ಸೆಲ್ಫಿ ಗಾಗಿ ಇಹಲೋಕ ತ್ಯಜಿಸಿದ 12 ರ ಬಾಲಕಿ ಅಷ್ಟಕ್ಕೂ ನಡೆದದ್ದೇನು ಗೊತ್ತೇ??

1

Get real time updates directly on you device, subscribe now.

ಇತ್ತೀಚಿಗೆ ಸೆಲ್ಫಿ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಿದೆ, ಸೆಲ್ಫಿ ತೆಗೆದುಕೊಳ್ಳಲಿ ತಪ್ಪಿಲ್ಲ, ಆದರೆ ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟು ಸೆಲ್ಫಿ ತೆಗೆದುಕೊಳ್ಳುವ ಮಟ್ಟಕ್ಕೆ ಯುವ ಜನತೆ ಮುಂದಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಇದೀಗ ಅದೇ ರೀತಿಯ ಘಟನೆ ಮತ್ತೊಂದು ನಡೆದಿದ್ದು, ಕೊನೆಗೆ ಪ್ರಾಣ ಪಕ್ಷಿ ಹಾರಿ ಹೋಗುವ ಮೂಲಕ ಸೆಲ್ಫಿ ಘಟನೆ ಮುಗಿದುಹೋಗಿದೆ. ಹೌದು, ಇತ್ತೀಚಿಗೆ ದಿನೇ ದಿನೇ ಸೆಲ್ಫಿ ಕಾರಣಕ್ಕಾಗಿ ಪ್ರಾಣ ಕಳೆದುಕೊಳ್ಳುತ್ತಿರುವ ಅನೇಕ ಸುದ್ದಿಗಳನ್ನು ನಾವು ಕೇಳುತ್ತಿದ್ದೇವೆ. ಆದರೆ ಈ ಸುದ್ದಿ ಕೇಳಿದರೆ ಎಂತವರಿಗಾದರೂ ಆಶ್ಚರ್ಯ ವಾಗುತ್ತದೆ.

ಇಷ್ಟು ದಿವಸ ಉತ್ತಮ ಸೆಲ್ಫಿ ಪಡೆಯಲು ಬೆಟ್ಟದ ತುದಿ, ನದಿಯ ದಡ, ಬೈಕ್ ಮೇಲೆ ಕಾರ್ ಮೇಲೆ ಎಲ್ಲೆಂದರಲ್ಲಿ ಫೋಸ್ ನೀಡಲು ಹೋಗಿ ಇಕ್ಕಟ್ಟಿಗೆ ಸಿಲುಕಿತ್ತಿದ್ದರು. ಆದರೆ ಇಲ್ಲೊಬ್ಬಳ್ಳಿ ಬಾಲಕಿ, ನೇ’ಣು ಹಾಕಿಕೊಂಡಂತೆ ಕಾಣುವ ರೀತಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಾಲಕಿಯೊಬ್ಬಳು ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾಳೆ. ಮಧ್ಯಪ್ರದೇಶದ ಇಂದೋರ್ ವೈಷ್ಣೋದೇವಿ ನಗರದಲ್ಲಿ ನಡೆದಿದೆ.

12 ವರ್ಷದ ಬಾಲಕಿ ಮನೆಯಲ್ಲಿ ತಂದೆ ಇರುವಾಗ ಅವರ ಮೊಬೈಲ್ ತೆಗೆದುಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು, ಇದ್ದಕ್ಕಿದ್ದ ಹಾಗೆ ರೂಮಿಗೆ ಹೋಗಿ ಹಗ್ಗ ಬಿಗಿದು ಫೋಟೋ ತೆಗೆದುಕೊಳ್ಳೋಣ ಎನ್ನುವ ಆಲೋಚನೆ ಮಾಡಿ ರೂಮಿಗೆ ಹೋಗಿದ್ದಾಳೆ. ಅಂತೆಯೇ ಕುರ್ಚಿ ಮೇಲೆ ನಿಂತು ಹಗ್ಗವನ್ನು ಕತ್ತಿಗೆ ಹಾಕಿಕೊಂಡು ಸೆಲ್ಫಿ ತೆಗೆದುಕೊಂಡಿದ್ದಾಳೆ. ಸೆಲ್ಫಿಯೇ ಏನೋ ಚೆನ್ನಾಗಿ ಬಂತು ಎಂದು ನಂತರ ಕುರ್ಚಿಯಿಂದ ಇಳಿಯಲು ಹೊರಟಾಗ ಕಾಲು ಜಾರಿ ಕುರ್ಚಿ ಕೆಳಗೆ ಬಿದ್ದಿದೆ. ಆಗ ಬಾಲಕಿಯ ಕುತ್ತಿಗೆಯಲ್ಲಿದ್ದ ಹಗ್ಗದ ಕುಣಿಕೆ ಸಿಕ್ಕಿ ಉಸಿರು ನಿಂತು ಹೋಗಿದೆ.

ಸುಮಾರು ಸಮಯವಾದರೂ ಬಾಲಕಿ ರೂಮಿನಿಂದ ಹೊರಗೆ ಬರದ ಕಾರಣ ತಂದೆ ರೂಮಿಗೆ ಹೋದಾಗ ಅಲ್ಲಿ ಮಗಳನ್ನು ಕಂಡು ತಂದೆ ಶಾಕ್ ಗೆ ಒಳಗಾಡಿದ್ದಾರೆ. ಮಗಳು ಹಗ್ಗದಲ್ಲಿ ನೇತಾಡುತ್ತಿರುವುದು ಕಂಡಿದ್ದಾರೆ. ನೆರೆಹೊರೆಯವರ ಸಹಾಯದಿಂದ ಬಾಲಕಿಯನ್ನು ಕೆಳಕ್ಕೆ ಇಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯ ದೇ’ಹವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.

Get real time updates directly on you device, subscribe now.