ಸಾವಿನ ಮನೆಯಲ್ಲಿಯೂ ನಿಲ್ಲದ ಪವಿತ್ರ ಲೋಕೇಶ್-ನರೇಶ್ ಆಟ. ಏನಾಗಿದೆ ಎಂಬುದನ್ನು ಮೈಮರೆತು ಜೋಡಿ ಮಾಡಿದ್ದೇನು ಗೊತ್ತೇ??

64

Get real time updates directly on you device, subscribe now.

ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅವರ ಬಗ್ಗೆ ಒಂದಲ್ಲಾ ಒಂದು ಸುದ್ದಿಗಳು ಕೇಳಿಬರುತ್ತಲೇ ಇದೆ. ಕೆಲವು ತಿಂಗಳಿನಿಂದ ತೆಲುಗು ಮತ್ತು ಕನ್ನಡ ಮಾಧ್ಯಮಗಳಲ್ಲಿ ಇಬರ ಸುದ್ದಿ ಹಾಟ್ ಟಾಪಿಕ್ ಆಗಿದೆ ಎಂದೇ ಹೇಳಬಹುದು. ಏಕೆಂದರೆ ಈ ಜೋಡಿ, ಲಿವಿನ್ ರಿಲೇಶನ್ಷಿಪ್ ನಲ್ಲಿದ್ದಾರೆ ಎನ್ನುವ ಸುದ್ದಿ ಅಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ನರೇಶ್ ಅವರಿಗೆ ಅದಾಗಲೇ ಮೂರು ಮದುವೆ ಆಗಿದೆ, ಪವಿತ್ರಾ ಲೋಕೇಶ್ ಅವರು ನಟ ಸುಚೇಂದ್ರ ಪ್ರಸಾದ್ ಅವರೊಡನೆ ಮದುವೆ ಆಗಿದ್ದರು, ಆದರೆ ನರೇಶ್ ಅವರೊಡನೆ ವಾಸ ಮಾಡುತ್ತಿದ್ದರು.

ಇವರಿಬ್ಬರ ವಿಚಾರ, ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಈ ವಿಷಯಕ್ಕೆ ಎಂಟ್ರಿ ಕೊಟ್ಟ ನಂತರ ಇನ್ನಷ್ಟು ವಿಚಾರಗಳು ಬೆಳಕಿಗೆ ಬಂದವು. ರಮ್ಯಾ ಅವರು ಇವರಿಬ್ಬರ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು. ಇದೀಗ ಈ ಜೋಡಿ ಮತ್ತೊಂದು ವಿಚಾರಕ್ಕೆ ಭಾರಿ ಟೀಕೆಗೆ ಒಳಗಾಗಿದೆ. ನಮಗೆಲ್ಲ ಗೊತ್ತಿರುವ ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರು ಇತ್ತೀಚೆಗೆ ಮೃತರಾದರು. ಇವರ ಎರಡನೆಯ ಹೆಂಡತಿಯ ಮಗ ನರೇಶ್ ಅವರು. ಹಾಗಾಗಿ ಆ ಸಮಯದಲ್ಲಿ ನರೇಶ್ ಅವರು ಅಂತಿಮ ದರ್ಶನ ನಡೆಯುತ್ತಿದ್ದ ಸ್ಥಳದಲ್ಲೇ ಇದ್ದು, ಎಲ್ಲವನ್ನು ನೋಡಿಕೊಳ್ಳುತ್ತಿದ್ದರು.

ಜೊತೆಯಲ್ಲಿ ಪವಿತ್ರಾ ಲೋಕೇಶ್ ಸಹ ಇದ್ದರು. ಈ ಸಮಯದಲ್ಲಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಅವರ ಬಗ್ಗೆ ಕೆಲವು ವಿಚಾರಗಳು ವೈರಲ್ ಆಗಿದೆ, ಆ ದುಃಖದ ಸಮಯದಲ್ಲಿ ಮಹೇಶ್ ಬಾಬು ಅವರ ಕುಟುಂಬಕ್ಕೆ ಸಾಂತ್ವನ ಹೇಳುವುದನ್ನು ಬಿಟ್ಟು, ಇವರಿಬ್ಬರು ತಮ್ಮದೇ ಲೋಕದಲ್ಲಿದ್ದಾರೆ. ನರೇಶ್ ಅವರು ಪವಿತ್ರಾ ಲೋಕೇಶ್ ಅವರ ಭುಜದ ಮೇಲೆ ಕೈಹಾಕಿ ಕಾಣಿಸಿಕೊಂಡಿದ್ದಾರೆ. ಪವಿತ್ರಾ ಅವರು ಕಣ್ಣಿನಲ್ಲಿ, ಕಾಫಿ ಬೇಕಾ, ಇನ್ನು ಎಷ್ಟು ಹೊತ್ತು ಇಲ್ಲೇ ಇರಬೇಕು ಎಂದೆಲ್ಲಾ ಕಣ್ಣಿನಲ್ಲಿ ಸನ್ನೆ ಮಾಡಿದ್ದು, ಇದೆಲ್ಲವು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ, ಇದನ್ನು ನೋಡಿ ನೆಟ್ಟಿಗರು, ದುಃಖದ ಸಮಯದಲ್ಲಿ ಇದೆಲ್ಲಾ ಬೇಕಾ ಎಂದು ಇವರಿಬ್ಬರಿಗೆ ಛೀಮಾರಿ ಹಾಕಿದ್ದಾರೆ.

Get real time updates directly on you device, subscribe now.