Rashmika Mandanna: ಮೊದಲ ಬಾರಿಗೆ ಕನ್ನಡ ಚಿತ್ರರಂಗದ ಬ್ಯಾನ್ ಕುರಿತು ಮಾತನಾಡಿದ ರಶ್ಮಿಕಾ ಹೇಳಿದ್ದೇನು ಗೊತ್ತೇ??
Rashmika Mandanna: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ನ್ಯಾಶನಲ್ ಕ್ರಶ್ ಆಗಿ ಹುಡುಗರ ಹೃದಯದಲ್ಲಿ ನೆಲೆಸಿದ್ದಾರೆ. ದಕ್ಷಿಣ ಭಾರತದಲ್ಲಿ ಇವರ ಬಗ್ಗೆ ಹೊಸದಾಗಿ ಪರಿಚಯದ ಮಾಡಿಕೊಡುವ ಅಗತ್ಯವಿಲ್ಲದ ಹೆಸರು ರಶ್ಮಿಕಾ. ಇವರು ಬಹಳ ಬೇಗ ಸಾಕಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಚಲೋ ಸಿನಿಮಾದ ಮೂಲಕ ತೆಲುಗಿಗೆ ಬಂದ ರಶ್ಮಿಕಾ, ಮೊದಲ ಸಿನಿಮಾದಲ್ಲೇ ಹಿಟ್ ಗಳಿಸಿಕೊಂಡರು. ನಂತರ ಸ್ಟಾರ್ ಹೀರೋಗಳ ಜೊತೆಗೆ ಅವಕಾಶಗಳನ್ನು ಪಡೆದು ಈಗ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.
ಕಿರಿಕ್ ಪಾರ್ಟಿ (Kirik Party) ಸಿನಿಮಾ ಮೂಲಕ ನಟನೆ ಶುರು ಮಾಡಿದ ರಶ್ಮಿಕಾ ಈ ಹಂತಕ್ಕೆ ಬರಲು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ. ವರ್ಷಗಳ ಕಾಲ ಪಟ್ಟ ಕಷ್ಟ ಮತ್ತು ಪರಿಶ್ರಮಕ್ಕೆ ತಕ್ಕ ಪ್ರತಿಫಲ ಮತ್ತು ಅದೃಷ್ಟವೂ ಜೊತೆಯಾಗಿ, ರಶ್ಮಿಕಾ ಸಕ್ಸಸ್ ಕಂಡರು. ಅದರಲ್ಲು ಪುಷ್ಪಾ (Pushpa) ಚಿತ್ರದ ಮೂಲಕ, ರಶ್ಮಿಕಾ ಅವರು ಬಾಲಿವುಡ್ ನಲ್ಲು ಜನಪ್ರಿಯತೆ ಗಳಿಸಿಕೊಂಡರು. ಆದರೆ ಇತ್ತೀಚೆಗೆ ಕನ್ನಡದ ವಿಚಾರಕ್ಕೆ ಇವರು ಟ್ರೋಲ್ ಆಗುವುದು ಕೂಡ ಹೆಚ್ಚು. ರಶ್ಮಿಕಾ ಅವರು ತಮಗೆ ಮೊದಲ ಅವಕಾಶ ಕೊಟ್ಟ ಪ್ರೊಡಕ್ಷನ್ ಕಂಪನಿ ಹೆಸರು ಹೇಳದೆ, ಸನ್ನೆ ಮಾಡಿದ ಇಂಟರ್ವ್ಯೂ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ, ರಶ್ಮಿಕಾ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ ಎನ್ನುವ ಸುದ್ದಿ ಕೂಡ ಹರಿದಾಡಿತ್ತು.. ಇದನ್ನು ಓದಿ..Kannada News: ಶಿವಣ್ಣ ಹೋಗ್ಬೇಕಾದ್ರೆ ಯಾರು ಬೇಕಾದರೂ ಕಲ್ಲು ಹೊಡೆಯಬಹುದಂತೆ, ಬೆಳಗಾವಿ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಶಿವಣ್ಣ. ಏನಾಗಿದೆ ಅಂತೇ ಗೊತ್ತೇ?

ಈ ವಿಚಾರಕ್ಕೆ ಈಗ ಖುದ್ದು ರಶ್ಮಿಕಾ ಅವರೇ ಪ್ರತಿಕ್ರಿಯೆ ನೀಡಿದ್ದಾರೆ, “ನಾನು ಕಾಂತಾರ (Kantara) ಸಿನಿಮಾ ನೋಡಿಲ್ಲ ಅಂತ ಯಾರ್ ಹೇಳಿದ್ದು, ಅವರು ಪ್ರಶ್ನೆ ಕೇಳಿದಾಗ ಸಿನಿಮಾ ಬಿಡುಗಡೆ ಆಗಿ ಎರಡಮೂರು ದಿನ ಅಷ್ಟೇ ಆಗಿತ್ತು, ಆಗ ನೋಡಿರಲಿಲ್ಲ, ಸಿನಿಮಾ ನೋಡಿದಮೇಲೆ ನಾನು ಅವರಿಗೆ ಮೆಸೇಜ್ ಹಾಕಿದ್ದೆ, ಅವರು ಕೂಡ ರಿಪ್ಲೈ ಮಾಡಿದ್ರು. ಒಳಗೆ ನಡೆಯೋದು ಏನು ಎಂದು ಯಾರಿಗು ಗೊತ್ತಾಗೋದಿಲ್ಲ. ನಾವು ಮೆಸೇಜ್ ಗಳನ್ನ ಎಲ್ಲರಿಗೂ ತೋರಿಸೋದಿಲ್ಲ..” ಎಂದಿದ್ದಾರೆ. ಇನ್ನು ಬ್ಯಾನ್ ವಿಚಾರದ ಬಗ್ಗೆ ಮಾತನಾಡಿ, “ಇದುವರೆಗೂ ನನ್ನ ಯಾರು ಮಾಡಿಲ್ಲ. ಕನ್ನಡ ಚಿತ್ರರಂಗದ ಮೇಲೆ ಗೌರವ ಇದೆ..”ಎಂದು ಹೇಳಿದ್ದಾರೆ ರಶ್ಮಿಕಾ. ಈ ಮೂಲಕ ತಮ್ಮನ್ನು ಬ್ಯಾನ್ ಮಾಡಿಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ.. Kannada News: ಕ್ರಾಂತಿ ಸಿನಿಮಾ ಪ್ರಚಾರ ಮಾಡುವಾಗ ಚಿತ್ರರಂಗದ ಮತ್ತೊಂದು ಕರಾಳ ಮುಖ ಬಿಚ್ಚಿಟ್ಟ ದರ್ಶನ್, ಹೇಳಿದ್ದೇನು ಗೊತ್ತೇ??