ಶುರುವಾಗುತ್ತಿದೆ ಏಕದಿನ ಸರಣಿ, ಈ ಬಾರಿ ಉಪನಾಯಕನ ಪಟ್ಟ ಪಡೆದಿರುವ ಆಟಗಾರ ಯಾರು ಗೊತ್ತೇ?? ತಿಳಿದರೆ ಎದ್ದು ಬಿದ್ದು ನಗ್ತೀರಾ.

14

Get real time updates directly on you device, subscribe now.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಪಂದ್ಯಗಳು ಮುಗಿದ ನಂತರ ಈಗ ಏಕದಿನ ಪಂದ್ಯಗಳು ಶುರುವಾಗಲಿದೆ. ಈ ಓಡಿಐ ತಂಡವನ್ನು ಹಿರಿಯ ಆಟಗಾರ ಶಿಖರ್ ಧವನ್ ಮುನ್ನೆಡೆಸುತ್ತಿದ್ದಾರೆ. ಈ ಟೂರ್ನಿಗೆ ಉಪನಾಯಕನಾಗಿ ಆಯ್ಕೆ ಆಗಿರುವವರು ರಿಷಬ್ ಪಂತ್. ಇವರ ಆಟವನ್ನು ಈಗಾಗಲೇ ಎಲ್ಲರೂ ನೋಡಿದ್ದಾಗಿದೆ. ಎಷ್ಟೇ ಅವಕಾಶಗಳನ್ನು ಕೊಡುತ್ತಿದ್ದರು ಕೂಡ ರಿಷಬ್ ಪಂತ್ ಅವರು ತಮ್ಮ ಆಟದ ಶೈಲಿಯಲ್ಲಿ ಉತ್ತಮಪಡಿಸಿಕೊಳ್ಳುತ್ತಿಲ್ಲ. ಟಿ20 ವಿಶ್ವಕಪ್ ನಲ್ಲಿ ಜಿಂಬಾಬ್ವೆ ತಂಡದ ವಿರುದ್ಧ ಆಡುವ ಅವಕಾಶ ನೀಡಲಾಗಿತ್ತು, ಅದರಲ್ಲಿ ವಿಫಲರಾದರು.

ಹಾಗಾದರು ಕೂಡ, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ಸ್ ಪಂದ್ಯದಲ್ಲಿ ಅವಕಾಶ ಕೊಟ್ಟರು ಅದರಲ್ಲೂ ವಿಫಲರಾದರು ಕೂಡ ನ್ಯೂಜಿಲೆಂಡ್ ವಿರುದ್ಧದ ಸೀರೀಸ್ ಗೆ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಿ, ಉಪನಾಯಕನ ಸ್ಥಾನವನ್ನು ಸಹ ನೀಡಲಾಗಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಸೀರೀಸ್ ನಲ್ಲಿ ಪಂತ್ ಅವರು ಆಡಿದ ಶೈಲಿ ನೋಡಿ, ಬಹುತೇಕ ಎಲ್ಲರೂ ನಿರಾಶೆ ಅಸಮಾಧಾನಗೊಂಡಿದ್ದಾರೆ. ಟಿ20 2ನೇ ಪಂದ್ಯದಲ್ಲಿ ಪಂತ್ ಅವರು 6 ರನ್ಸ್ ಗಳಿಸಿ ಬೇಡದ ಅನಾವಶ್ಯಕ ಶಾಟ್ ಹೊಡೆಯಲು ಹೋಗಿ, ಔಟ್ ಆದರು. ಮೊದಲ ಪಂದ್ಯದಲ್ಲೂ ಇದೇ ರೀತಿ ಔಟ್ ಆಗಿದ್ದರು.

ರಿಷಬ್ ಪಂತ್ ಅವರು ವಿಕೆಟ್ ಕೀಪಿಂಗ್ ನಲ್ಲಿ ಸಹ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಹೇಳಲು ಆಗುವುದಿಲ್ಲ. ಹಾಗಾಗಿ ಈ ರೀತಿ ಕಳಪೆ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುವುದೇ ತಪ್ಪು, ಅಂಥದ್ರಲ್ಲಿ ಅವರನ್ನ ವೈಸ್ ಕ್ಯಾಪ್ಟನ್ ಆಗಿ ಮಾಡಿರುವುದಕ್ಕೆ ನೆಟ್ಟಿಗರು ನಗುತ್ತಿದ್ದಾರೆ. ಭಾರತದ ಕ್ರಿಕೆಟ್ ತಜ್ಞರು ಮತ್ತು ಕೆಲವು ಹಿರಿಯ ಆಟಗಾರರು ಸಹ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬದಲಾವಣೆ ಅಗತ್ಯವಿರುವ ಸಮಯದಲ್ಲಿ ಈ ರೀತಿಯ ನಿರ್ಧಾರಗಳು ಯಾಕೆ ಎನ್ನುವ ಪ್ರಶ್ನೆ ಈಗ ಶುರುವಾಗಿದೆ.

Get real time updates directly on you device, subscribe now.