Kannada News: ಸಿನಿಮಾ ಸೋಲುತ್ತಿರುವಾಗ, ಹಣ ಗಳಿಸಲು ಹೊಸ ಮಾರ್ಗ ಹುಡುಕಿಕೊಂಡ ರಶ್ಮಿಕಾ: ಒಟ್ಟಿನಲ್ಲಿ ಹಣ ಮಾಡಿಟ್ಟಿರಿ ಎಂದು ಬೇಸರಗೊಂಡ ಫ್ಯಾನ್ಸ್.
Kannada News: ನಟಿ ರಶ್ಮಿಕಾ ಮಂದಣ್ಣ ಅವರು ಈಗ ನ್ಯಾಷನಲ್ ಕ್ರಶ್ ಎಂದೇ ಖ್ಯಾತಿಯಾಗಿದ್ದಾವ. ಪುಷ್ಪ ಸಿನಿಮಾದ ಸಕ್ಸಸ್ ಇವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು. ಆದರೆ ರಶ್ಮಿಕಾ ಮಂದಣ್ಣ ಅವರಿಗೆ ಈಗ ಇಷ್ಟು ದಿವಸ ಇದ್ದಿದ್ದ ಎಲ್ಲಾ ಲಕ್ ಗಳು ಒಂದೊಂದಾಗಿ ಕಳಚಿ ಹೋಗುವ ಹಾಗೆ ಕಾಣುತ್ತಿದೆ. ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾ ತಂಡದ ಹೆಸರು ಹೇಳುವುದಕ್ಕೂ ಹಿಂಜರಿದ ರಶ್ಮಿಕಾ ಅವರ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ, ರಶ್ಮಿಕಾ ಅವರನ್ನು ಕನ್ನಡ ಇಂಡಸ್ಟ್ರಿ ಇಂದ ಬ್ಯಾನ್ ಮಾಡಲಾಗಿದೆ ಎನ್ನುವ ಮಾತು ಸಹ ಕೇಳಿಬಂದಿತ್ತು.
ಅದಾದ ಬಳಿಕ ರಶ್ಮಿಕಾ ಅವರು ಆಭರಣಗಳ ಜಾಹೀರಾತುಗಳನ್ನು ಕಳೆದುಕೊಂಡಿದ್ದಾರೆ ಎನ್ನುವ ಮಾತು ಕೂಡ ಕೇಳುಬಂದಿತ್ತು. ಆದರೆ ಈಗ ಅದೆಲ್ಲವನ್ನು ಮೀರಿ ಮತ್ತೊಂದು ವಿಚಾರ ಸದ್ದು ಮಾಡುತ್ತಿದೆ. ಬಹುಶಃ ಈ ವಿವಾದಗಳಿಂದ ರಶ್ಮಿಕಾ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆ ಆದ ಹಾಗೆ ಕಾಣಿಸುತ್ತಿದೆ. ಹಾಗಾಗಿ ರಶ್ಮಿಕಾ ಅವರು ಈಗ ಮತ್ತೊಂದು ದೊಡ್ಡ ನಿರ್ಧಾರ ತೆಗೆದುಕೊಂಡಿರುವ ಹಾಗೆ ಕಾಣುತ್ತಿದೆ. ಅದೇನೆಂದರೆ ಇದೀಗ ರಶ್ಮಿಕಾ ಮಂದಣ್ಣ ಅವರು ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ಯೆಸ್ ಅಂದಿದ್ದಾರೆ ಎಂದು ತಿಳಿದುಬಂದಿದೆ.
ರಶ್ಮಿಕಾ ಮಂದಣ್ಣ ಅವರು ಈಗ ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಮತ್ತು ತ್ರಿವಿಕ್ರಂ ಅವರ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕುವುದಕ್ಕೆ ರಶ್ಮಿಕಾ ಅವರು ಓಕೆ ಅಂದಿದ್ದಾರಂತೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಮತ್ತು ಶ್ರೀಲೀಲಾ ನಾಯಕಿಯರಾಗಿದ್ದಾರೆ. ಈ ಸಿನಿಮಾದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ದುಬಾರಿ ಸಂಭಾವನೆಯನ್ನೇ ಬೇಡಿಕೆ ಇಟ್ಟಿದ್ದಾರಂತೆ. ಇದೀಗ ನೆಟ್ಟಿಗರು ಹೀರೋಯಿನ್ ಆಗಿ ಅವಕಾಶ ಸಿಗದ ಕಾರಣ ರಶ್ಮಿಕಾ ಅವರು ಹೀಗೆ ಐಟಂ ಸಾಂಗ್ ಮಾಡೋದಕ್ಕೂ ಇಳಿದ್ರ ಎಂದು ಟೀಕೆ ಮಾಡುತ್ತಿದ್ದಾರೆ.