ಕಿರುತೆರೆಯಲ್ಲಿ ಅಮ್ಮನ ಪಾತ್ರದ ಮೂಲಕ ಫೇಮಸ್ ಆಗಿದ್ದ ನಟಿಗೆ ಮದುವೆ. ಅದೆಷ್ಟು ಚಿಕ್ಕವರು ಗೊತ್ತೇ?? ವಯಸ್ಸು ಎಷ್ಟು ಗೊತ್ತೇ??
ಕಿರುತೆರೆ ಲೋಕದಲ್ಲಿ ಸಕ್ರಿಯವಾಗಿರುವ ಸಾಕಷ್ಟು ನಟಿಯರು ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಹೆಚ್ಚು ಮದುವೆಗಳು ನಡೆಯುತ್ತಿದೆ ಎಂದು ಹೇಳಬಹುದು. ಇದೀಗ ಕಿರುತೆರೆಯಲ್ಲಿ ಅಮ್ಮನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ನಟಿ ಸ್ವಾತಿ ಅವರು ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ವಾತಿ ಅವರು ಗಟ್ಟಿಮೇಳ, ಕನ್ಯಾಕುಮಾರಿ ಹಾಗೂ ಇನ್ನಿತರ ಧಾರವಾಹಿಗಳಲ್ಲಿ ಅಮ್ಮನ ಪಾತ್ರದಲ್ಲಿ ನಟಿಸಿದ್ದರು.
ಈ ನಟನೆಯ ಪ್ರಪಂಚದಲ್ಲಿ ಯಾವ ಪಾತ್ರ ಯಾರಿಗೆ ಯಾವಾಗ ಸಿಗುತ್ತದೆ ಎಂದು ಹೇಳೋದಕ್ಕೆ ಆಗುವುದಿಲ್ಲ. ಚಿಕ್ಕ ವಯಸ್ಸಿನವರೆ ಆಗಿರುವ ಸ್ವಾತಿ ಅವರು ಈಗ ಹೆಚ್ಚಾಗಿ ಗುರಿತಿಸಿಕೊಂಡಿದ್ದೆ ಅಮ್ಮನ ಪಾತ್ರದಲ್ಲಿ, ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯ ಕನ್ಯಾಕುಮಾರಿ ಧಾರವಾಹಿ ಮೂಲಕ ಹೆಚ್ಚು ಸದ್ದು ಮಾಡಿದ್ದರು. ನಾಯಕಿ ಕನ್ನಿಕಾ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಸ್ವಾತಿ. ಇದೀಗ ಇವರು ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ..
ಸ್ವಾತಿ ಅವರು ಮದುವೆಯಾಗಿರುವ ಹುಡುಗನ ಹೆಸರು ನಾಗಾರ್ಜುನ ರವಿ. ಈ ಜೋಡಿಯ ಮದುವೆ ಮೈಸೂರಿನಲ್ಲೇ ನಡೆದಿದೆ. ಕಿರುತೆರೆಯ ಹಲವು ಕಲಾವಿದರು ಸ್ವಾತಿ ಅವರ ಮದುವೆಗೆ ಬಂದು ಶುಭಕೋರಿದ್ದಾರೆ. ಕನ್ಯಾ ಕುಮಾರಿ ಸೀರಿಯಲ್ ಮೂಲಕ ಗುರುತಿಸಿಕೊಂಡಿದ್ದ ಕನ್ನಿಕಾ ಮತ್ತು ಚರಣ್ ಸಹ ಬಂದಿದ್ದಾರೆ. ಇವರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕೂಡ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಶುಭಕೋರಿದ್ದಾರೆ.