Kannada News: ದಿಡೀರ್ ಎಂದು ಉಸಿರು ನಿಲ್ಲಿಸಿದ ಖ್ಯಾತ ತೆಲುಗು ನಟ ಚಲಪತಿ ರಾವ್: ಪಾಪ ಏನಾಗಿತ್ತು ಗೊತ್ತೇ??
Kannada News: ತೆಲುಗು ಚಿತ್ರರಂಗಕ್ಕೆ ಮೇಲಿಂದ ಮೇಲೆ ಹೊಡೆತ ಬೀಳುತ್ತಲೇ ಇದೆ. ಸರಣಿ ಸಾವುಗಳ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಇತ್ತೀಚೆಗೆ ಹಿರಿಯ ನಟರಾದ ಸೂಪರ್ ಸ್ಟಾರ್ ಕೃಷ್ಣ ಅವರು ಮತ್ತು ಕೃಷ್ಣಮ್ ರಾಜು ಅವರು ನಿಧನರಾದರು. ಬಳಿಕ ಮೊನ್ನೆಯಷ್ಟೇ ಮತ್ತೊಬ್ಬ ಹಿರಿಯನಟ ಕೈಕಾಲ ಸತ್ಯನಾರಾಯಣ ಅವರು ಕೊನೆಯುಸಿರೆಳೆದರು. ಇಂದು ಮತ್ತೊಬ್ಬ ಹಿರಿಯನಟ ಇಹಲೋಕ ತ್ಯಜಿಸಿದ್ದಾರೆ.
ತೆಲುಗಿನಲ್ಲಿ ಪೋಷಕ ಪಾತ್ರಗಳ ಮೂಲಕ ಹೆಚ್ಚಾಗಿ ಗುರುತಿಸಿಕೊಂಡಿದ್ದ ಖ್ಯಾತ ಹಿರಿಯನಟ ಚಲಪತಿ ರಾವ್ ಅವರು ನಿಧನರಾಗಿದ್ದಾರೆ. ಈ ಸುದ್ದಿ ತೆಲುಗು ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿದೆ. 1944ರಲ್ಲಿ ಜನಿಸಿದ ಇವರು ಸೀನಿಯರ್ ಎನ್.ಟಿ.ಆರ್ ಅವರು ಪ್ರೋತ್ಸಾಹ ನೀಡಿದ ಕಾರಣ ಚಿತ್ರರಂಗಕ್ಕೆ ಬಂದರು. 1966 ರಲ್ಲಿ ಗೂಢಾಚಾರಿ 116 ಸಿನಿಮಾ ಮೂಲಕ ನಟನೆ ಶುರು ಮಾಡಿದರು. ಆಗಿನ ದೊಡ್ಡ ಸ್ಟಾರ್ ಗಳಿಂದ ಹಿಡಿದು ಈಗಿನ ಸ್ಟಾರ್ ನಟರ ವರೆಗು ಎಲ್ಲಾ ಕಲಾವಿದರ ಜೊತೆಗೆ ನಟಿಸಿದ್ದಾರೆ. ಇತ್ತೀಚೆಗೆ ಲೆಜೆಂಡ್ ಸಿನಿಮಾದಲ್ಲಿ ನಟಿಸಿದ್ದರು ಚಲಪತಿ ರಾವ್. ಇದನ್ನು ಓದಿ..Kannada News: ಕೊನೆಗೂ ಡೈವೋರ್ಸ್ ವದಂತಿಯೂ ಕುರಿತು ಸ್ಪಷ್ಟನೆ ನೀಡಿದ ನಟಿ ಸ್ನೇಹ: ಗಂಡನಿಗೆ ನೀನು ಪರ್ಫೆಕ್ಟ್ ಅಲ್ಲ ಎಂದು ಬಹಿರಂಗವಾಗಿ ಹೇಳಿದ್ದೇನು ಗೊತ್ತೆ?
ಇಂದು ತಮ್ಮ ಮನೆಯಲ್ಲಿದ್ದಾಗ ಚಲಪತಿ ರಾವ್ ಅವರಿಗೆ ಹೃದಯಾಘಾತ ಆಗಿದೆ ಎಂದು ಮಾಹಿತಿ ಸಿಕ್ಕಿದೆ. ಇಂದು ಮಧ್ಯಾಹ್ನದ ವರೆಗು ಛಲಪತಿ ಅವರ ಅಂತಿಮ ದರ್ಶನಕ್ಕೆ ಅವರ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಫಿಲ್ಮ್ ನಗರ ನಲ್ಲಿ ಮಹಾಪ್ರಸ್ಥಾನದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ಸಿಕ್ಕಿದೆ. ಇವರ ಮಗಳು ಅಮೆರಿಕಾದಲ್ಲಿ ಇರುವುದರಿಂದ, ಅವರು ಬಂದ ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ತೆಲುಗು ಚಿತ್ರರಂಗದ ಅಭಿಮಾನಿಗಳು ಮತ್ತು ಕಲಾವಿದರು ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದನ್ನು ಓದಿ.. Kannada News: ಪ್ಯಾಂಟ್ ಹಾಕಿಕೊಳ್ಳುವುದನ್ನೇ ಮರೆತ ದೀಪ್ತಿ: ಚಿಕ್ಕ ಡ್ರೆಸ್ ನಲ್ಲಿ ತೆಗೆಸಿದ ವಿಡಿಯೋ ನೋಡಿದರೆ ಚಳಿಗಾಲ ಮರೆತು ಹೋಗುತ್ತದೆ.