿಯೂ ಕೆಲವು ದಿನಗಳ ಹಿಂದೆ ದೇಶದಿಂದ ಹೊರಹಾಕಲ್ಪಟ್ಟ ಇರುವ ಪಬ್ಜಿ ಗೇಮ್ ಅನು ಪೋಷಕರು ಆಡಬೇಡ ಎಂದು ಯುವಕರಿಗೆ ಸಾಕಷ್ಟು ಬಾರಿ ಬುದ್ಧಿ ಹೇಳಿದ್ದನ್ನು ನೀವು ಕೇಳಿರುತ್ತೀರಿ.

ಆದರೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಕಳೆದ ತೆಲುಗು ತಿಂಗಳುಗಳ ಹಿಂದೆ ನಡೆದ ಗ್ಯಾಸ್ ಲೀಕ್ ಕಹಿ ಘಟನೆ ಯಲ್ಲಿ ಒಬ್ಬ ಪಬ್ಜಿ ಗೇಮ್ ಆಡುವ ಯುವಕ ಸಾವಿರಾರು ಜನರ ಪ್ರಾಣ ಉಳಿಸಿದ್ದಾನೆ ಹಾಗೂ ಪಬ್ಜಿ ಗೇಮ್ ನಿಂದ ಪ್ರಾಣ ಉಳಿದಿದೆ ಎಂದರೆ ತಪ್ಪಾಗಲಾರದು. ಹೌದು ಸ್ನೇಹಿತರೆ ಅದು ಹೇಗೆ ಎಂಬುದನ್ನು ನಾವು ನೋಡುವುದಾದರೆ ಕಂಪನಿಯ ಪಕ್ಕದ ಒಂದು ಗ್ರಾಮದಲ್ಲಿ ಪ್ರತಿ ದಿನದಂತೆ ಸುರೇಶ್ ಎಂಬಾತ ತನ್ನ ಸ್ನೇಹಿತರ ಜೊತೆ ರಾತ್ರಿ 2ಗಂಟೆಯಲ್ಲಿ ಪಬ್ಜಿ ಆಡುತ್ತಿದ್ದನು.

ಇದೇ ಸಂದರ್ಭದಲ್ಲಿ ಗ್ಯಾಸ್ ಲೀಕ್ ಆಗುತ್ತದೆ, ಕೆಲವೇ ನಿಮಿಷಗಳಲ್ಲಿ ಗ್ಯಾಸ್ ಇಡೀ ಗ್ರಾಮವನ್ನು ಆವರಿಸಿತು, ಈತ ಎಚ್ಚರವಾಗಿದ್ದ ಕಾರಣ ಕೂಡಲೇ ವಿಷಯ ತಿಳಿದು ವಾಸನೆ ಏನು ಎಂದು ಕಂಡು ಹಿಡಿದು ಕೊಂಡನು. ಕಂಗಾಲಾಗದೆ ಪೊಲೀಸರಿಗೆ ವಿಷಯ ಮುಟ್ಟಿಸಿ ಅಕ್ಕ ಪಕ್ಕದ ಮನೆ ಸೇರಿ ಇಡೀ ಗ್ರಾಮದ ಪೂರ್ತಿ ಓಡಾಡಿ ಗ್ರಾಮಸ್ಥರನ್ನು ಎಚ್ಚರಗೊಳಿಸುವ ಕೆಲಸ ಮಾಡಿದ್ದಾನೆ. ಈತನು ವಿಷಯ ತಿಳಿದ ತಕ್ಷಣ ದೂರ ಓಡಿ ಹೋಗದೆ ಇಡೀ ಗ್ರಾಮದ ಜನರನ್ನು ಎಚ್ಚರಿಸಿ ಸಾವಿರಾರು ಪ್ರಾಣವನ್ನು ಉಳಿಸಿದ್ದಾನೆ. ಈತ ಹೇಗೆ ಉಳಿಸಿದನು ಎಂಬುದು ಮುಖ್ಯವಾಗದೆ ಇದ್ದರೂ ಸಾಧ್ಯವಾದಷ್ಟು ಜನರನ್ನು ಎಚ್ಚರಗೊಳಿಸಿ ಪ್ರಾಣ ಉಳಿಸಿದ ಸುರೇಶ್ ರವರು ನಿಜಜೀವನದ ಹೀರೋ ಎಂದರೆ ತಪ್ಪಾಗಲಾರದು.

Get real time updates directly on you device, subscribe now.