Kannada News: ಶಿವಣ್ಣ ಹೋಗ್ಬೇಕಾದ್ರೆ ಯಾರು ಬೇಕಾದರೂ ಕಲ್ಲು ಹೊಡೆಯಬಹುದಂತೆ, ಬೆಳಗಾವಿ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಶಿವಣ್ಣ. ಏನಾಗಿದೆ ಅಂತೇ ಗೊತ್ತೇ?

37

Get real time updates directly on you device, subscribe now.

Kannada News: ರಾಜ್ಯದಲ್ಲಿ ಈಗ ಬೆಳಗಾವಿ (Belagavi) ಗಡಿ ವಿವಾದ ಮತ್ತೆ ಶುರುವಾಗಿದೆ. ಈ ವಿಷಯವಾಗಿ ಮಹಾರಾಷ್ಟ್ರ (Maharashtra) ಮತ್ತೆ ಕ್ಯಾತೆ ತೆಗೆದ ಕಾರಣ ಕರ್ನಾಟಕದ ಜನರು ಆಕ್ರೋಶಕ್ಕೆ ಒಳಗಾಗಿದ್ದರು, ಕೆಲ ದಿನಗಳು ಬಿಗುವಿನ ವಾತಾವರಣ ಇತ್ತು. ಮಹಾರಾಷ್ಟ್ರ ಕಡೆಯ ಗಾಡಿಗಳ ಗಾಜು ಒಡೆದು ಹಾಕುವುದು, ಈ ರೀತಿಯ ಕೆಲಸಗಳು ನಡೆದಿದ್ದವು. ಈ ವಿಷಯದ ಬಗ್ಗೆ ಇದೀಗ ಕರುನಾಡ ಚಕ್ರವರ್ತಿ ಡಾ. ಶಿವ ರಾಜ್ ಕುಮಾರ್ (Dr Shiva Rajkumar) ಅವರು ಮಾತನಾಡಿದ್ದಾರೆ. ಶಿವಣ್ಣ ನೀಡಿದ ಶಾಕಿಂಗ್ ಹೇಳಿಕೆ ಈಗ ವೈರಲ್ ಆಗಿತ್ತು, ಅದರ ಬಗ್ಗೆ ಈಗ ತಿಳಿಸುತ್ತೇವೆ ನೋಡಿ..

“ಸ್ಥಾನ, ಮಾನ ,ನೀರು, ಭಾಷೆ ಇವುಗಳ ವಿಷಯಕ್ಕೆ ಬಂದರೆ ನಾವು ಸಪೋರ್ಟ್ ಮಾಡಿಯೇ ಮಾಡುತ್ತೇವೆ, ಅದು ನಮ್ಮ ಕರ್ತವ್ಯ. ನಮ್ಮ ಸಪೋರ್ಟ್ ಯಾವಾಗಲೂ ಇದ್ದೆ ಇರುತ್ತೆ. ನಾವು ಅಲ್ಲಿಗೆ ಹೋದರೆ ಮಾತ್ರ ಸಪೋರ್ಟ್ ಅಂತ ಅಲ್ಲ, ಅದನ್ನ ಯಾರಿಂದ ಹೇಗೆ ತಲುಪಿಸಬೇಕು ಅದು ಮುಖ್ಯ. ಸಿಸ್ಟಮ್ ನಮ್ಮ ಕೈಲಿದ್ರೆ ಬೇರೆ ಮಾತು. ನಮ್ಮಲ್ಲಿ ವ್ಯವಸ್ಥೆಗಳಿವೆ, ರಾಜಕೀಯ ವ್ಯವಸ್ಥೆಗಳು, ಪೊಲೀಸ್ ವ್ಯವಸ್ಥೆ ಈ ಎರಡು ಇದೆ. ಇವರೆಡು ಜೊತೆಯಾಗಿ ಕೆಲಸ ಮಾಡಿದ್ರೆ, ಜನರಿಗೆ ಏನು ತೊಂದರೆ ಇರೋದಿಲ್ಲ. ಆ ವಿಷಯದ ಬಗ್ಗೆ ಅವರು ಮನಸ್ಸು ಮಾಡಬೇಕು..ಅವರವರ ಬೇಳೆ ಬೇಯಿಸಿಕೊಳ್ಳೋದಕ್ಕೆ ಜನರಿಗೆ ತೊಂದರೆ ಆಗೋ ಹಾಗೆ ಮಾಡಬಾರದು. ಅವರ ಸ್ವಾರ್ಥಕ್ಕೆ ಜನರ ಜೀವನ ಹಾಳಾಗಬಾರದು.. ಇದನ್ನು ಓದಿ..Kannada News: ಗುಜರಾತ್ ನಲ್ಲಿ ಮೋದಿ ಗೆದ್ದು ಬೀಗಿದ ನಂತರ, ರಾಜ್ಯದಲ್ಲಿ ನಡುಕ ಆರಂಭ. ಕೂಡಲೇ HDK ಟೀಕೆ ಮಾಡಿದ್ದು ಹೇಗೆ ಗೊತ್ತೇ?

ಮರಾಠರು ಅಥವಾ ಕರ್ನಾಟಕದ ಜನ ಯಾರೇ ಆಗಿರಲಿ, ಮರಾಠರು ಮತ್ತು ಕನ್ನಡಿಗರು ಅಣ್ಣ ತಮ್ಮಂದಿರ ಹಾಗೆ ಬದುಕಬೇಕು. ಎಷ್ಟು ಜನ ಇದ್ದೀವಿ ಎನ್ನುವುದಕ್ಕಿಂತ, ಎಲ್ಲಿ ಜೀವನ ಮಾಡ್ತಾ ಇದ್ದೀವಿ ಅನ್ನೋದು ಮುಖ್ಯ. ನಾವು ಇರೋದು ಎಲ್ಲೇ ಆದ್ರೂ, ಇಂಡಿಯಾನೇ ಅಲ್ವಾ..ಸ್ವಾರ್ಥಕ್ಕೆ ಜನ ಜೀವನ ಹಾಳು ಮಾಡಬೇಡಿ. ನಾನು ಕೂಡ ಒಬ್ಬ ಸಾಮಾನ್ಯ ಜನರ ಹಾಗೆ, ನಾನು ಹೋಗೋವಾಗ ನನಗು ಕಲ್ಲು ಹೊಡೆಯಬಹುದು, ನನಗೆ ಪೊಲೀಸರ ರಕ್ಷಣೆ ಸಿಗುತ್ತದೆ, ನಾನು ಹೊರಟು ಹೋಗುತ್ತೇನೆ ಸಾಮಾನ್ಯ ಜನರು ಏನು ಮಾಡಬೇಕು. ಅವರು ಕಲ್ಲು ಹೊಡಿಸಿಕೊಳ್ತಾರೆ, ಆ ಥರ ಆಗಬಾರದು ಅಂದ್ರೆ ನಾವು ಅಲ್ಲಿವರೆಗು ಹೋಗೋಕೆ ಬಿಡಬಾರದು. ನೀವೇ ಅದನ್ನ ಸರಿ ಮಾಡಿದ್ರೆ ಅಲ್ಲಿವರೆಗೂ ಹೋಗೋದೇ ಬೇಡ. ಬೆಳಗಾವಿಯಲ್ಲಿ ಇರುವವರು ಬುದ್ಧಿವಂತಿಕೆಯಿಂದ ಮಾತನಾಡಿ.” ಎಂದಿದ್ದಾರೆ ಶಿವಣ್ಣ. ಇದನ್ನು ಓದಿ..Kannada News: ದರ್ಶನ್ ಅವರು ದಿನಕ್ಕೆ ಎಷ್ಟು ಸಿಗರೇಟ್ ಸೇದುತ್ತಾರೆ ಗೊತ್ತಾ ? ದರ್ಶನ್ ಗೆ ಇರುವ ಕೆಟ್ಟ ಅಭ್ಯಾಸ ಏನು ಗೊತ್ತೇ?

Get real time updates directly on you device, subscribe now.