Kannada News: ಎಲ್ಲಾ ನಟಿಯರು ಮತ್ತಿನಲ್ಲಿ ತೆಲಾಡುತ್ತ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದರೇ, ಸಾಯಿ ಪಲ್ಲವಿ ಕಾಣಿಸಿದ್ದು ಎಲ್ಲಿ ಗೊತ್ತೇ??
Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ನ್ಯಾಚುರಲ್ ಬ್ಯೂಟಿ ಎಂದೇ ಹೆಸರು ಮಾಡಿರುವವರು ನಟಿ ಸಾಯಿ ಪಲ್ಲವಿ. ಇವರಿಗೆ ಚಿತ್ರರಂಗದಲ್ಲಿ ಬಹಳ ದೊಡ್ಡ ಫ್ಯಾನ್ ಬೇಸ್ ಇದೆ. ದೊಡ್ಡ ನಟಿ ಆಗಿದ್ದರು ಕೂಡ, ಸ್ಟಾರ್ ಸ್ಟೇಟಸ್ ಇದ್ದರು ಕೂಡ ಸಾಯಿಪಲ್ಲವಿ ಅವರ ಸಿಂಪ್ಲಿಸಿಟಿ ಎಲ್ಲರಿಗೂ ತುಂಬಾ ಇಷ್ಟ ಆಗುತ್ತಿದೆ. ಪ್ರೇಮಂ ಸಿನಿಮಾ ಮೂಲಕ ನಟನೆಯ ಲೋಕಕ್ಕೆ ಬಂದ ಸಾಯಿಪಲ್ಲವಿ ಅವರು ಫಿದಾ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟರು. ಗಾರ್ಗಿ ಸಿನಿಮಾಗೆ ಕನ್ನಡದಲ್ಲಿ ಡಬ್ ಮಾಡುವ ಮೂಲಕ, ಸಾಯಿಪಲ್ಲವಿ ಅವರು ಕನ್ನಡ ಅಭಿಮಾನಿಗಳಿಗೂ ಬಹಳ ಹತ್ತಿರವಾದರು. ಸಾಯಿಪಲ್ಲವಿ ಅವರು ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿ ಇದ್ದರು ನಿಜ ಜೀವನದಲ್ಲಿ ಅವರಿಗೆ ಇರುವ ಸರಳತೆ ಇಂದ ಎಲ್ಲರನ್ನು ಆಶ್ಚರ್ಯ ಪಡಿಸುತ್ತಾ ಇರುತ್ತಾರೆ..
ಈಗಷ್ಟೇ ನ್ಯೂ ಇಯರ್ ಆಚರಣೆ ನಡೆಯಿತು. ಈ ಸಮಯದಲ್ಲಿ ಎಲ್ಲಾ ಸ್ಟಾರ್ ನಟರು ನಟಿಯರು ಹೊರದೇಶಕ್ಕೆ ಹೋಗಿ ಸೆಲೆಬ್ರೇಟ್ ಮಾಡುವುದು, ಸ್ನೇಹಿತರ ಜೊತೆ ಸೇರಿ ಪಾರ್ಟಿ ಮಾಡುವುದು ಮಾಡುತ್ತಾರೆ. ಆದರೆ ಸಾಯಿಪಲ್ಲವಿ ಅವರು ಹೊಸ ವರ್ಷದ ದಿನ ಕಾಣಿಸಿಕೊಂಡಿದ್ದು ಪುಟ್ಟಪರ್ತಿ ಸಾಯಿಬಾಬಾ ದೇವಸ್ಥಾನದಲ್ಲಿ. ಬಹಳ ಸಮಯದ ನಂತರ ಮೀಡಿಯಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ ಸಾಯಿಪಲ್ಲವಿ. ಅದರಲ್ಲೂ ದೇವಸ್ಥಾನದಲ್ಲಿ ಪೂಜೆ ಮಾಡಿಸಿ, ಊಟ ಬಡಿಸುತ್ತಿರುವ ಸಾಯಿಪಲ್ಲವಿ ಅವರ ಫೋಟೋಗಳು ಮತ್ತು ವಿಡಿಯೋಗಳನ್ನು ವೈರಲ್ ಆಗಿದ್ದು, ಇವರ ಸಿಂಪ್ಲಿಸಿಟಿ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಇದನ್ನು ಓದಿ.. Biggboss Kannada: ಇಷ್ಟು ದಿನ ತಾಳ್ಮೆ ಇಂದ ಇದ್ದು, ರನ್ನರ್ ಅಪ್ ಆದ ನಿಜವಾದ ವಿನ್ನರ್ ರಾಕೇಶ್ ಪಡೆದ ಸಂಭಾವನೆ ಎಷ್ಟು ಗೊತ್ತೇ? ಇದು ನಿಜಕ್ಕೂ ಮೋಸ ಎಂದ ಫ್ಯಾನ್ಸ್.

ಹೊಸ ವರ್ಷದ ದಿನ ಸಾಯಿಪಲ್ಲವಿ ಅವರು ಪುಟ್ಟಪರ್ತಿ ಸಾಯಿಬಾಬಾ ಅವರ ಆಶ್ರಮದಲ್ಲಿ ಪೂಜೆ ಸಲ್ಲಿಸಿ ಎಲ್ಲರಲ್ಲು ಅಚ್ಚರಿ ಮೂಡಿಸಿದ್ದಾರೆ. ಸೀರೆ ಉಟ್ಟುಕೊಂಡು ಸಂಪೂರ್ಣ ಸಾಂಪ್ರದಾಯಿಕ ರೀತಿಯಲ್ಲಿ ಸಾಯಿ ಪಲ್ಲವಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಸಾಯಿಪಲ್ಲವಿ ಸಿನಿಮಾ ಮಾತ್ರವಲ್ಲದೆ ಇಂತಹ ಕೆಲಸಗಳ ಮೂಲಕವೂ ತಮ್ಮ ಅಭಿಮಾನಿಗಳ ಪ್ರೀತಿ ಪಡೆಯುತ್ತಿದ್ದಾರೆ. ಸಾಯಿಪಲ್ಲವಿ ಅವರು ತಮ್ಮ ಸರಳತೆಯ ಮೂಲಕ ಸಿನಿಪ್ರಿಯರಿಗೆ ಹತ್ತಿರವಾಗುತ್ತಿದ್ದಾರೆ. ಸಾಯಿಪಲ್ಲವಿ ಅವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕಳೆದ ವರ್ಷ ವಿರಾಟಪರ್ವಂ ಮತ್ತು ಗಾರ್ಗಿ ಚಿತ್ರಗಳ ಮೂಲಕ ಸಾಯಿ ಪಲ್ಲವಿ ತೆರೆಮೇಲೆ ಬಂದಿದ್ದರು. ಈಗ ಮುಂದಿನ ಸಿನಿಮಾ ಯಾವಾಗ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Kannada News: ಸಮಂತಾ ಗೆ ಭರ್ಜರಿ ಶಾಕ್ ಕೊಟ್ಟು: ರಶ್ಮಿಕಾ ರವರನ್ನು ಅಖಾಡಕ್ಕೆ ಇಳಿಸಿದ ನಾಗ ಚೈತನ್ಯ: ರಶ್ಮಿಕಾ – ನಾಗ ಸೇರಿ ಮಾಡುತ್ತಿರುವುದೇನು ಗೊತ್ತೇ??