Lakshana: ಶುರುವಾಯಿತು ಚಂದ್ರಶೇಖರ್ ಅಸಲಿ ಆಟ: ಮೌರ್ಯ ಕಥೆ ಮುಗಿಸಿಲ್ಲ, ಅದೆಲ್ಲ ನಾಟಕ. ಮುಂದೇನಾಗಲಿದೆ ಗೊತ್ತೇ??
Lakshana: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷಣ (Lakshana) ಧಾರವಾಹಿ ಈಗ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ನಕ್ಷತ್ರ ಮತ್ತು ಸಿಎಸ್ ಗೆ ತೊಂದರೆ ಕೊಡುತ್ತಿದ್ದ ಮೌರ್ಯನನ್ನು ಸಿಎಸ್ ಶೂಟ್ ಮಾಡಿ, ಕೊಲೆ ಮಾಡಿದ್ದಾರೆ. ನಕ್ಷತ್ರಳನ್ನು ಕಿಡ್ನ್ಯಾಪ್ ಮಾಡುವ ಹಾಗೆ ಹೊಸ ಪ್ಲಾನ್ ಮಾಡಿದ ಸಿಎಸ್, ಅದೇ ಸ್ಥಳಕ್ಕೆ ಮೌರ್ಯ ಬರುವ ಹಾಗೆ ಮಾಡುತ್ತಾನೆ., ಸಿಎಸ್ ನಿರೀಕ್ಷೆಯ ಹಾಗೆ ಮೌರ್ಯ ಬಂದಾಗ, ಅವನಿಗೆ ವಾರ್ನಿಂಗ್ ಕೊಟ್ಟು ಸಿಎಸ್ ಮೌರ್ಯನಿಗೆ ಶೂಟ್ ಮಾಡಿದ್ದಾನೆ. ಇದನ್ನು ನಕ್ಷತ್ರ ಕಣ್ಣಾರೆ ನೋಡಿ, ತನ್ನ ತಂದೆಯ ಮೇಲೆ ಬೇಸರ ಮಾಡಿಕೊಂಡಿದ್ದಾಳೆ.
ಈಗ ನಕ್ಷತ್ರ ಮೌರ್ಯ ಮಾಡಿದ್ದು ತಪ್ಪು ಎನ್ನುವುದಾದರೆ, ತನ್ನ ತಂದೆ ಮಾಡಿದ್ದು ಕೂಡ ತಪ್ಪೇ ಎಂದು, ತಂದೆಯ ವಿರುದ್ಧ ಪೊಲೀಸರಲ್ಲಿ ದೂರು ಕೊಟ್ಟು, ಅವಶ್ಯಕತೆ ಇದ್ದರೆ ತಾನೇ ಬಂದು ಸಾಕ್ಷಿ ಹೇಳುವುದಾಗಿ ಹೇಳಿದ್ದಾಳೆ ನಕ್ಷತ್ರ. ಇದರಿಂದ ನಕ್ಷತ್ರಾಳಿಗೆ ಗಂಡನ ಮನೆ ಮತ್ತು ತವರು ಮನೆ ಎರಡು ಕಡೆಯಲ್ಲೂ ಯಾರು ಇಲ್ಲದೆ ಇರುವ ಹಾಗೆ ಆಗಿದೆ. ಸಿಎಸ್ ಅವರನ್ನು ಪೊಲೀಸರು ಕರೆದುಕೊಂಡು ಹೋಗುವಾಗ, ಭೂಪತಿ ತಾಯಿ ಸಿಎಸ್ ನೋಡಿ ಬಯ್ಯಲು, ಜೋರಾಗಿ ಕಿರುಚಾಡಲು ಶುರು ಮಾಡುತ್ತಾರೆ. ಇತ್ತ ನಕ್ಷತ್ರಳಿಗೆ ತನ್ನ ತಂದೆಯ ವಿರುದ್ಧ ಕಂಪ್ಲೇಂಟ್ ಕೊಟ್ಟಿರೋದಕ್ಕೆ ತಾಯಿ ನಕ್ಷತ್ರ ಜೊತೆಗೆ ಮಾತಾಡ್ತಾ ಇಲ್ಲ.. ಇದನ್ನು ಓದಿ.. Kannada News: ದಿಡೀರ್ ಎಂದು ಫ್ಲೈಟ್ ಹತ್ತಿದ್ದ ವಸಿಷ್ಠ ಹಾಗೂ ಹರಿಪ್ರಿಯಾ. ಯಪ್ಪಾ ಮದುವೆಗೂ ಮುನ್ನವೇ ಹೋಗಿದ್ದು ಎಲ್ಲಿಗೆ ಗೊತ್ತೇ??
ಇನ್ನು ಗಂಡನ ಮನೆಯಲ್ಲಿ ನಕ್ಷತ್ರಾಳ ಮೇಲೆ ಎಲ್ಲರು ಕೋಪ ಮಾಡಿಕೊಂಡಿದ್ದಾರೆ. ಭೂಪತಿ ಅತ್ತಿಗೆ ನಕ್ಷತ್ರ ಜೊತೆಗೆ ಮಾತನದಿದ್ದಕ್ಕೆ ಭೂಪತಿಯ ಅಣ್ಣಂದಿರು ಕೋಪ ಮಾಡಿಕೊಂಡಿದ್ದರು. ಇದು ಧಾರವಾಹಿಯಲ್ಲಿ ಸಧ್ಯಕ್ಕೆ ನಡೆಯುತ್ತಿರುವ ಕಥೆಯಾದರೆ, ಅಸಲಿ ವಿಚಾರ ಬೇರೆಯೇ ಇದೆ. ಸಿಎಸ್ ನಿಜವಾಗಿಯೂ ಮೌರ್ಯನನ್ನು ಕೊಲೆ ಮಾಡಿಲ್ಲ. ಅವನಿಗೆ ಬುದ್ಧಿ ಕಲಿಸಲು ಲಾಕ್ ಮಾಡಿದ್ದಾನೆ, ಮೌರ್ಯನನ್ನು ಜೈಲಿಗೆ ಮತ್ತೆ ಕಳಿಸುವುದಕ್ಕಿಂತ ಮೊದಲು, ಡೆವಿಲ್ ಬಗ್ಗೆ ತಿಳಿದುಕೊಂಡು, ಡೆವಿಲ್ ಅನ್ನು ಹಿಡಿಯಲು ಸಿಎಸ್ ಈ ಹೊಸ ಪ್ಲಾನ್ ಮಾಡಿದ್ದಾರೆ. ಇದನ್ನು ಓದಿ.. Rashmika Mandanna: ನಾನೇ ಎಲ್ಲಾ ಎಂದು ಮೆರೆಯುತ್ತಿದ್ದ ರಶ್ಮಿಕಾಗೆ ಬಿಗ್ ಶಾಕ್: ಮತ್ತೊಂದು ಬಿಗ್ ಶಾಕ್. ಏನಾಗಿದೆ ಗೊತ್ತೇ?? ಇದು ಕನ್ನಡಿಗರ ಹವಾ ಅಂದ್ರೆ.