ಸಿನಿಮಾ ಗಿಂತಲೂ ಇವರು ಹೆಚ್ಚಾಗಿ ದುಡಿಯುವುದು ಎಲ್ಲಿ ಗೊತ್ತೇ?? ಅದೊಂದೇ ರೀತಿಯಲ್ಲಿ ಎಷ್ಟು ದುಡಿಯುತ್ತಾರೆ ಗೊತ್ತೇ?
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಎಷ್ಟು ಅಭಿವೃದ್ಧಿಯಾಗಿದೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಎಲ್ಲರು ಸೋಶಿಯಲ್ ಮೀಡಿಯಾ ಬಳಸುತ್ತಿದ್ದಾರೆ. ಇವುಗಳ ಮೂಲಕ ಒಳ್ಳೆ ಪಾಪ್ಯುಲಾರಿಟಿ ಪಡೆಯುವುದರ ಜೊತೆಗೆ ಭರ್ಜರಿ ಆದಾಯವನ್ನೂ ಪಡೆಯುತ್ತಿದ್ದಾರೆ. ಅದರಲ್ಲೂ ಸಿನಿಮಾ ಸೆಲೆಬ್ರಿಟಿಗಳು ಸಿನಿಮಾಗಿಂತ ಹೆಚ್ಚಾಗಿ ಸೋಷಿಯಲ್ ಮೀಡಿಯಾ ಮೂಲಕ ಹೆಚ್ಚು ಸಂಪಾದನೆ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಅವರುಗಳು ಹಾಕುವ ಪೋಸ್ಟ್ ಗಳಿಗೆ ಲಕ್ಷಗಟ್ಟಲೆ ಹಣ ಪಡೆಯುತ್ತಾರೆ. ಇನ್ಸ್ಟಾಗ್ರಾಮ್ ಮೂಲಕ ಹೆಚ್ಚು ಸಂಪಾದನೆ ಮಾಡುತ್ತಿರುವ ಸಿನಿಮಾ ನಟಿಯರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..
ರಾಕುಲ್ ಪ್ರೀತ್ ಸಿಂಗ್ :- ತೆಲುಗಿನಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ್ದ ಕ್ಯೂಟ್ ನಟಿಯರಲ್ಲಿ, ರಾಕುಲ್ ಪ್ರೀತ್ ಸಿಂಗ್ ಕೂಡ ಒಬ್ಬರು. ಇವರು ಈಗ ಹಲವು ಬಾಲಿವುಡ್ ಸಿನಿಮಾಗಳಲ್ಲು ನಟಿಸುತ್ತಿದ್ದಾರೆ. ಇವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 22.8 ಮಿಲಿಯನ್ ಫಾಲೋವರ್ಸ್ ಇದ್ದಾರೆ. ರಾಕುಲ್ ಪ್ರೀತ್ ಸಿಂಗ್ ಅವರು ಪ್ರತಿ ಪೋಸ್ಟ್ ಗೆ 35 ಲಕ್ಷ ರೂಪಾಯಿ ಪಡೆಯುತ್ತಾರೆ..
ಕಾಜಲ್ ಅಗರ್ವಾಲ್ :- ಚಂದಮಾಮ ಸಿನಿಮಾ ಮೂಲಕ ಚಿರಪರಿಚಿತರಾಗಿ ನಂತರ ಎಲ್ಲಾ ಸ್ಟಾರ್ ಹೀರೋಗಳಿಗೆ ಹೀರೋಯಿನ್ ಆಗಿ ನಟಿಸಿ, ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿರುವ ಕಾಜಲ್ ಅವರರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 24.1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇವರು ಪ್ರತಿ ಪೋಸ್ಟ್ ಗೆ ಸುಮಾರು 32 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.
ಪೂಜಾ ಹೆಗ್ಡೆ :- ಪ್ರಸ್ತುತ ಟಾಪ್ ಹೀರೋಯಿನ್ ಆಗಿ ಫೇಮಸ್ ಆಗಿರುವ, ಈ ಚೆಲುವೆಗೆ ಇನ್ಸ್ಟಾಗ್ರಾಮ್ ನಲ್ಲಿ 21.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇವರು ಪ್ರತಿ ಪೋಸ್ಟ್ ಗೆ 20 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಮಂತಾ :- ಸೌತ್ ಇಂಡಿಯಾದಲ್ಲಿ ಸ್ಟಾರ್ ಹೀರೋಯಿನ್ ಆಗಿ ನಿಂತಿರುವ ಸಮಂತಾ ಅವರಿಗೆ ಈಗ ಬಾಲಿವುಡ್ ನಲ್ಲಿ ಕೂಡ ಸಾಲು ಸಾಲು ಅವಕಾಶಗಳು ಬರುತ್ತಿವೆ. ಸಮಂತಾ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ 24 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಪ್ರತಿ ಪೋಸ್ಟ್ ಗೆ 20 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಸಮಂತಾ.
ರಶ್ಮಿಕಾ ಮಂದಣ್ಣ :- ಪುಷ್ಪ ಚಿತ್ರದ ಮೂಲಕ ಭಾರತದಾದ್ಯಂತ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲೋವರ್ಸ್ ಇದ್ದಾರೆ. ರಶ್ಮಿಕಾ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ 35.3 ಮಿಲಿಯನ್ ಫಾಲೋವರ್ಸ್ ಇದ್ದು, ಅವರು ಪ್ರತಿ ಪೋಸ್ಟ್‌ಗೆ 40 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ರಶ್ಮಿಕಾ ಮಂದಣ್ಣ.
ಜೆನಿಲಿಯಾ :- ಒಂದು ಕಾಲದಲ್ಲಿ ಟಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ್ದ ಜೆನಿಲಿಯಾ ಅವರು ಪ್ರತಿ ಪೋಸ್ಟ್ ಗೆ 40 ಲಕ್ಷ ರೂಪಾಯಿ ಪಡೆಯುತ್ತಾರೆ. ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ 11 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇವರು ಮಾತ್ರವಲ್ಲದೆ ಹಲವಾರು ಜನರು ಸಾಮಾಜಿಕ ಜಾಲತಾಣಗಳ ಮೂಲಕ ಗಳಿಸುತ್ತಿದ್ದಾರೆ.