ಕೊಹ್ಲಿ ವಿರುದ್ಧ ದೂರು ನೀಡಿದ ಭಾರತದ ಆಟಗಾರ ಯಾರು ಗೊತ್ತೇ?? ನಾಯಕನಾಗಿ ರಾಜೀನಾಮೆ ನೀಡಲು ಇದೇ ಬೇಸರವೇ ಕಾರಣವಾಯ್ತಾ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಒಗ್ಗಟ್ಟಿಗೆ ರೂಪಕವಾಗಿದ್ದ ಟೀಮ್ ಇಂಡಿಯಾದಲ್ಲಿ ಈಗ ಎಲ್ಲವೂ ಸರಿಯಿಲ್ಲ ಎಂಬುದು ತಿಳಿಯುತ್ತಿದೆ. ಹದಿನೈದು ದಿನದೊಳಗೆ ನಾಯಕ ವಿರಾಟ್ ಕೊಹ್ಲಿ ವಿಶ್ವಕಪ್ ನಂತರ ಟಿ 20 ತಂಡದ ನಾಯಕತ್ವವನ್ನ ತೊರೆಯಲಿದ್ದೇನೆ ಎಂದು ಧೀಡೀರ್ ಎಂದು ಘೋಷಿಸಿದರು. ಅದನ್ನ ವಿಶ್ವಕಪ್ ಟೂರ್ನಿ ಮುಗಿದ ನಂತರವೇ ಹೇಳಬಹುದಿತ್ತು. ಆದರೇ ಕೊಹ್ಲಿ ಆತುರಾತುರವಾಗಿ ಈ ನಿರ್ಣಯವನ್ನು ಕೈಗೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ಬಗ್ಗೆ ಕೂಲಂಕುಷವಾಗಿ ವಿಚಾರಿಸಿದಾಗ ಒಂದೊಂದೇ ಅಂಶಗಳು ಹೊರಬರುತ್ತಿವೆ.

ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ವಿರುದ್ದ ಭಾರತ ತಂಡದ ಹಿರಿಯ ಆಟಗಾರನೊಬ್ಬ ಬಿಸಿಸಿಐ ಮುಖ್ಯಸ್ಥರಿಗೆ ದೂರು ಸಲ್ಲಿಸಿದ್ದಾನೆ ಎಂಬ ಮಾಹಿತಿ ಈಗ ಬಂದಿದೆ. ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಭಾರತೀಯ ಕ್ರಿಕೇಟ್ ತಂಡದ ನಾಯಕತ್ವ ಇನ್ಮುಂದೆ ಹಂಚಿಕೆಯಾಗಲಿದೆ. ಟೆಸ್ಟ್,ಏಕದಿನ,ಟಿ20 ಹೀಗೆ ಮೂರು ಮಾದರಿಗಳಿಗೆ ಒಬ್ಬೊಬ್ಬ ನಾಯಕ ಇರುತ್ತಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಬರತೊಡಗಿದವು. ಆದರೇ ಅಂತಹ ಯಾವುದೇ ಪ್ರಸ್ತಾಪ ನಮ್ಮ ಬಳಿ ಇಲ್ಲ ಎಂದು ಬಿಸಿಸಿಐ ಮಾಧ್ಯಮ ಹೇಳಿಕೆ ಮೂಲಕ ಸ್ಪಷ್ಠಪಡಿಸಿತ್ತು. ಅದಾದ ಮರುದಿನವೇ ಕೊಹ್ಲಿ ವಿಶ್ವಕಪ್ ನಂತರ ರಾಜೀನಾಮೆ ನೀಡುವ ಬಗ್ಗೆ ಘೋಷಿಸಿದ್ದರು. ಇದು ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆ.

ಇದಾದ ಬೆನ್ನಲ್ಲೇ ಕೊಹ್ಲಿ ವಿರುದ್ದ ದೂರು ನೀಡಿದ ಹಿರಿಯ ಆಟಗಾರ ಆರ್.ಅಶ್ವಿನ್ ಇರಬಹುದಾ ಎಂಬ ಗುಸುಗುಸು ಕೇಳಿ ಬರುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯದಲ್ಲಿ ಆರ್.ಅಶ್ವಿನ್ ಪ್ರದರ್ಶನದ ವಿರುದ್ದ ಕೊಹ್ಲಿ ಕೆಂಡಾಮಂಡಲವಾಗಿದ್ದರಂತೆ. ಈ ಕಾರಣಕ್ಕೆ ಆರ್.ಅಶ್ವಿನ್ ರನ್ನ ಇಂಗ್ಲೆಂಡ್ ವಿರುದ್ದ ನಡೆದ ಐದು ಟೆಸ್ಟ್ ಗಳಲ್ಲಿ ಒಂದು ಪಂದ್ಯಕ್ಕೂ ಆಡಿಸಿರಲಿಲ್ಲ. ಸ್ಪಿನ್ ಸ್ನೇಹಿ ಪಿಚ್ ನಲ್ಲಿಯೂ ಸಹ ಜಡೇಜಾರಿಗೆ ಮಣೆ ಹಾಕಿದ್ದರೇ ಹೊರತು ಅಶ್ವಿನ್ ರನ್ನ ಆಡಿಸಿರಲಿಲ್ಲ. ಇದರಿಂದ ಮನನೊಂದು ನಾಯಕನ ನಿರ್ಣಯದ ವಿರುದ್ದ ಅಶ್ವಿನ್ ದೂರು ನೀಡಿರುವ ಸಾಧ್ಯತೆಯಿದೆ.

ವಿರಾಟ್ ನಾಯಕನಾದ ನಂತರ ಭಾರತ ಹಲವಾರು ಐಸಿಸಿ ಟ್ರೋಫಿಗಳ ಫೈನಲ್ ತಲುಪಿದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. ಇದು ಬಿಸಿಸಿಐನ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೇ ಇದೆಲ್ಲವುದರ ಮಧ್ಯೆ ಈಗ ಟೀಮ್ ಇಂಡಿಯಾದಲ್ಲಿ ನಡೆಯಬಾರದ ಬೆಳವಣಿಗೆ ನಡೆದಿದೆ. ಆದರೇ ಇದೆಲ್ಲವನ್ನ ಮರೆತು ಭಾರತದ ಆಟಗಾರರು ವಿಶ್ವ ಟಿ 20 ಕಪ್ ನಲ್ಲಿ ಆಡಿ, ಭಾರತಕ್ಕೆ 14 ವರ್ಷಗಳ ನಂತರ ಕಪ್ ಗೆಲ್ಲಿಸಿಕೊಡಲಿದ್ದಾರೆಯೇ ಎಂಬುದು ಸದ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.