ನಾಗ ಚೈತನ್ಯ ಏನು ಕಡಿಮೆ ಇಲ್ಲ, ಮೊದಲು ಅವರಿಬ್ಬರ ಹಿಂದೆ ಬಿದ್ದು, ಕೊನೆಗೆ ನನ್ನ ಬಳಿ ಬಂದ ಎಂದ ಸಮಂತಾ. ಹೇಳಿದ್ದೇನು ಗೊತ್ತೇ??
ಟಾಲಿವುಡ್ ನಲ್ಲಿ ಕ್ಯೂಟ್ ಜೋಡಿ ಎನ್ನಿಸಿಕೊಂಡಿದ್ದ ಸಮಂತಾ ಮತ್ತು ನಾಗಚೈತನ್ಯ ಕಳೆದ ವರ್ಷ ವಿಚ್ಛೇದನದ ವಿಚಾರವನ್ನು ಬಹಿರಂಗ ಪಡಿಸಿ ಶಾಕ್ ನೀಡಿದ ವಿಷಯ ಗೊತ್ತೇ ಇದೆ. ವಿಚ್ಛೇದನ ಪಡೆದ ನಂತರ ಈ ಜೋಡಿ ಕೆರಿಯರ್ ನಲ್ಲಿ ಬ್ಯುಸಿ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಸಮಂತಾ ಅಭಿನಯದ ಯಶೋಧ ಸಿನಿಮಾ ತೆರೆಕಂಡು, ಸೂಪರ್ ಹಿಟ್ ಎನ್ನಿಸಿಕೊಂಡಿದೆ. ಥ್ಯಾಂಕ್ ಯೂ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದ ಚೈತು, ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೂಲಕ ಬಾಲಿವುಡ್ ಗು ಎಂಟ್ರಿ ಕೊಟ್ಟಿದ್ದು ಆಗಿದೆ. ನಾಗಚೈತನ್ಯ ಅವರು ಈಗ ಸಿನಿಮಾ ವೆಬ್ ಸೀರೀಸ್ ಎಂದು ಬ್ಯುಸಿ ಆಗಿದ್ದಾರೆ. ಈ ಜೋಡಿ ವಿಚ್ಛೇದನ ಘೋಷಿಸಿ ಒಂದು ವರ್ಷಕ್ಕಿಂತ ಹೆಚ್ಚಿನ ಸಮತ ಕಳೆದಿದ್ದರು ಕೂಡ ..
ಇವರಿಬ್ಬರ ಬಗ್ಗೆ ಆಸಕ್ತಿಕರವಾದ ಕೆಲವು ವಿಚಾರಗಳು ಕೇಳಿಬರುತ್ತಲೇ ಇದೆ. ಇತ್ತೀಚೆಗೆ ಸಮಂತಾ ಅವದರು ನಾಗಚೈತನ್ಯ ಅವರ ಬಗ್ಗೆ ನೀಡಿರುವ ಹೇಳಿಕೆ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಮಂತಾ ಅವರು, ನಟ ರಾಹುಲ್ ರವೀಂದ್ರನ್ ನಾಗಚೈತನ್ಯ ಒಂದು ಸಿನಿಮಾ ಕುರಿತ ಪ್ರಮೋಷನ್ ಪ್ರೆಸ್ ಮೀಟ್ ನಲ್ಲಿ ಭಾಗಿಯಾಗಿದ್ದರು. ಆ ಕಾರ್ಯಕ್ರಮದಲ್ಲಿ ನಟ ರಾಹುಲ್ ರವೀಂದ್ರನ್, ಚೈತನ್ಯ ಅವರಿಗೆ ನೀವು ಸಮಂತಾ ಅವರಿಗೆ ಯಾವಾಗ ಪ್ರೊಪೋಸ್ ಮಾಡಿದ್ರಿ ಎಂದು ಪ್ರಶ್ನೆ ಕೇಳಿದರು, ಅದಕ್ಕೆ ಉತ್ತರಿಸಿದ ಚೈತನ್ಯ ಅವರು, ನಾವಿಬ್ಬರು 10 ವರ್ಷಗಳ ಹಿಂದೆ ಯೇ ಮಾಯ ಚೇಸಾವೆ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಭೇಟಿ ಆದ್ವಿ. ಇದನ್ನು ಓದಿ.. ಒಂದಲ್ಲ ಎರಡಲ್ಲ 5 ಬಾರಿ ದಸರಾದಲ್ಲಿ ಪಾಲ್ಗೊಂಡಿದ್ದ ಆನೆ ಗೋಪಾಲಸ್ವಾಮಿ ಇನ್ನಿಲ್ಲ. ದುಃಖದಲ್ಲಿ ರಾಜ್ಯ.
ಸಮಂತಾ ಅವರನ್ನ ಇಂಪ್ರೆಸ್ ಮಾಡೋದಕ್ಕೆ ತುಂಬಾ ಪ್ರಯತ್ನ ಮಾಡ್ತಾ ಇದ್ದೆ, ಅವರನ್ನ ಇಂಪ್ರೆಸ್ ಮಾಡೋದಕ್ಕೆ 7 ವರ್ಷ ತಗೆದುಕೊಂಡೇ. ಆಗಿನಿಂದಲೂ ಸಮಂತಾ ಅವರನ್ನು ಇಂಪ್ರೆಸ್ ಮಾಡೋದಕ್ಕೆ ಪ್ರಯತ್ನ ಮಾಡ್ತಾನೆ ಇದ್ದೀನಿ..ಎಂದಿದ್ದಾರೆ ಚೈತನ್ಯ. ನನಗೆ ಬೇರೆ ಆಪ್ಶನ್ ಇರಲಿಲ್ಲ, ಹಾಗಾಗಿ ಸಮಂತಾ ಅವರನ್ನು ಮದುವೆ ಮಾಡಿಕೊಂಡೆ ಎಂದಿದ್ದಾರೆ. ಇದೇ ಪ್ರಶ್ನೆಯನ್ನು ಸಮಂತಾ ಅವರ ಬಳಿ ಕೇಳಿದಾಗ, 7 ವರ್ಷಗಳ ಕಾಲ ಚೈತು ಸಾಕಷ್ಟು ಹುಡುಗಿಯರ ಹಿಂದೆ ಬಿದ್ದರು, ನನ್ನ ಟೋಕನ್ ನಂಬರ್ ಬಂದಿದ್ದು 7 ವರ್ಷಗಳಾದ ಮೇಲೆ ಎಂದು ಉತ್ತರ ಕೊಟ್ಟರು ಸಮಂತಾ. ಇದೀಗ ಸಮಂತಾ ಅವರ ಈ ಮಾತುಗಳು ವೈರಲ್ ಆಗುತ್ತಿದೆ. ಇದನ್ನು ಓದಿ.. ಶುರುವಾಗುತ್ತಿದೆ ಏಕದಿನ ಸರಣಿ, ಈ ಬಾರಿ ಉಪನಾಯಕನ ಪಟ್ಟ ಪಡೆದಿರುವ ಆಟಗಾರ ಯಾರು ಗೊತ್ತೇ?? ತಿಳಿದರೆ ಎದ್ದು ಬಿದ್ದು ನಗ್ತೀರಾ.