Kannada News: ವೇಣು ಸ್ವಾಮಿ ಭವಿಷ್ಯನೇ ನಿಜವಾಯ್ತಾ? ನಯನತಾರ ಜೀವನವೇ ಅಲ್ಲೋಲ ಕಲ್ಲೋಲ ಆಗುತ್ತಾ? ಏನಾಗಿದೆ ಗೊತ್ತೇ??

27

Get real time updates directly on you device, subscribe now.

Kannada News: ತೆಲುಗು ಚಿತ್ರರಂಗದಲ್ಲಿ ಸೆಲೆಬ್ರಿಟಿಗಳು, ರಾಜಕಾರಣಿಗಳು ಇವರುಗಳ ಜಾತಕ ನೋಡಿ, ಭವಿಷ್ಯ ಹೇಳಿ ಸುದ್ದಿಯಲ್ಲಿರುತ್ತಾರೆ ವೇಣುಸ್ವಾಮಿ. ಈ ಮೊದಲು ಅವರು ಸೆಲೆಬ್ರಿಟಿಗಳ ಬಗ್ಗೆ ಹೇಳಿರುವ ಭವಿಷ್ಯಗಳು ನಿಜ ಆಗಿರುವುದರಿಂದ ಜನರು ಕೂಡ ಇವರು ಹೇಳುವುದು ನಿಜ ಆಗುತ್ತದೆ ಎಂದು ನಂಬುವುದಕ್ಕೆ ಶುರು ಮಾಡಿದ್ದಾರೆ. ಟಾಲಿವುಡ್ ನ ಸ್ಟಾರ್ ಜೋಡಿ ಸಮಂತಾ ಮತ್ತು ನಾಗಚೈತನ್ಯ ಅವರ ವಿಚ್ಚೇದನದ ಬಗ್ಗೆ ಇವರು ಹೇಳಿದ್ದ ಭವಿಷ್ಯ ನಿಜವಾದ ನಂತರ ವೇಣುಸ್ವಾಮಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಇದೀಗ ಇವರು ಲೇಡಿ ಸೂಪರ್ ಸ್ಟಾರ್ ನಯನತಾರ ಅವರ ಬಗ್ಗೆ ಹೇಳಿರುವ ವಿಚಾರಗಳು ವೈರಲ್ ಆಗುತ್ತಿದೆ. ನಯನತಾರ ಅವರು ಮದುವೆ ಆಗುವುದಿಲ್ಲ, ಒಂದು ವೇಳೆ ಆದರೂ ಮದುವೆ ನಂತರ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತದೆ ಎಂದು ಹೇಳಿದ್ದರು..

ಭಿನ್ನಾಭಿಪ್ರಾಯಗಳಿಂದ ವಿಚ್ಚೇದನ ಕೂಡ ಆಗಬಹುದು ಎಂದು ಕೆಲವು ದಿನಗಳ ಹಿಂದೆ ಹೇಳಿದ್ದರು ವೇಣು ಸ್ವಾಮಿ. ಆದರೆ ನಯನತಾರ ಅವರು 7 ವರ್ಷಗಳು ಡೇಟ್ ಮಾಡಿದ ನಂತರ, ಈ ವರ್ಷ ಜೂನ್ 9ರಂದು ಮದುವೆಯಾದರು. ಮದುವೆ ನಂತರ ಕೆಲವು ವಿವಾದಗಳಿಗೆ ಸಿಕ್ಕಿಕೊಂಡಿದ್ದಾರೆ ನಯನತಾರ. ಇದೀಗ ಡಿಸೆಂಬರ್ 22ರಂದು ನಯನತಾರ ಅವರು ನಟಿಸಿರುವ ಕನೆಕ್ಟ್ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾ ಹಾಲಿವುಡ್ ಸಿನಿಮಾಗಳ ಹಾಗೆ 90 ನಿಮಿಷಗಳ ಹಾರರ್ ಸಿನಿಮಾ ಆಗಿದೆ. ಆದರೆ ಇದು ನಯನತಾರ ಅವರಿಗೆ ಮೈನಸ್ ಆಗುವ ಹಾಗೆ ಕಾಣುತ್ತಿದೆ, ಏಕೆಂದರೆ ಈಗ ಹಾರರ್ ಸಿನಿಮಾಗಳ ಅವಧಿ ಹೆಚ್ಚಾಗಿದೆ. ಇದನ್ನು ಓದಿ..Kannada News: ಹಲವಾರು ದಶಕಗಳಿಂದ ಸಿನಿಮಾ ಮಾಡುತ್ತಿರುವ ಬಾಲಯ್ಯ ಗಳಿಸಿರುವ ಒಟ್ಟು ಆಸ್ತಿ ಮೌಲ್ಯ ಕೇಳಿದರೆ, ಬೆಚ್ಚಿ ಬೆರಗಾಗ್ತೀರಾ.

ಆದರೆ ನಯನತಾರ ಅವರ ಸಿನಿಮಾ ಯಾವುದೇ ಮಧ್ಯಂತರ ಇಲ್ಲದೆ, 90 ನಿಮಿಷಗಳ ಕಾಲ ನಾನ್ ಸ್ಟಾಪ್ ಪ್ರದರ್ಶನವಾಗಲಿದೆ. ಈಗ ಕನೆಕ್ಟ್ ಸಿನಿಮಾ ತಮಿಳುನಾಡಿಗೆ ದೊಡ್ಡ ಸಮಸ್ಯೆಯಾಗಿ ಕಾಣಿಸಿದೆಯಂತೆ. ಲೆಂತ್ ಕಡಿಮೆ, ಬ್ರೇಕ್ ಇಲ್ಲದೇ ಪ್ರೇಕ್ಷಕರ ಮುಂದೆ ಬರಲಿರುವ ಈ ಸಿನಿಮಾದಿಂದ, ಸಿನಿಮಾ ಪ್ರದರ್ಶಕರು ಶಾಕ್ ಆಗಿದ್ದಾರೆ ಎನ್ನಲಾಗಿದೆ. ತಮಿಳುನಾಡಿನ ಥಿಯೇಟರ್ ಮಾಲೀಕರು ಈ ಸಿನಿಮಾ ಬಿಡುಗಡೆ ಮಾಡಿ, ಪ್ರದರ್ಶನ ಮಾಡಲು ಮುಂದಾಗದಿರುವುದು ಹಲವು ಜನರು ಬೆಚ್ಚಿ ಬೀಳುವ ಹಾಗೆ ಮಾಡಿದೆ. ತಮಿಳುನಾಡಿನಲ್ಲಿ ಲೇಡಿ ಸೂಪರ್ ಸ್ಟಾರ್ ಎನ್ನಿಸಿಕೊಂಡಿರುವ ನಯನತಾರಾ ಅವರ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎನ್ನುವ ಕುತೂಹಲ ಈಗ ಶುರುವಾಗಿದೆ. ಇದನ್ನು ಓದಿ..Kannada Astrology: ಈ ಅಕ್ಷರದಿಂದ ಆರಂಭವಾಗುವ ಹೆಸರಿನ ನವರು ಪ್ರೀತಿಯ ಹೆಸರಿನಲ್ಲಿ ಬಾರಿ ಅದೃಷ್ಟ ಹೊಂದಿರುತ್ತಾರೆ. ಯಾರು ಗೊತ್ತೇ??

Get real time updates directly on you device, subscribe now.