Kannada News: ಕ್ರಾಂತಿ ಸಿನಿಮಾ ಪ್ರಚಾರ ಮಾಡುವಾಗ ಚಿತ್ರರಂಗದ ಮತ್ತೊಂದು ಕರಾಳ ಮುಖ ಬಿಚ್ಚಿಟ್ಟ ದರ್ಶನ್, ಹೇಳಿದ್ದೇನು ಗೊತ್ತೇ??

15

Get real time updates directly on you device, subscribe now.

Kannada News: ಡಿಬಾಸ್ ದರ್ಶನ್ (Darshan) ಅವರಂದ್ರೆ ಅಭಿಮಾನಿಗಳಲ್ಲಿ ಕ್ರೇಜ್ ಮತ್ತು ಪ್ರೀತಿ ಎರಡು ಕೂಡ ಹೆಚ್ಚು. ದರ್ಶನ್ ಅವರ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದರು, ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ ಕ್ರಾಂತಿ (Kranthi), 2023ರ ಜನವರಿ 26ರಂದು ಬಿಡುಗಡೆ ಆಗಲಿದೆ. ಪ್ರಸ್ತುತ ದರ್ಶನ್ ಅವರು ಕ್ರಾಂತಿ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ದರ್ಶನ್ ಅವರನ್ನು ಕನ್ನಡ ಮಾಧ್ಯಮಗಳು ಬ್ಯಾನ್ ಮಾಡಿವೆ ಎನ್ನುವುದು ಗೊತ್ತಿರುವ ವಿಚಾರ. ಹಾಗಾಗಿ ಸೋಷಿಯಲ್, ಮೀಡಿಯಾ ಯೂಟ್ಯೂಬ್ ಇವುಗಳ ಮೂಲಕ ಕ್ರಾಂತಿ ಸಿನಿಮಾ ಪ್ರೊಮೋಷನ್ ನಡೆಯುತ್ತಿದೆ..

ದರ್ಶನ್ ಅವರು ಯೂಟ್ಯೂಬ್ ಚಾನೆಲ್ ಗಳಿಗೆ, ಸಣ್ಣ ಟಿವಿ ಚಾನೆಲ್ ಗಳಿಗೆ ಇಂಟರ್ವ್ಯೂ ಕೊಡುತ್ತಿದ್ದಾರೆ. ಕ್ರಾಂತಿ ಪ್ಯಾನ್ ಇಂಡಿಯಾ ಸಿನಿಮಾ, ಕನ್ನಡ ತೆಲುಗು ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ದರ್ಶನ್ ಅವರು ನಮ್ಮ ರಾಜ್ಯದ ಊರುಗಳಲ್ಲಿ ಮಾತ್ರ ಪ್ರಚಾರ ಮಾಡುವುದಾಗಿ ಈಗಾಗಲೇ ಹೇಳಿದ್ದಾರೆ. ಕ್ರಾಂತಿ ಪ್ರೊಮೋಷನ್ ಗಾಗಿ ನಡೆಯುತ್ತಿರುವ ಇಂಟರ್ವ್ಯೂನಲ್ಲಿ ದರ್ಶನ್ ಅವರು ಅನೇಕ ವಿಚಾರಗಳನ್ನು ರಿವೀಲ್ ಮಾಡುತ್ತಿದ್ದು, ವಿಲ್ಲನ್ ಮಕ್ಕಳ ಪರಿಸ್ಥಿತಿ ಹೇಗಿರುತ್ತದೆ ಮತ್ತು ಅವರ ತಂದೆಯ ಸಂಭಾವನೆ ಎಷ್ಟಾಗಿತ್ತು, ಎಲ್ಲವನ್ನು ರಿವೀಲ್ ಮಾಡಿದ್ದಾರೆ, “ಹಳೆ ವಿಲ್ಲನ್ ಗಳ ಬಗ್ಗೆ ಏನು ಅಂದುಕೊಂಡಿದ್ದೀರಾ, ಅವರೆಲ್ಲ ಕರೊಡಪತಿ ಗಳಲ್ಲ, ಅವರು ಮಧ್ಯವರ್ಗದವರು. ತರುಣ ಇರಬಹದೂ, ನಾನಿರಬಹುದು ನಾವೆಲ್ಲರೂ ಮಧ್ಯಮವರ್ಗದವರೆ..

ನಮ್ಮನ್ನ ನಾವೇ ಎತ್ತಿಕೊಳ್ಳಬೇಕು.. ನಮ್ಮನ್ನ ನಾವೇ ಕೈಹಿಡಿದು ಕರೆದುಕೊಂಡು ಹೋಗಬೇಕು, ನಮ್ ಕೈಹಿಡಿದು ಸಪೋರ್ಟ್ ಮಾಡ್ತಾ ಇರೋದು ನಾವೇ. ನಮಗೆ ಬೇರೆ ಯಾರು ಸಪೋರ್ಟ್ ಮಾಡಲಿಲ್ಲ. ನಾವೆಲ್ಲ ಚಿತ್ರರಂಗಕ್ಕೆ ಬಂದಾಗ, ನಮ್ಮ ಹಿಂದೆ ನಮ್ಮ ತಂದೆಯನ್ನ ನೋಡಿದ್ರು..ಅವರಲ್ಲಿದ್ದ ಕಲೆಯನ್ನ ಮೀರಿಸಿ ನಾವು ಬರಬೇಕಿತ್ತು. ತಂದೆಯನ್ನ ಮೀರಿಸುವ ಮಗ ಅಂತ ಹೇಳೋದು ಇಲ್ಲಿ ಮಾತ್ರ..”ಎಂದು ಹೇಳಿದ್ದಾರೆ ಡಿಬಾಸ್. ಹಾಗೆಯೇ ತಮ್ಮ ತಂದೆಯ ಸಂಭಾವನೆಯನ್ನು ರಿವೀಲ್ ಮಾಡಿದ ಡಿಬಾಸ್,”ಒಂದು ಸಿನಿಮಾಗೆ 10 ಸಾವಿರ ಕೊಡ್ತಿದ್ರು ಸರ್..ಎಲ್ಲಿಗೆ ಆಗುತ್ತೆ, ಮೂರು ಜನ ಮಕ್ಕಳು, ಹೆಂಡತಿ ಜೊತೆಗೆ ಅವರ ಖರ್ಚು ಎಲ್ಲ ಇರ್ತಿತ್ತು.. ಸಿನಿಮಾದಲ್ಲಿ ಸೂಟ್ ಹಾಕೋತಿದ್ರು, ಆದ್ರೆ ಮನೆಯಲ್ಲಿ ಅವರ ಪರಿಸ್ಥಿತಿ ಹೇಗಿತ್ತು ಅಂತ ಅವರಿಗೆ ಮಾತ್ರ ಗೊತ್ತು..” ಎಂದಿದ್ದಾರೆ ಡಿಬಾಸ್.

Get real time updates directly on you device, subscribe now.