Kantara: ಕಾಂತಾರ ಏನೋ ಯಶಸ್ಸು ಕಾಣಿತು; ಆದರೂ ಕೂಡ ಬೇಸರ ಮಾಡಿಕೊಂಡಿರುವ ರಿಷಬ್ ಶೀಟಿ: ಕಾರಣ ಏನು ಅಂತೇ ಗೊತ್ತೇ??
Kantara: ಕಾಂತಾರ ಸಿನಿಮಾ ಇಂದು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದೆ. ಇಷ್ಟು ವರ್ಷಗಳು ರಿಷಬ್ ಶೆಟ್ಟಿ (Rishab Shetty) ಅವರು ಪಟ್ಟ ಕಷ್ಟಕ್ಕೆ ಈಗ ಪ್ರತಿಫಲ ಸಿಕ್ಕಿದೆ. ರಿಷಬ್ ಅವರು ಕಾಂತಾರ ಸಿನಿಮಾದಲ್ಲಿ ಕರಾವಳಿ ಪ್ರದೇಶದ ಭೂತಲೋಕ, ದೈವಾರಾಧನೆ ಇವುಗಳ ಬಗ್ಗೆ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ದೇಶ ವಿದೇಶಗಳಲ್ಲಿ ಕರಾವಳಿಯ ಗುಳಿಗ ದೈವ ಮತ್ತು ಪಂಜುರ್ಲಿ ದೈವದ ಬಗ್ಗೆ ಮಾತನಾಡಿಕೊಳ್ಳುವ ಹಾಗಿದೆ. ಸಿನಿಮಾ 400 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಆದರೆ ಅದೊಂದು ವಿಚಾರಕ್ಕೆ ರಿಷಬ್ ಶೆಟ್ಟಿ ಅವರು ಬೇಸರ ಮಾಡಿಕೊಂಡಿದ್ದಾರೆ.
ಕಾಂತಾರ (Kantara) ಸಿನಿಮಾ ಇಂದ ರಿಷಬ್ ಅವರು ಇಂದು ಭಾರಿ ಡಿಮ್ಯಾಂಡ್ ನಲ್ಲಿದ್ದಾರೆ, ಇಡೀ ಚಿತ್ರತಂಡಕ್ಕೆ ಸಕ್ಸಸ್ ಸಿಕ್ಕಿದೆ. ರಿಷಬ್ ಅವರಿಗೆ ಇದು ಎಂಜಾಯ್ ಮಾಡುವ ಟೈಮ್, ಆದರೆ ಅವರಿಗೆ ಕೆಲವು ವಿಚಾರಗಳಿಂದ ಬೇಸರ ಆಗಿದೆ. ಕಾಂತಾರ ಸಿನಿಮಾ ಇಂದ ಬಹಳ ಒಳ್ಳೆಯದಾಗಿದೆ, ಅದರ ಜೊತೆಗೆ ಕೆಲವು ಕೆಟ್ಟ ಪರಿಣಾಮಗಳು ಸಹ ನಡೆದಿದೆ. ಕೆಲವರು ದೈವದ ಬಗ್ಗೆ ಟೀಕೆ ಮಾಡಿ ಮಾತನಾಡುತ್ತಿದ್ದಾರೆ, ಚರ್ಚೆಗಳನ್ನು ಸಹ ಮಾಡಿದ್ದರು, ಅದೆಲ್ಲವೂ ಒಂದು ಕಡೆಯಾದರೆ, ಮತ್ತೊಂದು ಕಡೆ ದೈವದ ವೇಷ ಧರಿಸಿ ಸಾರ್ವಜನಿಕ ವೇದಿಕೆಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ, ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಿದ್ದಾರೆ.. ಇದನ್ನು ಓದಿ.. Kannada News: ದೈವವನ್ನು ಬಳಸಿ ಪಾತ್ರ ಮಾಡಿ ಕೋಟಿ ಕೋಟಿ ದುಡ್ಡು ಮಾಡಿದ ನಿಮ್ಮ ಬಾಯಲ್ಲಿ ಈ ಮಾತು ಬೇಡ ಎಂದು ರಿಷಬ್ ಗೆ ಬಾಣ ಬಿಟ್ಟ ಚೇತನ್. ಏನಾಗಿದೆ ಗೊತ್ತೆ?
ಇದರಿಂದ ದೈವದ ವೇಷ ಧರಿಸುವ ಕುಟುಂಬಗಳಿಗೆ ಬಹಳ ನೋವಾಗಿದೆ, ಇದರಿಂದ ರಿಷಬ್ ಶೆಟ್ಟಿ ಅವರು ಕೂಡ ಅಪ್ಸೆಟ್ ಆಗಿದ್ದಾರೆ. ಈ ರೀತಿ ಮಾಡಬಾರದು, ದೈವದ ದೃಶ್ಯಗಳಿಗೆ ರೀಲ್ಸ್ ಮಾಡಬಾರದು, ಅದು ಆ ಕುಟುಂಬದವರು ಮಾತ್ರ ಮಾಡಬೇಕು, ಕಟ್ಟುನಿಟ್ಟಿನಿಂದ ಮಾಡಬೇಕು ಎಂದಿದ್ದಾರೆ. ಈ ಸಿನಿಮಾ ಗೆಲ್ಲೋದಕ್ಕೂ ಕೂಡ ದೈವವೇ ಕಾರಣ ಎಂದು ಕೂಡ ಹೇಳಿದ್ದಾರೆ ರಿಷಬ್ ಶೆಟ್ಟಿ. ಆದರೆ ಜನರು ಈ ರೀತಿ ಸಿನಿಮಾವನ್ನು ತೆಗೆದುಕೊಂಡಿರುವುದರಿಂದ ರಿಷಬ್ ಅವರಿಗೆ ಬಹಳ ಬೇಸರವಂತು ಆಗಿದೆ. ಇದನ್ನು ಓದಿ.. Rashmika Mandanna: ರಶ್ಮಿಕಾ ರವರನ್ನು ತೆಲುಗಿನಲ್ಲಿ ತುಳಿಯುತ್ತಿರುವುದು ಯಾರು ಗೊತ್ತೇ?? ಅದಕ್ಕಾಗಿ ಚಾನ್ಸ್ ಬರುತ್ತಿಲ್ಲವೇ?