Kannada News: ದಿಡೀರ್ ಎಂದು ಫ್ಲೈಟ್ ಹತ್ತಿದ್ದ ವಸಿಷ್ಠ ಹಾಗೂ ಹರಿಪ್ರಿಯಾ. ಯಪ್ಪಾ ಮದುವೆಗೂ ಮುನ್ನವೇ ಹೋಗಿದ್ದು ಎಲ್ಲಿಗೆ ಗೊತ್ತೇ??
Kannada News: ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಇಬ್ಬರು ಕೂಡ ಕೆಲವು ದಿನಗಳಿಂದ ಭಾರಿ ಸುದ್ದಿಯಾಗುತ್ತಿದ್ದಾರೆ. ಇವರಿಬ್ಬರು ಪ್ರೀತಿ ಮಾಡುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಸುದ್ದಿಗಳು ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಆದರೆ ಈ ಮದುವೆ ವದಂತಿ ಬಗ್ಗೆ ಇವರಿಬ್ಬರು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಗಾಸಿಪ್ ಗಳ ನಡುವೆಯೇ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇಬ್ಬರು ಕೂಡ ಕೈಕೈ ಹಿಡಿದು ಬೆಂಗಳೂರು ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದರು. ಇವರಿಬ್ಬರು ಎಲ್ಲಿಗೆ ಹೋಗುತ್ತಿದ್ದಾರೆ ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿತ್ತು…
ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದರು ಕೂಡ, ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇಬ್ಬರನ್ನು ಗುರುತಿಸಬಹುದಿತ್ತು. ಈ ಜೋಡಿ ಜೊತೆಯಾಗಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗಿತ್ತು, ಅದೀಗ ನಿಜವಾಗಿದ್ದು, ಹರಿಪ್ರಿಯಾ ಅವರು ಭುರ್ಜ್ ಖಲೀಫಾ ಎದುರು ಇರುವ ಮನೆಯಲ್ಲಿ ಕುಳಿತು ಬೃಹತ್ ಭುರ್ಜ್ ಖಲೀಫಾ ವೀಕ್ಷಿಸುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ, ಇತ್ತ ವಸಿಷ್ಠ ಸಿಂಹ ಅವರು ರೆಡ್ ಸ್ಯಾಂಡ್ ಡೆಸರ್ಟ್ ನಲ್ಲಿರುವ ಫೋಟೋಸ್ ಶೇರ್ ಮಾಡಿದ್ದಾರೆ. ಇವರಿಬ್ಬರ ಮದುವೆ ಸುದ್ದಿ ನಿಜವೇ ಎಂದು ಕೇಳಲು ಮಾಧ್ಯಮದವರು ಇವರನ್ನು ಸಂಪರ್ಕಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ದಿಡೀರ್ ಎಂದು ಮನೆ ಬಿಟ್ಟು ಹೊರಟ ನಾಗ ಚೈತನ್ಯ. ಟೆನ್ಶನ್ ನಲ್ಲಿ ನಾಗಾರ್ಜುನ; ಏನಾಗಿದೆ ಗೊತ್ತೇ?

ಆದರೆ ಮಾಧ್ಯಮದವರ ಕರೆಗಳನ್ನು ಈ ಜೋಡಿ ಸ್ವೀಕರಿಸುತ್ತಿಲ್ಲ. ಇದೀಗ ಈ ಜೋಡಿ, ದುಬೈಗೆ ಹೋಗಿರುವುದಾದರು ಯಾಕೆ ಎಂದು ಅಭಿಮಾನಿಗಳು ಕೂಡ ತಲೆಕೆಡಿಸಿಕೊಂಡಿದ್ದಾರೆ. ಇಬ್ಬರು ಜೊತೆಯಾಗಿ ದುಬೈನಲ್ಲಿ ಇರುವುದಂತು ಪಕ್ಕಾ ಆಗಿದ್ದು, ಅಲ್ಲಿಗೆ ಹೋಗಿರುವುದು ಯಾಕೆ, ಇವರಿಬ್ಬರು ನಿಜಕ್ಕೂ ಮದುವೆ ಆಗುತ್ತಿದ್ದಾರಾ ಅಥವಾ ಇಲ್ಲವಾ, ಈ ಎಲ್ಲಾ ಪ್ರಶ್ನೆಗಳಿಗೂ ಈ ಜೋಡಿ ಉತ್ತರ ಕೊಡಬೇಕಿದೆ. ಮುಂಬರುವ ದಿನಗಳಲ್ಲಿ ಈ ವಿಷಯದ ಬಗ್ಗೆ ಏನು ಹೇಳುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Shalini Pandey: ಮತ್ತೊಮ್ಮೆ ರೊಚ್ಚಿಗೆದ್ದ ಅರ್ಜುನ್ ರೆಡ್ಡಿ ನಟಿ ಶಾಲಿನಿ ಪಾಂಡೆ. ಈ ಫೋಟೋ ನೋಡಿ ಹುಗುಗರ ತಲೆ ತಿರುಗೋದು ಪಕ್ಕ.