ತಾನು ಯಾಕೆ ಮದುವೆಯಾಗಿಲ್ಲ ಎಂಬುದಕ್ಕೆ ಕಾರಣ ನೀಡಿದ ಒಂದು ಕಾಲ ಟಾಪ್ ನಟಿ ರಮ್ಯಾ. ಹೇಳಿದ್ದೇನು ಗೊತ್ತೇ??
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರಿಗೆ ಆಗ ಹೇಗಿತ್ತು ಈಗಲೂ ಅದೇ ರೀತಿ ಬೇಡಿಕೆ ಇದೆ. ರಮ್ಯಾ ಅವರು ಬಹಳ ವರ್ಷಗಳ ನಂತರ ಉತ್ತರಕಾಂಡ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬಹಳ ಸಂತೋಷ ನೀಡಿರುವ ವಿಚಾರ. ಈಗಾಗಲೇ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಶುರು ಮಾಡಿ, ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾ ಚಿತ್ರೀಕರಣ ಕೂಡ ಮುಗಿದಿದೆ. ಸಿನಿಮಾ ವಿಚಾರಗಳ ಜೊತೆಗೆ ರಮ್ಯಾ ಅವರು ಹೆಚ್ಚು ಸುದ್ದಿಯಾಗುವುದು ಮದುವೆ ವಿಚಾರದಿಂದ.
ರಮ್ಯಾ ಅವರು ಇನ್ನು ಮದುವೆಯಾಗಿಲ್ಲ ಎನ್ನುವ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ರಮ್ಯಾ ಅವರು ಕಾಲೇಜು ಕಾರ್ಯಕ್ರಮ ಒಂದಕ್ಕೆ ಹೋದಾಗ, ಅಲ್ಲಿನ ವಿದ್ಯಾರ್ಥಿಗಳು ಕೂಡ ರಮ್ಯಾ ಅವರಿಗೆ ಇದೇ ಪ್ರಶ್ನೆ ಕೇಳಿದ್ದಾರೆ, ಮೇಡಂ ಮದುವೆ ಆಗ್ತೀರಾ ಎಂದು ಕೇಳಿದ್ದಕ್ಕೆ, “ಮದುವೆ ಯಾಕ್ ಆಗ್ಬೇಕು ಗೊತ್ತಿಲ್ಲಪ್ಪ..” ಎಂದಿದ್ದಾರೆ. ಆಗ ವಿದ್ಯಾರ್ಥಿಗಳು ಕೂಡ ನಮಗೂ ಅದೇ ಬೇಕಿರೋದು, ಮದುವೆ ಆಗಬೇಡಿ..ಎಂದಿದ್ದಾರೆ. ಆಗ ರಮ್ಯಾ ಅವರು, “ಈಗ ಮದುವೆ ಆಗಬಾರದು ಅಲ್ವಾ, ಆಯ್ತು ನಾನ್ ಮದುವೆ ಆಗಲ್ಲ. ಅದೇ ಬೆಸ್ಟ್.. ನನಗೆ ಗೊತ್ತು..” ಎಂದಿದ್ದಾರೆ ನಟಿ ರಮ್ಯಾ.
ಇನ್ನು ಮುಂದುವರೆದು ಮಾತನಾಡಿ, “ಒಂದು ವೇಳೆ ನೀವು ಸಂತೋಷವಾಗಿರಬೇಕು ಅಥವಾ ಮದುವೆ ಆಗಬೇಕು ಎಂದು ಎರಡು ಆಪ್ಶನ್ ಕೊಟ್ರೆ, ನಾನು ಸಂತೋಷವಾಗಿ ಇರಬೇಕು ಅನ್ನೋದನ್ನ ಆಯ್ಕೆ ಮಾಡ್ತೀನಿ. ಅದರಿಂದ ನಾನು ಮದುವೆ ಆಗೋದಿಲ್ಲ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಆಗಿರೋದು ಮುಖ್ಯ..ಶಿಕ್ಷಣ ಕೂಡ ಮುಖ್ಯ. ನಿಮಗೆ ಸರಿಹೊಂದುವ ಸಂಗಾತಿ ಸಿಕ್ಕರೆ ಮದುವೆಯಾಗಿ, ಒತ್ತಡಕ್ಕೆ ಸಿಲುಕಿ ಮದುವೆ ಆಗಬೇಡಿ..ಪ್ರೀತಿ ಎನ್ನುವುದನ್ನು ಬಿಟ್ಟು ಇನ್ಯಾವುದೇ ಕಾರಣಕ್ಕೆ ಮದುವೆ ಆಗಬೇಡಿ.. ” ಎಂದು ಹೇಳಿದ್ದಾರೆ ನಟಿ ರಮ್ಯಾ. ಈ ಮೂಲಕ ತಾವು ಮದುವೆ ಆಗದೆ ಇರಲು ಕಾರಣ ತಿಳಿಸಿದ್ದಾರೆ.