Biggboss Kannada: ಬಿಗ್ ಬಾಸ್ ಮನೆಯನ್ನು ಮತ್ತೊಮ್ಮೆ ಶೇಕ್ ಮಾಡಿದ ಅಮೂಲ್ಯ: ಗುರೂಜಿ ಮಾತಿಗೆ ಕೊಟ್ಟ ಠಕ್ಕರ್ ಹೇಗಿತ್ತು ಗೊತ್ತೆ? ಕ್ಯಾಮೆರನಲ್ಲಿ ಕಾಣಿಸದ್ದು ಏನು ಗೊತ್ತೇ?
Kannada News: ಬಿಗ್ ಬಾಸ್ (BBK9) ಮನೆಯಲ್ಲಿ ಈಗ 12ನೇ ವಾರ ನಡೆಯುತ್ತಿದೆ. ಬಿಗ್ ಮನೆಯಲ್ಲಿ ಅಮೂಲ್ಯ (Amulya) ಅವರದ್ದು ಒಂದು ಥರಾ ಹವಾ ಬೇರೆಯದೇ ರೀತಿ ಇದೆ ಎಂದು ಹೇಳಬಹುದು. ಯಾವುದಾದರೂ ಒಂದು ವಿಷಯ ತಮಗೆ ಇಷ್ಟವಾಗದೆ ಹೋದರೆ, ಕಡ್ಡಿ ತುಂಡು ಮಾಡಿದ ಹಾಗೆ, ಖಾರವಾಗಿ ಉತ್ತರ ಕೊಡುತ್ತಾರೆ. ಇದೀಗ ಅದೇ ರೀತಿ ಮತ್ತೊಮ್ಮೆ ಆಗಿದೆ. ಗುರೂಜಿ (Aryavardhan) ಅವರು ರಾಕೇಶ್ (Rakesh Adiga) ಅಮೂಲ್ಯ ವಿಚಾರಕ್ಕೆ ಹೇಳಿದ ಆ ಒಂದು ಮಾತಿಗೆ ಅಮೂಲ್ಯ ಅವರು ಕೋಪಗೊಂಡು ಉತ್ತರ ನೀಡಿ, ಗುರುಜಿ ಬಾಯಿ ಮುಚ್ಚಿಸಿದ್ದಾರೆ..
ಅಷ್ಟಕ್ಕೂ ಆಗಿದ್ದೇನು ಅಂದ್ರೆ, ರಾಕೇಶ್, ಅಮೂಲ್ಯ, ಅನುಪಮಾ (Anupama Gowda) ಮತ್ತು ದಿವ್ಯ (Divya Uruduga) ಲಿವಿಂಗ್ ಏರಿಯಾದಲ್ಲಿ ಕುಳಿತಿರುವಾಗ, ಮಾತು ಶುರು ಮಾಡುವ ಗುರೂಜಿ, ಅಮೂಲ್ಯ ರಾಕೇಶ್ ಇಬ್ಬರು ಯಾವಾಗಲೂ ಕೂತು ಮಾತಾಡ್ತಾನೆ ಇರ್ತೀರಾ, 77 ದಿನ ಆದ್ರು ಇಷ್ಟೊಂದು ಮಾತಾಡೋದು ಏನಿರುತ್ತೆ, ನೀವಿಬ್ರು ನಗೋದು ಇಲ್ಲ, ಸುಮ್ನೆ ಮಾತಾಡ್ತಾನೆ ಇರ್ತೀರಾ ಎಂದು ಹೇಳುತ್ತಾರೆ, ಆಗ ಅಮೂಲ್ಯ ನಮ್ಮ ಹತ್ರ ಮಾತಾಡೋದಕ್ಕೆ ತುಂಬಾ ವಿಷಯ ಇರುತ್ತೆ, ನಾವ್ ನಗೋದಿಲ್ಲ ಅಂತ ನಿಮಗೆ ಯಾರ್ ಹೇಳಿದ್ದು ಎಂದು ಹೇಳೋದಕ್ಕೆ ಶುರು ಮಾಡುತ್ತಾರೆ. ಆದರೆ ಗುರೂಜಿ ಅವರ ಮಾತನ್ನು ಕೇಳಿ ಸುಮ್ಮನಾಗೋದಿಲ್ಲ. ಆಗ ಅಮೂಲ್ಯ ನಿಮಗೆ ಹಾಗಿದ್ರೆ, ಬಂದು ಕೂತ್ಕೊಂಡು ಕೇಳಿಸಿಕೊಳ್ಳಿ, ಆಗ ನಿಮಗೆ ನಾವೇನು ಮಾತಾಡ್ತಾ ಇದ್ದೀವಿ ಅಂತ ಗೊತ್ತಾಗುತ್ತೆ ಎಂದು ಹೇಳುತ್ತಾರೆ ಅಮೂಲ್ಯ. ಇದನ್ನು ಓದಿ..Kannada News: ಬಾಲಿವುಡ್ ನಟಿಯರನ್ನು ಕೂಡ ಮೀರಿಸುವಂತಹ ಶುಭಮ್ ಗಿಲ್ ತಂಗಿ ಹೇಗಿದ್ದಾರೆ ಗೊತ್ತೇ?? ದೇವಲೋಕದ ಅಪ್ಸರೆ ಎಂದ ನೆಟ್ಟಿಗರು.
ಆಗ ಗುರೂಜಿ, ಸಿನಿಮಾ ಚೆನ್ನಾಗಿದೆ ಅಂತ ಯಾರಾದರೂ ಹೇಳಿದ್ರೆ ಬೇಗ ಹೋಗಿ ಟಿಕೆಟ್ ತಗೋಬಹುದು. ಹೊಸ ಹೀರೋ ಸಿನಿಮಾಗೆ ನಾನು ಏನು ಗೊತ್ತಿಲ್ದೆ ಹೇಗ್ ಬೇಗ ಹೋಗಿ ಟಿಕೆಟ್ ತಗೊಳ್ಳಲಿ ಎನ್ನುತ್ತಾರೆ. ಆಗ ರೂಪೇಶ್ ಶೆಟ್ಟಿ (Roopesh Shetty) ಬಂದು, ನೀವು ಕೇಳ್ತಿರೋದು ಸರಿಯಿಲ್ಲ ನಮಗೆ ಅವರು ಬಂದು ಕೇಳಿದ್ರೆ ಹೇಗ್ ಅನ್ಸುತ್ತೆ ಎಂದು ಹೇಳಿದರೆ, ಗುರೂಜಿ ಅವರಿಗೆ ಬಂದು ಮಾತಾಡು ಅಂತ ನಿನ್ನ ಕರೆದಿದ್ದು ಯಾರು ಎನ್ನುತ್ತಾರೆ. ಮತ್ತೆ ಅಮೂಲ್ಯ ರಾಕೇಶ್ ಜೊತೆಗೆ ಮಾತು ಮುಂದುವರೆಸಿ ಅದೇ ವಿಚಾರವನ್ನ ವಾದ ಮಾಡಿದಾಗ, ಕೊನೆಗೆ ಅಮೂಲ್ಯ, ಈ ರೀತಿ ಮಾತಾಡೋದು ನಿಮ್ಮ ಹುಟ್ಟುಗುಣ, ಇನ್ನೊಂದ್ಸಲ ನಿಮ್ಮ ಜೊತೆ ಮಾತಾಡೋದಕ್ಕೆ ನನಗೆ ಇಷ್ಟವಿಲ್ಲ, ನಿಮ್ಮ ಕ್ಷಮೆನು ಬೇಡ, ನಿಮ್ಮ ಸಹವಾಸನು ಬೇಡ ಎಂದು ಗುರೂಜಿಗೆ ಕೈಮುಗಿದು ಆವಾಜ್ ಹಾಕಿದ್ದಾರೆ ಅಮೂಲ್ಯ. ಇದನ್ನು ಓದಿ.. Kannada News: ತೆಲುಗಿನ ಆಂಕರ್ ಶ್ರೀಮುಖಿಯ ಸರ್ವಸ್ವವನ್ನು ಬಳಸಿಕೊಂಡ ಬಾಯ್ ಫ್ರೆಂಡ್ ಆತನಿಗಾಗಿ ಆ ಕೆಲಸ ಕೂಡ.