Sreeleela: ತೆಲುಗಿನಲ್ಲಿ ದಿನೇ ದಿನೇ ಹದ್ದು ಮೀರುತ್ತಿರುವ ಶ್ರೀ ಲಾಲಾ: ತೆಲುಗು ಸ್ಟಾರ್ ನಟ ಕೊಟ್ಟ ಎಚ್ಚರಿಕೆ ಏನು ಗೊತ್ತೇ??
Sreeleela: ಶ್ರೀಲೀಲಾ, ಈ ಕ್ಯೂಟ್ ನಟಿಯ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ಕಿಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ನಟಿ, ತೆಲುಗಿನಲ್ಲಿ ಒಂದೇ ಒಂದು ಸಿನಿಮಾ ಮಾಡಿದರು ಕೂಡ ತೆಲುಗಿನಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಪೆಳ್ಳಿ ಸಂದಡಿ ಚಿತ್ರದ ಮೂಲಕ ತೆಲುಗು ತೆರೆಗೆ ಎಂಟ್ರಿ ಕೊಟ್ಟ ಶ್ರೀಲೀಲಾ ಮೊದಲ ಸಿನಿಮಾದಲ್ಲೇ ಸಿನಿಪ್ರಿಯರನ್ನು ಸೆಳೆದರು. ಮೊದಲ ಸಿನಿಮಾ ಹಿಟ್ ಆದ ನಂತರ ಶ್ರೀಲೀಲಾ ಅವರ ಕೈಯಲ್ಲಿ ಅರ್ಧ ಡಜನ್ ಗಿಂತ ಹೆಚ್ಚು ಸಿನಿಮಾಗಳಿವೆ.
ಶೀಘ್ರದಲ್ಲೇ ಧಮಾಕಾ ಸಿನಿಮಾ ಮೂಲಕ ಮತ್ತೊಮ್ಮೆ ತೆಲುಗು ಸಿನಿಪ್ರಿಯರ ಮುಂದೆ ಬರಲಿದ್ದಾರೆ. ಮಾಸ್ ಮಹಾರಾಜ ನಟ ರವಿತೇಜ ಹೀರೋ ಆಗಿ, ಶ್ರೀಲೀಲಾ ಹೀರೋಯಿನ್ ಆಗಿ ನಟಿಸಿರುವ ಈ ಸಿನಿಮಾ ಕ್ರಿಸ್ ಮಸ್ ಹಬ್ಬದ ಗಿಫ್ಟ್ ಆಗಿ ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲದೇ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಕಾಂಬಿನೇಷನ್ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ ಎನ್ನಲಾಗಿದೆ. ಇದಲ್ಲದೆ ಬಾಲಯ್ಯ ಮತ್ತು ಅನಿಲ್ ರವಿಪುಡಿ ಅವರ ಮುಂದಿನ ಸಿನಿಮಾದಲ್ಲು ಶ್ರೀಲೀಲಾ ನಟಿಸುವುದು ಕನ್ಫರ್ಮ್ ಆಗಿದೆ. ಈ ರೀತಿಯಾಗಿ ಶ್ರೀಲೀಲಾ ಅವರ್ ಮೇಲಿನ ಕ್ರೇಜ್ ಹೆಚ್ಚಾಗಿದೆ. ಆದರೆ ಇತ್ತೀಚೆಗೆ ಶ್ರಿಲೀಲಾ ಅವರ ಕುರಿತ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದೀಗ ಮತ್ತೊಬ್ಬ ಸ್ಟಾರ್ ಹೀರೋ ಸಿನಿಮಾಗೆ ಆಫರ್ ಬಂದಿದ್ದು, ನಿರ್ದೇಶಕರ ಬಳಿ ಈ ಎಲ್ಲಾ ಸಿನಿಮಾಗಳ ವಿಚಾರವನ್ನು ಹೇಳಿದ್ದರಿಂದ ಈಗಾಗಲೇ ಕಮಿಟ್ ಆಗಿದ್ದರು ಸ್ಟಾರ್ ಹೀರೋ ಸಿನಿಮಾದಿಂದ ಹೊರಬರಲು ರೆಡಿಯಾಗಿದ್ದಾರಂತೆ. ಕೌಟುಂಬಿಕ ಸಮಸ್ಯೆಯಿಂದ ಹೊರ ಹೋಗುತ್ತಿದ್ದೇನೆ ಎಂದಿದ್ದ ಆಕೆಗೆ ಸ್ಟಾರ್ ಹೀರೋ ಕರೆ ಮಾಡಿ ವಾರ್ನಿಂಗ್ ಕೊಟ್ಟಿದ್ದರಂತೆ. ಇಂಡಸ್ಟ್ರಿಯಲ್ಲಿ ನಿಲ್ಲಬೇಕಾದರೆ ಓಪನ್ ಆಗಿ ಮಾತನಾಡಬೇಕು, ಈಗಲೇ ಒಪ್ಪಂದಕ್ಕೆ ಸಹಿ ಹಾಕಿದ್ದು, ಬಿಡುವುದಾದರೆ, ಕಾನೂನಿನ ಪ್ರಕಾರವೇ ಮುಂದುವರಿಯ ಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ ಆದರೆ ಈ ವಿಚಾರ ಈಗ ವೈರಲ್ ಆಗುತ್ತಿದೆ.