Keerthy Suresh: ಶರ್ಟ್ ಬಟನ್ ಗಳನ್ನು ಓಪನ್ ಮಾಡಿ, ದೂಳೆಬ್ಬಿಸಿದ ಕೀರ್ತಿ ಸುರೇಶ್: ಮೊದಲ ಬಾರಿಗೆ ಟಪ್ಪಂಗುಚ್ಚಿ ಹೇಗಿತ್ತು ಗೊತ್ತೇ?

14

Get real time updates directly on you device, subscribe now.

Keerthy Suresh: ಸೌಂದರ್ಯ ಮತ್ತು ನಟನೆಯಿಂದ ಹುಡುಗರ ಮನ ಕದಿಯುತ್ತಿರುವವರು ಮುದ್ದಾದ ನಟಿ ಕೀರ್ತಿ ಸುರೇಶ್. ಇವರು ಮಾಡಿದ ಕೆಲವು ಸಿನಿಮಾಗಳಿಂದ ಒಳ್ಳೆಯ ಕ್ರೇಜ್ ಅನ್ನು ಸಂಪಾದಿಸಿದ್ದಾರೆ. ಮಹಾನಟಿ (Mahanati) ಸಿನಿಮಾದಲ್ಲಿ ಅವರ ಅಭಿನಯ ನೋಡಿ ಇಡೀ ದೇಶವೇ ಬೆರಗಾಗಿತ್ತು, ಮಹಾನಟಿ ಅಭಿನಹಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದರು ಕೀರ್ತಿ ಸುರೇಶ್. ಆದರೆ ಕೀರ್ತಿ ಸುರೇಶ್ ಅವರ ಮುಂದಿನ ಚಿತ್ರಗಳಲ್ಲಿನ ತಪ್ಪುಗಳು ಅವರ ವೃತ್ತಿಜೀವನವನ್ನು ಪ್ರಶ್ನಿಸುವಂತೆ ಮಾಡಿತು. ಆಗಿನಿಂದ ಸತತ ಸೋಲುಗಳನ್ನೇ ಕಂಡಿದ್ದಾರೆ ಕೀರ್ತಿ. ಇದೀಗ ಕೀರ್ತಿ ಸುರೇಶ್ ಅವರು ನೇನು ಲೋಕಲ್ (Nenu Local) ಸಿನಿಮಾ ನಂತರ ನಟ ನಾನಿ (Nani) ಅವರೊಡನೆ ದಸರಾ (Dasara) ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಪ್ರಚಾರ ಕೆಲಸಗಳು ಪ್ರಾರಂಭವಾಗಿವೆ

ದಸರಾ ಸಿನಿಮಾದಲ್ಲಿ ನಟ ನಾನಿ ಫುಲ್ ಡಿ ಗ್ಲಾಮರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿಂಗರೇಣಿ ಹಿನ್ನಲೆಯಲ್ಲಿ ಕಥೆ ಇಟ್ಟುಕೊಂಡು ಈ ಸಿನಿಮಾ ತಯಾರಾಗುತ್ತಿರುವ ವಿಷಯ ಗಿತ್ತಿದೆ..ಪ್ರಸ್ತುತ, ನಟಿ ಕೀರ್ತಿ ಅವರ ಕೈಯಲ್ಲಿ ಅಧಿಕೃತವಾಗಿ ಒಂದೇ ಒಂದು ಚಿತ್ರವಿದೆ. ಭೋಲಾ ಶಂಕರ್ (Bhola Shankar) ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ತಂಗಿ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳು ಸಿನಿಮಾಗಳಲ್ಲು ನಟಿಸುತ್ತಿದ್ದಾರೆ. ಆದರೆ ನಿರೀಕ್ಷೆಗಳು ಹೆಚ್ಚಾಗಿ ದಸರಾ ಸಿನಿಮಾ ಮೇಲಿದೆ. ಈಗ ಕೀರ್ತಿ ಸುರೇಶ್ ಅವರು ಕೂಡ ಈ ಸಿನಿಮಾದ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಹಾಡಿಗೆ ಕುಣಿದು ಕುಪ್ಪಳಿಸಿ, ಶರ್ಟ್ ಬಟನ್ಸ್ ತೆಗೆದು ಲುಂಗಿ ಧರಿಸಿ ಡ್ಯಾನ್ಸ್ ಮಾಡಿದ್ದು, ಇದನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ..

ಒಂದು ಕಾಲದಲ್ಲಿ ಸಿನಿಮಗಳಲ್ಲಿ ತುಂಬಾ ಮೆಥಡಿಕಲ್ ಆಗಿ ಕಾಣಿಸುತ್ತಿದ್ದ ಕೀರ್ತಿ ಸುರೇಶ್ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಸಧ್ಯಕ್ಕೆ ಕೀರ್ತಿ ಸುರೇಶ್ ಅವರ ಈ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಒಂದಾನೊಂದು ಕಾಲದಲ್ಲಿ ದುಂಡುಮುಖದಲ್ಲಿದ್ದ ಕೀರ್ತಿ ಸುರೇಶ್ ಈಗ ಸ್ಲಿಮ್ ಆಗಿದ್ದಾರೆ.. ಗ್ಲಾಮರ್ ಡೋಸ್ ಹೆಚ್ಚಿಸಿದ್ದಾರೆ. ಕೀರ್ತಿ ಸುರೇಶ್ ಶೇರ್ ಮಾಡಿರುವ ಫೋಟೋಗಳೇ ಇದಕ್ಕೆ ಉದಾಹರಣೆ. ಕೀರ್ತಿ ಸುರೇಶ್ ಸ್ಟೈಲಿಶ್ ವೇರ್‌ನಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ. ಸರ್ಕಾರು ವಾರಿ ಪಾಟ (Sarkaru Vaari Paata) ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರ ಕಲಾವತಿ ಪಾತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು ಎನ್ನಬಹುದು. ಹಿಂದೆಂದು ಕಾಣದ ಹಾಗೆ ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರನ್ನು ನೋಡಿದ ಕೆಲವರು ಚೆನ್ನಾಗಿದೆ ಎಂದು ಹೊಗಳಿದರೆ ಇನ್ನು ಕೆಲವರು ಟೀಕೆ ಮಾಡಿದರು.

Get real time updates directly on you device, subscribe now.