Kannada News: ನೆನಪಿದ್ದಾರಾ ಖ್ಯಾತ ಹಾಸ್ಯ ನಟ ಮನದೀಪ್ ರಾಯ್: ಇವರ ಆರೋಗ್ಯದಲ್ಲಿ ಏರು ಪೆರು. ಏನಾಗಿದೆ ಗೊತ್ತೇ??
Kannada News: ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಸಕ್ರಿಯವಾಗಿದ್ದು, ಐನೂರಕ್ಕಿಂತ ಹೆಚ್ಚಿನ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿ ಕನ್ನಡ ಸಿನಿಪ್ರಿಯರನ್ನು ರಂಜಿಸಿರುವ ಹಿರಿಯನಟ ಮನದೀಪ್ ರಾಯ್ (Mandeep Roy) ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇವರಿಗೆ ಹೃದಯಾಘಾತವಾಗಿದ್ದು, ಮನದೀಪ್ ರಾಯ್ ಅವರನ್ನು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಳೆದ ಮೂರು ದಿನಗಳ ಹಿಂದೆ ಮನದೀಪ್ ರಾಯ್ ಅವರಿಗೆ ಹೃದಯಾಘಾತವಾಗಿದ್ದು, ಮೂರು ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನುವ ವಿಷಯ ಗೊತ್ತಾಗುತ್ತಿದ್ದ ಹಾಗೆಯೇ, ಚಂದನವನದ ಹಲವು ಕಲಾವಿದರು ಬಂದು ಇವರ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡು ಹೋಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಮನದೀಪ್ ರಾಯ್ ಅವರು ಈಗ ಚೇತರಿಸಿಕೊಳ್ಳುತ್ತಿದ್ದು, ಅವರು ಈಗ ಅಪಾಯದಿಂದ ಪಾರಾಗಿದ್ದಾರೆ. ಮನದೀಪ್ ರಾಯ್ ಇನ್ನು ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆಯುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಇದನ್ನು ಓದಿ.. Kannada News: ತುಂಡು ಉಡುಗೆ ಧರಿಸಿ, ದೇಶವೇ ಬಾಯ್ಬಿಟ್ಟು ನೋಡಿವಂತೆ ಪೋಸ್ ಕೊಟ್ಟ ಖ್ಯಾತ ಟಿಕ್ ಟಾಕ್ ಸುಂದರಿ ದೀಪಿಕಾ. ಹೇಗಿದೆ ಗೊತ್ತೇ ಫೋಟೋಸ್?
ಹಾಗಾಗಿ ಇನ್ನು ಕೆಲ ಸಮಯ ಅವರು ಆಸ್ಪತ್ರೆಯಲ್ಲೇ ಇರಲಿದ್ದಾರೆ. ಮನದೀಪ್ ರಾಯ್ ಅವರು ಅನಂತ್ ನಾಗ್ (Ananth Nag) ಮತ್ತು ಶಂಕರ್ ನಾಗ್ (Shankar Nag) ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಮಯದಲ್ಲಿ ಬಂದವರು. ಆಗಿನಿಂದ ಇತ್ತೀಚಿನ ವರ್ಷಗಳವರೆಗೂ ಅಣ್ಣಾವ್ರ ಜೊತೆಯಿಂದ ಹಿಡಿದು ಈಗಿನ ಕಲಾವಿದರವರೆಗು ಎಲ್ಲರ ಜೊತೆಯಲ್ಲು ನಟಿಸಿದ್ದಾರೆ. ಮಿಂಚಿನ ಓಟ (Minchina Ota), ಆಸೆಗೊಬ್ಬ ಮೀಸೆಗೊಬ್ಬ (Aasegobba Meesegobba), ಆಕಸ್ಮಿಕ (Akasmika), ಏಳು ಸುತ್ತಿನ ಕೋಟೆ (Elu Suttina Kote), ಪ್ರೀತ್ಸೋದ್ ತಪ್ಪಾ (Preethsod Thappa), ಆಪ್ತರಕ್ಷಕ (Aptharakshaka) ಸೇರಿದಂತೆ 500ಕ್ಕಿಂತ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಇದನ್ನು ಓದಿ.. Kannada News: ಚಿಕ್ಕ ವಯಸ್ಸಿಗೆ ದೇಶವೇ ಮೆಚ್ಚುವಂತಹ ಸಾಧನೆ ಮಾಡಿರುವ ಸನ್ಯಾ ರವರಿಗೂ ಆಗಿತ್ತ ಕಹಿ ಅನುಭವ? ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಸಾನಿಯಾ.