ಬಿಗ್ ಬಾಸ್ ಮನೆಯಿಂದ ಹೊರಬಂದ ವಿನೋದ್ ರವರಿಗೆ ಬಿಗ್ ಬಾಸ್ ಕೊಟ್ಟ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ?? ಇಷ್ಟೇನಾ?
ಬಿಗ್ ಬಾಸ್ ಸೀಸನ್ 9ರ 9ನೇ ವಾರದ ಎಲಿಮಿನೇಶನ್ ಮುಗಿದಿದೆ. ಈ ವಾರದ ಎಲಿಮಿನೇಷನ್ ನಲ್ಲಿ ಮನೆಯಿಂದ ಹೊರಗೆ ಬಂದಿರುವುದು ವಿನೋದ್ ಗೊಬ್ಬರಗಾಲ ಅವರು. ಬಹಳ ಸ್ಟ್ರಾಂಗ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ವಿನೋದ್ ಅವರು ಎಲಿಮಿನೇಟ್ ಆಗಿರುವುದು ನಿಜಕ್ಕೂ ಎಲ್ಲರಿಗು ಶಾಕ್ ಆಗಿದೆ. ವಿನೋದ್ ಅವರಿಗೆ ಫಿನಾಲೆವರೆಗು ತಲುಪುವ ಸಾಮರ್ಥ್ಯ ಇರುವ ಆಟಗಾರ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ವಿನೋದ್ ಅವರು ಎಲಿಮಿನೇಟ್ ಆಗಿರುವುದು ಶಾಕ್ ಆಗಿದೆ.
ವಿನೋದ್ ಗೊಬ್ಬರಗಾಲ ಅವರು ಮಜಾಭಾರತ ಶೋ ಮೂಲಕ ಗುರುತಿಸಿಕೊಂಡಿದ್ದರು, ಇವರ ಕಾಮಿಡಿ ಟೈಮಿಂಗ್ ಮತ್ತು ಅಭಿನಯದ ಮೂಲಕ ಎಲ್ಲರನ್ನು ನಕ್ಕು ನಗಿಸುತ್ತಿದ್ದರು ವಿನೋದ್ ಗೊಬ್ಬರಗಾಲ. ಬಿಗ್ ಬಾಸ್ ಮನೆಗೆ ಬಂದಾಗಲು ಸಹ, ಆರಂಭದಿಂದಲೂ ತಮಾಷೆ ಮಾಡುತ್ತಾ, ಟಾಸ್ಕ್ ಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರು, ಮೊದಲ ವಾರವೇ ಟಾಸ್ಕ್ ಗೆದ್ದು ಕ್ಯಾಪ್ಟನ್ ಆಗಿದ್ದರು ವಿನೋದ್.
ಇಂತಹ ವಿನೋದ್ ಅವರು ಇಷ್ಟು ಬೇಗ ಎಲಿಮಿನೇಟ್ ಆಗುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ. ಈ ವಾರ ವಿನೋದ್ ಮತ್ತು ಆರ್ಯವರ್ಧನ್ ಗುರೂಜಿ ಒಂದು ಟಾಸ್ಕ್ ನಲ್ಲಿ ರೂಲ್ಸ್ ಬ್ರೇಕ್ ಮಾಡಿದರು, ಅದರ ಬಗ್ಗೆ ಸುದೀಪ್ ಅವರು ಸಹ ಮಾತನಾಡಿದರು. ಅದೇ ಕಾರಣದಿಂದಲೋ ಏನೋ, ವಿನೋದ್ ಅವರು ಎಲಿಮಿನೇಟ್ ಆಗಿದ್ದಾರೆ. ಇನ್ನು ವಿನೋದ್ ಅವರಿಗೆ ಸಿಕ್ಕಿರುವ ಸಂಭಾವನೆ ಎಷ್ಟಿರಬಹುದು ಎನ್ನುವ ಮಾತು ಕೇಳಿಬರುತ್ತಿದ್ದು, ವಾರಕ್ಕೆ 15 ಸಾವಿರ ರೂಪಾಯಿಯ ಹಾಗೆ, 9 ವಾರಕ್ಕೆ 1.35 ಲಕ್ಷ ರೂಪಾಯಿ ಸಂಭಾವನೆ ವಿನೋದ್ ಅವರಿಗೆ ಸಿಕ್ಕಿದೆ.