Srinidhi Shetty: ಇಡೀ ದೇಶದ ಮನಗೆದ್ದಿರುವ ಶ್ರೀನಿಧಿ ಶೆಟ್ಟಿ ವಿಡಿಯೋ ಆಯಿತು ವೈರಲ್, ಅದೆಂತಹ ಅಂದ ಎಂದು ಮನಸೋತ ನೆಟ್ಟಿಗರು.
ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸುಂದರ ನಟಿ ಶ್ರೀನಿಧಿ ಶೆಟ್ಟಿ ಎಲ್ಲರ ಗಮನ ಸೆಳೆದಿದ್ದರು. ಕೆಜಿಎಫ್ ಚಿತ್ರದಲ್ಲಿ ಯಶ್ ಅವರಿಗೆ ನಾಯಕಿಯಾಗಿ ನಟಿಸಿ ಸಿನಿಪ್ರಿಯರನ್ನು ರಂಜಿಸಿದ್ದಾರೆ. ಇಬ್ಬರ ಕೆಮಿಸ್ಟ್ರಿ ಸಿನಿಮಾದಲ್ಲಿ ತುಂಬಾ ಚೆನ್ನಾಗಿತ್ತು. ಟಾಲಿವುಡ್ ಗೆ ಎಂಟ್ರಿ ಕೊಡಲು ರೆಡಿಯಾಗಿರುವ ಈ ನಟಿ ಸೋಷಿಯಲ್ ಮೀಡಿಯಾದಲ್ಲಿತುಂಬಾ ಆ್ಯಕ್ಟಿವ್ ಆಗಿರುತ್ತಾರೆ. ತಮ್ಮ ಸೌಂದರ್ಯಕ್ಕೆ ಸಂಬಂಧಿಸಿದ ಹಾಗೆ ಕೆಲವು ಫೋಟೋಗಳನ್ನು ಶೇರ್ ಮಾಡುತ್ತಾರೆ. ಶ್ರೀನಿಧಿ ಅವರ ಗ್ಲಾಮರ್ ಶೋ ನೋಡಿ ಹುಡುಗರು ಫಿದಾ ಆಗಿದ್ದಾರೆ. ಇತ್ತೀಚಿಗೆ ಈ ಬ್ಯೂಟಿ ಕ್ಯೂಟ್ ಲುಕ್ ನಲ್ಲಿ ಸದ್ದು ಮಾಡುತ್ತಿದ್ದಾರೆ.
ಶ್ರೀನಿಧಿ ಶೆಟ್ಟಿ ಅವರ ಮುದ್ದಾದ ಫೋಟೋಗಳು ವೈರಲ್ ಆಗುತ್ತಿವೆ. ಕೆಜಿಎಫ್ ಸಿನಿಮಾ ಇಂದ ಸಿಕ್ಕ ಜನಪ್ರಿಯತೆ ಎಲ್ಲರಿಗು ಗೊತ್ತಿದೆ. ಈ ಸಿನಿಮಾ ದೇಶಾದ್ಯಂತ ದಾಖಲೆಯ ಕಲೆಕ್ಷನ್ ಮಾಡಿದ್ದರಿಂದ, ನಾಯಕಿಯಾಗಿ ನಟಿಸಿದ್ದ ಶ್ರೀನಿಧಿ ಶೆಟ್ಟಿ ಅವರಿಗು ದೇಶಾದ್ಯಂತ ಒಳ್ಳೆಯ ಕ್ರೇಜ್ ಸಿಕ್ಕಿದೆ. ಈ ಯಂಗ್ ಹೀರೋಯಿನ್ ಬೆಳ್ಳಿತೆರೆಯಲ್ಲಿ ಟ್ರೆಂಡಿಯಾಗಿ ಕಂಡರೂ, ಟ್ರೆಡಿಷನಲ್ ಲುಕ್ ಜೊತೆಗೆ ಕೊಂಚ ಆಕರ್ಷಕ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಇಂಪ್ರೆಸ್ ಆಗಿದ್ದಾರೆ. ಸಾಂಪ್ರದಾಯಿಕ ಉಡುಪುಗಳಲ್ಲಿ ಇವರ ಸೌಂದರ್ಯವನ್ನು ನೋಡಲು ಅಭಿಮಾನಿಗಳು ಇಷ್ಟಪಡುಟ್ಟಿದ್ದಾರೆ. ಶ್ರೀನಿಧಿ ಶೆಟ್ಟಿ ಅವರು ಪೋಸ್ಟ್ ಮಾಡುವ ಫೋಟೋಗಳಿಗೆ ಲೈಕ್ ಗಳು ಮತ್ತು ಕಾಮೆಂಟ್ ಗಳು ಜೋರಾಗಿಯೇ ಬರುತ್ತಿದೆ.
ಈ ಯುವನಟಿ ಶ್ರೀನಿಧಿ ಶೆಟ್ಟಿ ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಅಲ್ಲಿ ಒಳ್ಳೆ ಹೆಸರು ಗಳಿಸಿದ್ದ ಈ ಚೆಲುವೆಗೆ ಚಿತ್ರರಂಗದಿಂದ ಸಿನಿಮಾ ಅವಕಾಶಗಳು ಬರತೊಡಗಿದವು. ಶ್ರೀನಿದ್ಜಿ ಶೆಟ್ಟಿ ಅವರು ತಮ್ಮ ಮೊದಲ ಸಿನಿಮಾ ಇಂದಲೇ ಸಂಚಲನ ಸೃಷ್ಟಿಸಿದರು ಹಾಗೆಯೇ ಪ್ಯಾನ್ ಇಂಡಿಯನ್ ನಾಯಕಿಯಾದರು. ಕೆಜಿಎಫ್ ಹಿಟ್ ಇಂದ ಇವರು ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ವರದಿಗಳೂ ಇವೆ. ಕೆಜಿಎಫ್ ಚಿತ್ರದ ಮೂಲಕ ರಂಜಿಸಿದ ಈ ಚೆಲುವೆಗೆ ತಮಿಳಿನ ಸ್ಟಾರ್ ಹೀರೋ ಚಿಯಾನ್ ವಿಕ್ರಮ್ ಅವರ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ವಿಕ್ರಮ್ ಅಭಿನಯದ ಕೋಬ್ರಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಯಶಸ್ಸು ಗಳಿಸಿದ್ದರು. ಇನ್ನು ಕ್ರೇಜಿ ಪ್ರಾಜೆಕ್ಟ್ ಗಳಿಗೆ ಇವರನ್ನು ನಾಯಕಿಯಾಗಿ ಹಾಕಿಕೊಳ್ಳಬೇಕು ಎಂದು ಸಿನಿಮಾ ಮಂದಿ ಪ್ಲಾನ್ ಮಾಡಿದ್ದಾರೆ ಎಂದು ಸುದ್ದಿಗಳಿವೆ.