ಸ್ವಂತ ಅಣ್ಣನ ಮೇಲೆಯೇ ದೀಪಿಕಾ ದಾಸ್ ರವರಿಗೆ ಬಾರಿ ಕೋಪ: ಕಾರಣ ಏನಂತೆ ಗೊತ್ತೇ?? ತಿಳಿದರೆ ನೀವು ಸರಿ ಅಂತೀರೇನೋ.
ಬಿಗ್ ಬಾಸ್ ಕನ್ನಡ ಸೀಸನ್ 9ಗೆ ದೀಪಿಕಾ ದಾಸ್ ಅವರು ಈಗ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ವಾಪಸ್ ಬಂದಿದ್ದಾರೆ. ದೀಪಿಕಾ ಅವರು ಬಂದಿದ್ದು, ಅಭಿಮಾನಿಗಳಿಗೆ ಮತ್ತು ಮನೆಯ ಸ್ಪರ್ಧಿಗಳಿಗೆ ಸಂತೋಷ ತಂದಿತ್ತು, ಬಿಗ್ ಬಾಸ್ ಮನೆಯಲ್ಲಿ ಈ ಸಾರಿ, ಕಾಡಿನ ಟಾಸ್ಕ್ ಕೊಡಲಾಗಿತ್ತು. ಟಾಸ್ಕ್ ನ ನಡುವೆ ಮನೆಯ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಚಟುವಟಿಕೆ ನೀಡಿದರು, ಅದು ಎಲ್ಲಾ ಸ್ಪರ್ಧಿಗಳು ತಮ್ಮ ಜೀವನದಲ್ಲಿ ಎದುರಿಸಿದ ಅತ್ಯಂತ ಕ್ಷಣಗಳ ಬಗ್ಗೆ ಮಾತನಾಡಬೇಕಿತ್ತು. ಆ ಚಟುವಟಿಕೆಯಲ್ಲಿ ಎಲ್ಲರೂ ತಮ್ಮ ಜೀವನದ ಕ್ಷಣಗಳ ಬಗ್ಗೆ ಮಾತನಾಡಿದ್ದಾರೆ.
ಆಗ ದೀಪಿಕಾ ದಾಸ್ ಅವರು ಕೂಡ ಜೀವನದಲ್ಲಿ ತಾವು ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ, ತಮ್ಮ ಅಣ್ಣನಿಂದಲೇ ದೀಪಿಕಾ ಅವರಿಗೆ ಬಹಳ ನೋವಾಗಿತ್ತಂತೆ. 7 ವರ್ಷಗಳ ಹಿಂದೆ ತಂದೆ ತೀರಿ ಹೋದಾಗ, ದೀಪಿಕಾ ಅವರ ಮನೆಯಲ್ಲಿ ಘಟನೆ ನಡೆದು ಒಂದು ವರ್ಷದ ಒಳಗೆ ಮದುವೆ ಮಾಡಬೇಕು ಎಂದು, ಮಾತು ಬಂತಂತೆ. ಆಗ ದೀಪಿಕಾ ದಾಸ್ ಅವರು ಚಿಕ್ಕವರಾಗಿದ್ದ ಕಾರಣ ಮದುವೆ ಆಗುವುದಿಲ್ಲ ಎಂದಿದ್ದಕ್ಕೆ ಅವರ ಅಣ್ಣನಿಗೆ ಮದುವೆ ಮಾಡಿದ್ದಾರೆ. ಮದುವೆಯಾದ ಎರಡೇ ದಿನಕ್ಕೆ, ದೀಪಿಕಾ ಅವರ ಅಣ್ಣ ಏನೋ ವಿಚಾರಕ್ಕೆ ತಂಗಿ ಮತ್ತು ತಾಯಿಯ ಮೇಲೆ ರೇಗಿದ್ದರಂತೆ. ಆ ಕ್ಷಣ ಎಲ್ಲರೂ ದೀಪಿಕಾ ದಾಸ್ ಅವರ ಮನೆಯಿಂದ ಹೊರಟು ಹೋದರಂತೆ.
ಆಗ ಯಾರು ಇಲ್ಲದೆ ಒಬ್ಬಂಟಿಯ ಅನುಭವ ದೀಪಿಕಾ ಮತ್ತು ಅವರ ತಾಯಿಗೆ ಉಂಟಾಯಿತು. ಆಗ ಮನೆಯಲ್ಲಿದ್ದ ಎಲ್ಲಾ ಗೆಸ್ಟ್ ಗಳು ಕೂಡ ಹೊರಟು ಹೋದರಂತೆ. ಅಣ್ಣ ಅತ್ತಿಗೆ ಕೂಡ ಮನೆಯಿಂದ ಹೊರಟು ಹೋದರಂತೆ. ಆ ಕ್ಷಣ ಬಹಳ ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ ದೀಪಿಕಾ ದಾಸ್. ಈಗ ಅಣ್ಣನ ಜೊತೆಗೆ ಚೆನ್ನಾಗಿದ್ದು, ಎಲ್ಲರೂ ಜೊತೆಯಾಗಿದ್ದರು ಕೂಡ, ಆ ದಿನ ನಡೆದ ಘಟನೆಯನ್ನು ಮರೆಯಲು ಸಾಧ್ಯವಿಲ್ಲ ಎನ್ನುವುದು ದೀಪಿಕಾ ದಾಸ್ ಅವರಿಗೆ ಇರುವ ನೋವು ಇದೆ. ಈಗಲೂ ಕೆಲವೊಮ್ಮೆ ಮಾತನಾಡುವಾಗ, ಇದನ್ನು ಅಣ್ಣನ ಜೊತೆಗು ಹೇಳುತ್ತಾರಂತೆ.