Kannada News: ಈ ಬಾರಿ ಗಾಂಧಿ ಹಾಗೂ ನೆಹರು ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಚೇತನ್ ಅಹಿಂಸೆ. ಹೇಳಿದ್ದೇನು ಗೊತ್ತೇ??

353

Get real time updates directly on you device, subscribe now.

Kannada News: ನಟ ಚೇತನ್ ಅಹಿಂಸಾ ಅವರು ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಆ ದಿನಗಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ ಸಿನಿಮಾಗಿಂತ ಹೆಚ್ಚಾಗಿ, ಬೇರೆ ರೀತಿಯ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಇತ್ತೀಚೆಗೆ ನಟ ಚೇತನ್ ಅವರು ಕಾಂತಾರ ಸಿನಿಮಾ ಮತ್ತು ಭೂತಕೋಲ ಸಂಸ್ಕೃತಿ ಬಗ್ಗೆ ನೀಡಿದ್ದ ಹೇಳಿಕೆ ಭಾರಿ ವೈರಲ್ ಆಗಿತ್ತು. ಜೊತೆಗೆ ಭಾರತ ಕ್ರಿಕೆಟ್ ತಂಡದಲ್ಲಿ ಮೀಸಲಾತಿ ಇಡಬೇಕು ಎಂದು ಸಹ ಹೇಳಿಕೆ ನೀಡಿದ್ದರು.

ಇದೀಗ ಭಾರತದ ಸ್ವಾತಂತ್ರ್ಯ ಹೋರಾಟಗಾರರಾದ ನೆಹರು ಮತ್ತು ಗಾಂಧಿ ಅವರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. “ಒಂದು ಶತಮಾನದವರೆಗೆ, ಉದಾರವಾದಿ ಮಾಧ್ಯಮಗಳು/ರಾಜಕೀಯ ಪಕ್ಷಗಳು/ಬುದ್ಧಿವಂತರಂತೆ ತಮ್ಮನ್ನು ತಾವು ಪ್ರದರ್ಶಿಸಿಕೊಳ್ಳುವವರು, ಗಾಂಧಿ-ನೆಹರು ಅವರೇ ಭಾರತೀಯ ರಾಷ್ಟ್ರೀಯತೆಯ ಆಧಾರವೆಂದು ಬಿಂಬಿಸಿದ್ದಾರೆ. ಗಾಂಧಿ ಮತ್ತು ನೆಹರು ಜಾತಿ ಮತ್ತು ಬ್ರಾಹ್ಮಣ್ಯವನ್ನು ‘ಭಾರತೀಯ ಸಂಸ್ಕೃತಿ’ಯ ಸಾರವೆಂದು ಬಿಂಬಿಸಿದ್ದರು. ಇದನ್ನು ಓದಿ..

ಸಾವರ್ಕರ್ ಮತ್ತು ಉಪಾಧ್ಯಾಯರನ್ನು ನಾವು ಸಮಾನತಾವಾದಿಗಳು ವಿರೋಧಿಸುವಂತೆ, ಗಾಂಧಿ ಮತ್ತು ನೆಹರೂ ಅವರನ್ನು ಕೂಡ ವಿರೋಧಿಸಬೇಕು..” ಎಂದು ಚೇತನ್ ಅವರು ಟ್ವೀಟ್ ಮಾಡಿದ್ದು, ಇದೀಗ ನೆಟ್ಟಿಗರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಚೇತನ್ ಅವರು ಸುಮ್ಮನಿರದೆ, ಒಂದಲ್ಲ ಒಂದು ವಿಚಾರವನ್ನು ಮೈಮೇಲೆ ಎಳೆದುಕೊಳ್ಳುಟ್ಟಿದ್ದಾರೆ ಎನ್ನುತ್ತಿದ್ದಾರೆ. ಚೇತನ್ ಅವರು ಕೂಡ ಸಿನಿಮಾ ವಿಚಾರದಲ್ಲಿ, ಮತ್ತು ಇನ್ನಿತರ ವಿಚಾರಗಳಲ್ಲಿ ಹೇಳಿಕೆ ನೀಡುತ್ತಿದ್ದರು. ಆದರೆ ಈಗ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಇದನ್ನು ಓದಿ..

Get real time updates directly on you device, subscribe now.