Kannada News: ಕೊನೆಗೂ ಡೈವೋರ್ಸ್ ವದಂತಿಯೂ ಕುರಿತು ಸ್ಪಷ್ಟನೆ ನೀಡಿದ ನಟಿ ಸ್ನೇಹ: ಗಂಡನಿಗೆ ನೀನು ಪರ್ಫೆಕ್ಟ್ ಅಲ್ಲ ಎಂದು ಬಹಿರಂಗವಾಗಿ ಹೇಳಿದ್ದೇನು ಗೊತ್ತೆ?

58

Get real time updates directly on you device, subscribe now.

Kannada News: ಕಳೆದ ಒಂದೆರಡು ವರ್ಷಗಳಲ್ಲಿ ಚಿತ್ರರಂಗದಲ್ಲಿನ ಹಲವು ಜೋಡಿಗಳು ವಿಚ್ಛೇದನ ಪಡೆದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬಹಳ ಬೇಸರ ತಂದಿತ್ತು. ಆ ಜೋಡಿಗಳ ಸಾಲಿನಲ್ಲಿ ತಮಿಳು ಚಿತ್ರರಂಗದ ಖ್ಯಾತ ನಟಿ ಸ್ನೇಹ ಮತ್ತು ಪ್ರಸನ್ನ ಅವರ ಹೆಸರು ಕೂಡ ಕೇಳಿಬಂದಿತ್ತು. ಈ ಜೋಡಿ ಜೊತೆಯಾಗಿ ಜೀವನ ಮಾಡುತ್ತಿಲ್ಲ, ಶೀಘ್ರದಲ್ಲೇ ವಿಚ್ಛೇದನ ಪಡೆಯುತ್ತಾರೆ ಎನ್ನುವ ವದಂತಿ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು, ಆದರೆ ಇದರ ಬಗ್ಗೆ ನಟಿ ಸ್ನೇಹ ಆಗಲಿ ನಟ ಪ್ರಸನ್ನ ಅವರಾಗಲಿ ಪ್ರತಿಕ್ರಿಯೆ ನೀಡಿರಲಿಲ್ಲ.

ಸ್ನೇಹ ಅವರು ಮತ್ತು ಪ್ರಸನ್ನ ಅವರು ಮೊದಲ ಸಿನಿಮಾದಲ್ಲಿ ಕೆಲಸ ಮಾಡುವಾಗ, ಪರಿಚಯವಾಗಿ, ಅದು ಪ್ರೀತಿಗೆ ತಿರುಗಿ, ಇಬ್ಬರು ಎರಡು ಕುಟುಂಬದವರನ್ನು ಒಪ್ಪಿಸಿ, ಅದ್ಧೂರಿಯಾಗಿ ಮದುವೆಯಾದರು. ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ. ಇಬ್ಬರು ಸಂತೋಷವಾಗಿಯೇ ಇದ್ದಾಗ, ಸ್ನೇಹ ಅವರು ಗಂಡನ ಜೊತೆಗೆ ಇಲ್ಲ, ಬೇರೆಯಾಗಿ ವಾಸ ಮಾಡುತ್ತಿದ್ದಾರೆ. ಗಂಡನಿಗೆ ಶೀಘ್ರದಲ್ಲೇ ವಿಚ್ಚೇದನ ಕೊಡುತ್ತಾರೆ ಎನ್ನುವ ಸುದ್ದಿಯೊಂದು ಭಾರಿ ಸದ್ದು ಮಾಡಿತು. ಆ ಸುದ್ದಿಗಳಿಗೆ ಇಷ್ಟು ದಿನಗಳು ತಲೆಕೆಡಿಸಿಕೊಳ್ಳದೆ ಇದ್ದ ಸ್ನೇಹ ಅವರು ಈಗ ಪ್ರತಿಕ್ರಿಯೆ ನೀಡಿದ್ದಾರೆ.

ಇದೀಗ ಸ್ನೇಹ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ. ಅದರಲ್ಲಿ ಗಂಡನ ಜೊತೆಗೆ ಹೊಸದಾಗಿ ಫೋಟೋಶೂಟ್ ಮಾಡಿಸಿರುವ ಫೋಟೋಗಳನ್ನು ಸ್ನೇಹ ಅವರು ಶೇರ್ ಮಾಡಿದ್ದು, “ನೀನು ಪರ್ಫೆಕ್ಟ್ ಅಂತ ಗೊತ್ತಾಗಿ ನಿನ್ನನ್ನು ಪ್ರೀತಿಸಲು ಶುರು ಮಾಡಿದೆ..ಆದರೆ ನೀನು ಪರ್ಫೆಕ್ಟ್ ಅಲ್ಲ ಅಂತ ಗೊತ್ತಾದಮೇಲೆ ಇನ್ನು ಹೆಚ್ಚಾಗಿ ಪ್ರೀತಿಸಲು ಶುರು ಮಾಡಿದೆ..”ಎಂದು ಬರೆದುಕೊಂಡಿದ್ದಾರೆ. ಈ ಮೂಲಕ, ಸ್ನೇಹ ಅವರು ವಿಚ್ಛೇದನ ಸುದ್ದಿಗೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

Get real time updates directly on you device, subscribe now.