65 ವರ್ಷದ ಮುದುಕನನ್ನು ಪ್ರೀತಿಸಿ ಮದುವೆಯಾಗು ಎಂದು ಪಟ್ಟು ಹಿಡಿದಳು, ತಾತನಿಗೆ ಇಷ್ಟವಿಲ್ಲದೆ ಅವಳನ್ನು ಏನು ಮಾಡಿದ ಗೊತ್ತಾ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪ್ರೀತಿಯನ್ನು ಅದು ಸಮಾನ ವಯಸ್ಕರು ಹಾಗೂ ಸಮಾನ ಮನಸ್ಕರ ನಡುವೆ ನಡೆಯುವಂತಹ ಕ್ರಿಯೆ. ಆದರೆ ಅದು ಸಮತೋಲವನ್ನು ಕಳೆದುಕೊಂಡು ನಡೆಯಿತು ಎಂದರೆ ಖಂಡಿತವಾಗಿ ಅಲ್ಲಿ ಏನಾದರೂ ತಪ್ಪು ಎಂದು ಅರ್ಥ. ಇನ್ನು ಇಂದೂ ನಾನು ಹೇಳಹೊರಟಿರುವ ಕಥೆಯಲ್ಲಿ ಕೂಡ ವಿಚಿತ್ರವಾದ ಲವ್ ಸ್ಟೋರಿ ಇದೆ ಸ್ನೇಹಿತರೆ ಅದರ ಕುರಿತಂತೆ ವಿವರವಾಗಿ ಹೇಳುತ್ತೇನೆ ತಪ್ಪದೆ ಕೊನೆಯವರೆಗೂ ಓದಿ. ಹೌದು ಸ್ನೇಹಿತರೆ ಟ್ವಿಂಕಲ್ ಎಂಬಾಕೆ ಸಾಮಾಜಿಕ ಹಾಗೂ ರಾಜಕೀಯವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದವಳು.

ಇವಳಿಗೆ ಒಮ್ಮೆ 65 ವರ್ಷದ ಜಗದೀಶ್ ಎಂಬಾತ ಸಿಗುತ್ತಾನೆ. ಹೌದು ಸರ್ ಜಗದೀಶ್ ಬಿಜೆಪಿವನಾಗಿದ್ದ ಟ್ವಿಂಕಲ್ ಕಾಂಗ್ರೆಸ್ನವರಾಗಿದ್ದಳು. ಜಗದೀಶ್ ಗೆ ಟ್ವಿಂಕಲ್ ಳನ್ನು ಮೊದಲ ಬಾರಿಗೆ ನೋಡುತ್ತಿದ್ದಂತೆ ಅವಳ ಮೇಲೆ ಮೋಹ ಉಂಟಾಗಿ ಆಕೆಯ ನಂಬರನ್ನು ತೆಗೆದುಕೊಂಡು ತನ್ನ ನಂಬರನ್ನು ಕೂಡ ಆಕೆಗೆ ನೀಡುತ್ತಾನೆ. ಏನಾದರೂ ಸಹಾಯ ಬೇಕಿದ್ದರೆ ನನಗೆ ತಿಳಿಸಿ ಎಂಬುದಾಗಿ ಕೂಡ ಹೇಳುತ್ತಾನೆ. ಆದರೆ ಆಕೆ ಆತನಿಗೆ ಕರೆ ಮಾಡುವುದಿಲ್ಲ. ಇನ್ನೊಮ್ಮೆ ಆಕೆಯನ್ನು ಕೆಲಸದ ಕಾರಣಕ್ಕಾಗಿ ತನ್ನ ಫಾರ್ಮ್ ಹೌಸ್ ಗೆ ಕರೆಸಿಕೊಳ್ಳುತ್ತಾನೆ.

ಆಗ ಜಗದೀಶ್ ತನ್ನ ಮನದ ಇಂಗಿತವನ್ನು ಆಕೆಗೆ ತಿಳಿಸುತ್ತಾನೆ ಅವಳು ಕೂಡ ಅದಿಕ್ಕೆ ಒಪ್ಪಿಕೊಳ್ಳುತ್ತಾಳೆ. ಇನ್ನು ಇವರಿಬ್ಬರ ಸರಸ-ಸಲ್ಲಾಪ ಜಗದೀಶನ ಸಹಚರರಿಂದ ಆಗಿ ಮನೆಯಲ್ಲಿ ತಿಳಿಯುತ್ತದೆ. ಆಗ ಮನೆಯಲ್ಲಿ ಹೆಂಡತಿ ಮಕ್ಕಳು ಮೊಮ್ಮಕ್ಕಳು ಎಲ್ಲರೂ ಕೂಡ ಜಗದೀಶ್ ಗೆ ಬೇಡ ಎನ್ನುತ್ತಾರೆ. ಆದರೆ ಇತ್ತ ಜಗದೀಶ್ ಟ್ವಿಂಕಲ್ ಳನ್ನು ಮದುವೆಯಾಗುವ ಅಷ್ಟೊಂದು ಮಟ್ಟಕ್ಕೆ ಹಚ್ಚಿಕೊಂಡಿರುತ್ತಾರೆ. ಆದರೆ ಕೆಲವು ತಿಂಗಳುಗಳ ನಂತರ ಜಗದೀಶ್ ಗೆ ಟ್ವಿಂಕಲ್ ಮೇಲೆ ಆಸಕ್ತಿ ಕಡಿಮೆಯಾಗಿ ಮಕ್ಕಳು ಹೇಳಿದ್ದು ಸರಿ ಎಂದು ಅನಿಸುತ್ತದೆ.

ಆದರೆ ಅದಾಗಲೇ ಟ್ವಿಂಕಲ್ ಜಗದೀಶನ ಹೆಸರನ್ನು ತನ್ನ ಕೈಯ ಮೇಲೆ ಪರಮನೆಂಟ್ ಟ್ಯಾಟೂ ಆಗಿ ಹಾಕಿಸಿಕೊಂಡಿದ್ದಳು. ಇದನ್ನು ಕಂಡು ಜಗದೀಶ್ ಇದರಿಂದಾಗಿ ನನ್ನ ಮರ್ಯಾದೆ ಹೋಗುತ್ತದೆ ಯಾಕೆ ಹೀಗೆ ಮಾಡುತ್ತಿಯಾ ಎಂಬುದಾಗಿ ಹೇಳುತ್ತಾರೆ. ಇದಕ್ಕೆ ಟ್ವಿಂಕಲ್ ನಾನು ಕೂಡ ನಿನ್ನಂತಹ ಮುದುಕನ ಜೊತೆಗೆ ಓಡಾಡುತ್ತಿದ್ದೇನೆ ನನ್ನ ಭವಿಷ್ಯ ಏನಾಗಬೇಕು ಎಂಬುದಾಗಿ ಮರುಪ್ರಶ್ನೆ ಹಾಕುತ್ತಾರೆ.

ಈ ಕುರಿತಂತೆ ಎರಡು ಕುಟುಂಬದಿಂದ ಪರಸ್ಪರ ದೂರುಗಳನ್ನು ಕೂಡ ದಾಖಲು ಮಾಡಲಾಗುತ್ತದೆ. ಇದೇ ಹೊತ್ತಿಗೆ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಟ್ವಿಂಕಲ್ ಜಗದೀಶ್ ಕುರಿತಂತೆ ಫೋಟೋಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದ್ದಾರೆ. ಇದನ್ನು ಕಂಡ ಜಗದೀಶ್ ರವರ ಮಕ್ಕಳು ಸೈಲೆಂಟಾಗಿ ಟ್ವಿಂಕಲ್ ಳನ್ನು ಮುಗಿಸಬೇಕೆಂಬ ನಿರ್ಧಾರ ಮಾಡುತ್ತಾರೆ. ಆಕೆಯನ್ನು ಮನೆಗೆ ಕರೆಸಿಕೊಂಡು ಮುಗಿಸಿ ಆಕೆ ದೇಹವನ್ನು ಡ್ರೈನೇಜ್ ಗೆ ಎಸೆದು ಬರುತ್ತಾರೆ. ನಂತರ ಯಾರಿಗೂ ಡಟ್ ಬರಬಾರದೆಂದು ದೃಶ್ಯ ಸಿನಿಮಾ ಮಾದರಿಯಲ್ಲಿ ಮುನ್ಸಿಪಾಲಿಟಿ ಅವರಿಗೆ ಮನೆಯಲ್ಲಿ ನಾಯಿ ಹೋಗಿದೆಯೆಂದು ಅದನ್ನು ವಿಲೇವಾರಿ ಮಾಡಿ ಬರಬೇಕು ಎಂಬುದಾಗಿ ಫೋನ್ ಮಾಡಿ ತಿಳಿಸುತ್ತಾರೆ.

ಇದಾದ ನಂತರ ಹಲವಾರು ಸಮಯಗಳ ಕಾಲ ಟ್ವಿಂಕಲ್ ಮನೆಯವರು ಹಾಗೂ ಜಗದೀಶ್ ಮನೆಯವರ ಮೇಲೆ ಪೊಲೀಸರು ತನಿಖೆ ನಡೆಸುತ್ತಾರೆ. ಆದರೆ ಮೊದಲಿಗೆ ಯಾವ ಸುಳಿವು ಕೂಡ ಇರುವುದಿಲ್ಲ. ನಂತರ ಜಗದೀಶನ ಡ್ರೈವರ್ ಈ ಕುರಿತಂತೆ ಬಾಯಿ ಬಿಡುತ್ತಾನೆ. ಆಧಾರದ ಮೇರೆಗೆ ಜಗದೀಶ್ ಹಾಗೂ ಆತನ ಪುತ್ರರನ್ನು ಪೊಲೀಸರು ಬಂಧಿಸಿ ವಿಚಾರಿಸಿ ಸತ್ಯವನ್ನು ಹೊರಬಿಡುವಂತೆ ಮಾಡುತ್ತಾರೆ. ಈ ಪ್ರಕರಣದಲ್ಲಿ ಯಾರ ತಪ್ಪು ಯಾವುದು ನ್ಯಾಯ ಎಂಬುದು ಹೇಳಲು ಕಷ್ಟವಾಗಿರಬಹುದು ಆದರೆ ವೃತಕಾರಣ ಟ್ವಿಂಕಲ್ ಎಂಬ 23 ವರ್ಷದ ಹುಡುಗಿಯ ಜೀವನ ಮುಕ್ತಾಯವಾಯಿತು ಎಂದು ಹೇಳಬಹುದು.

Get real time updates directly on you device, subscribe now.