Kannada News: ದೈವವನ್ನು ಬಳಸಿ ಪಾತ್ರ ಮಾಡಿ ಕೋಟಿ ಕೋಟಿ ದುಡ್ಡು ಮಾಡಿದ ನಿಮ್ಮ ಬಾಯಲ್ಲಿ ಈ ಮಾತು ಬೇಡ ಎಂದು ರಿಷಬ್ ಗೆ ಬಾಣ ಬಿಟ್ಟ ಚೇತನ್. ಏನಾಗಿದೆ ಗೊತ್ತೆ?

70

Get real time updates directly on you device, subscribe now.

Kannada News: ಕಾಂತಾರ (Kantara) ಸಿನಿಮಾ ಇಂದು ದೊಡ್ಡಮಟ್ಟದಲ್ಲಿ ಹೆಸರು ಮಾಡಿ, 400 ಕೋಟಿಗಿಂತ ಹೆಚ್ಚು ಹಣ ಗಳಿಸಿ ಸಸ್ಕಸ್ ಕಂಡಿದೆ. ಅದರ ಜೊತೆಗೆ ಕಾಂತಾರ ಸಿನಿಮಾಗೆ ಕೆಲವು ವಿದಾಗಳು ಸಹ ಶುರುವಾಗಿದ್ದವು. ಈ ಸಿನಿಮಾ ಬಗ್ಗೆ ವಿವಾದ ಮಾಡಿದವರಲ್ಲಿ ಕನ್ನಡದ ನಟ ಚೇತನ್ ಅಹಿಂಸಾ (Chetan Ahimsa) ಸಹ ಒಬ್ಬರು. ಇವರು ಕಾಂತಾರ ಸಿನಿಮಾ ನೋಡಿ, ಭೂತಕೋಲ, ದೈವನರ್ತನ ಇದೆಲ್ಲವು ಆದಿವಾಸಿಗಳ ಆಚರಣೆ ಆಗಿತ್ತು, ಹಿಂದೂ ಧರ್ಮ ಬರುವುದಕ್ಕಿಂತ ಅವರು ಶುರು ಮಾಡಿದ ಆಚರಣೆಗಳು, ಆದರೆ ಕಾಂತಾರ ಸಿನಿಮಾದಲ್ಲಿ ತಪ್ಪಾಗಿ ತೋರಿಸಲಾಗಿದೆ ಎಂದಿದ್ದರು. ಈ ಹೇಳಿಕೆಗೆ ಹಲವರ ವಿರೋಧವು ವ್ಯಕ್ತವಾಗಿತ್ತು..

ಇದೀಗ ಚೇತನ್ ಅವರು ಮತ್ತೊಮ್ಮೆ ಭೂತಕೋಲ, ದೈವದ ಬಗ್ಗೆ ಮಾತನಾಡಿದ್ದಾರೆ, ಇತ್ತೀಚೆಗೆ ರಿಷಬ್ ಶೆಟ್ಟಿ (Rishab Shetty) ಅವರು, ಕಾಂತಾರ ಸಿನಿಮಾದ ದೈವದ ದೃಶ್ಯಗಳಿಗೆ ರೀಲ್ಸ್ ಮಾಡಬೇಡಿ, ನಾನು ದೈವದ ವೇಷ ಧರಿಸುವಾಗ, ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿದ್ದೇ, ನಾನ್ ವೆಜ್ ಬಿಟ್ಟಿದ್ದೇ, ಚಪ್ಪಲಿ ಧರಿಸುತ್ತಿರಲಿಲ್ಲ. ಇಂಥದ್ದೆಲ್ಲಾ ಬಹಳಷ್ಟು ವಿಚಾರಗಳಿವೆ, ಹಾಗಾಗಿ ದೈವದ ದೃಶ್ಯಗಳಿಗೆ ರೀಲ್ಸ್ ಮಾಡಬೇಡಿ ಎಂದು ರಿಷಬ್ ಮನವಿ ಮಾಡಿಕೊಂಡರು. ಅದಕ್ಕೆ ಚೇತನ್ ಅವರು ವಿರೋಧ ದಿಕ್ಕಿನಲ್ಲಿ ಉತ್ತರ ನೀಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ ನಟ ಚೇತನ್.. ಇದನ್ನು ಓದಿ.. Ananya Panday: ಅಂದದ ಮೂಟೆಯನ್ನು ಬಿಚ್ಚಿಟ್ಟ ಅನನ್ಯ ಪಾಂಡೆ. ಈಕೆಯ ಹೊಸ ಫೋಟೋ ನೋಡಿದರೆ, ಮೈಯೆಲ್ಲಾ ಜುಮ್ ಅನ್ನುತ್ತೆ.

“ಕೋಟಿಗಟ್ಟಲೆ ದುಡ್ಡು ಮತ್ತು ಆರ್ಥಿಕ ಲಾಭಕ್ಕಾಗಿ ನಮ್ಮ ಆದಿವಾಸಿ ಸಂಸ್ಕೃತಿಯನ್ನು ಹೈಜಾಕ್ ಮಾಡಿ ಉಪಯೋಗಿಸಿಕೊಂಡು, ನಮ್ಮ ಮೂಲನಿವಾಸಿಗಳನ್ನು ಯಾವುದೇ ರೀತಿಯಲ್ಲೂ ಎತ್ತಿ ಹಿಡಿಯುವ ಕೆಲಸ ಮಾಡದೇ ಇರುವವರು, ಬೇರೆಯವರು ಇತರೆ ವಯಕ್ತಿಕ ಕ್ಷೇತ್ರಗಳಲ್ಲಿ ಆ ರೀತಿ ತೋರಿಸಬಾರದು ಎಂದು ಆದೇಶಿಸುವುದು ವಿಪರ್ಯಾಸ. ನೀವು ಅದನ್ನು ತೋರಿಸಬಹುದಾದರೆ, ಇತರರು ಕೂಡ ತೋರಿಸಬಹುದು. ಪ್ರಜಾಪ್ರಭುತ್ವಕ್ಕೆ ಸ್ವಾಗತ..” ಎಂದು ಚೇತನ್ ಅವರು ಬರೆದುಕೊಂಡಿದ್ದು, ಕೆಲವರು ಇದನ್ನು ಒಪ್ಪಿದರೆ, ಇನ್ನು ಕೆಲವರು ಚೇತನ್ ಅವರಿಗೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಇದನ್ನು ಓದಿ.. Sapthami Gowda: ಈ ಬಾರಿ ಬ್ಲಾಕ್ ಡ್ರೆಸ್ ನಲ್ಲಿ ಮಿಂಚಿದ ಕರುನಾಡಿದ ಚೆಲುವೆ ಸಪ್ತಮಿ ಗೌಡ: ಈ ಫೋಟೋ ನೋಡಿದರೆ, ಹುಡುಗರಂತೂ ಹೃದಯ ಕಿತ್ತು ಕೈ ಗೆ ಕೊಡ್ತಾರೆ.

Get real time updates directly on you device, subscribe now.