ಸಲಾರ್ ನಲ್ಲಿ ನಟಿಸಲು ಕನ್ನಡದಿಂದ ತೆಲುಗಿಗೆ ಹೋದ ಪ್ರಮೋದ್, ಸಲಾರ್ ಚಿತ್ರ ಉಗ್ರಂ ರಿಮೇಕ್ ಹಾ ಅಂದಿದ್ದಕ್ಕೆ ಹೇಳಿದ್ದೇನು ಗೊತ್ತೇ??
ಕೆಜಿಎಫ್2 ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಶಾಂತ್ ನೀಲ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಉಗ್ರಂ ಸಿನಿಮಾ ಮೂಲಕ. ಇಂದು ಕೆಜಿಎಫ್2 ಯಶಸ್ಸಿನ ನಂತರ ಪ್ರಶಾಂತ್ ನೀಲ್ ಅವರು ತೆಲುಗು ನಟ ಪ್ರಭಾಸ್ ಅವರಿಗಾಗಿ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. ಸಲಾರ್ ಸಿನಿಮಾಗೆ ನಮ್ಮ ಕನ್ನಡದ ಕಲಾವಿದ ಪ್ರಮೋದ್ ಅವರು ಆಯ್ಕೆಯಾಗಿದ್ದಾರೆ. ಕನ್ನಡ ಧಾರವಾಹಿಗಳಲ್ಲಿ ನಟಿಸಿರುವ ಪ್ರಮೋದ್ ಅವರು, ಪ್ರೀಮಿಯರ್ ಪದ್ಮಿನಿ, ರತ್ನನ್ ಪ್ರಪಂಚ ಸಿನಿಮಾಗಳಲ್ಲಿ ನಟಿಸಿದ್ದಾರೆ.
ರತ್ನನ್ ಪ್ರಪಂಚ ಸಿನಿಮಾದ ಇವರ ಅಭಿನಯ ಎಲ್ಲರಿಂದ ಮೆಚ್ಚುಗೆ ಪಡೆಯಿತು. ಆ ಸಿನಿಮಾ ಇಂದಲೇ ಪ್ರಮೋದ್ ಅವರಿಗೆ ಸಲಾರ್ ನಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಪ್ರಶಾಂತ್ ನೀಲ್ ಅವರು ರತ್ನನ್ ಪ್ರಪಂಚ ಸಿನಿಮಾ ನೋಡಿ, ಮೆಚ್ಚಿಕೊಂಡು, ಸಲಾರ್ ಸಿನಿಮಾದ ಒಂದು ಮುಖ್ಯ ಪಾತ್ರಕ್ಕೆ ಪ್ರಮೋದ್ ಅವರನ್ನು ಕರೆಸಿ, ಲುಕ್ ಟೆಸ್ಟ್ ಮಾಡಿಸಿ, ಎಲ್ಲವೂ ಸರಿಹೋದ ನಂತರ ಚಿತ್ರೀಕರಣದಲ್ಲಿ, ಪ್ರಮೋದ್ ಅವರ ಅಭಿನಯ ನೋಡಿ, you are doing a fantastic job ಪ್ರಮೋದ್ ಎಂದು ಹೇಳಿದ್ದಾರಂತೆ ಪ್ರಶಾಂತ್ ನೀಲ್. ಸಲಾರ್ ಸಿನಿಮಾ ಬಗ್ಗೆ ಕನ್ನಡಿಗರಿಗೆ ಕಾಡುತ್ತಾ ಇರೋದು ಒಂದು ಪ್ರಶ್ನೆ.
ಸಲಾರ್ ಉಗ್ರಂ ರಿಮೇಕ್ ಸಿನಿಮಾನ ಎಂದು, ಇದೇ ಪ್ರಶ್ನೆಯನ್ನು ಪ್ರಮೋದ್ ಅವರಿಗೆ ಕೂಡ ಕೇಳಲಾಗಿದ್ದು, ಅದಕ್ಕೆ ಪ್ರಮೋದ್ ಅವರು, “ಗೊತ್ತಿಲ್ಲ ಸರ್. ನನಗೆ ಆ ಥರ ಅನ್ನಿಸಿಲ್ಲ. ಅದೊಂದು ತುಂಬಾ ದೊಡ್ಡ ಸಿನಿಮಾ. ಒಂದು ಪ್ರಪಂಚವನ್ನೇ ಮಾಡಿಕೊಂಡಿದ್ದಾರೆ. ತುಂಬಾ ದೊಡ್ಡದಾಗಿ ನೆಕ್ಸ್ಟ್ ಲೆವೆಲ್ ಅಂತ ಹೇಳ್ತಾರಲ್ಲ ಆ ತರ ಮಾಡ್ತಾ ಇದ್ದಾರೆ. ಅಲ್ಲಿಗೆ ಹೋದರೆ ಆ ವೈಬ್ರೇಷಮ್ ಬೇರೆ ಥರಾನೇ ಇದೆ. ದೊಡ್ಡ ದೊಡ್ಡ ಕಲಾವಿದ ಜೊತೆಗೆ ಅಭಿನಯಿಸೋದು, ಬೇರೆಯದೇ ಫೀಲ್ ಇದೆ..” ಎಂದಿದ್ದಾರೆ ಪ್ರಮೋದ್.