ಒಂದು ಕಾಲದ ಕನ್ನಡದ ಟಾಪ್ ನಟ ದರ್ಶನ್ ರವರು, SSLC ನಲ್ಲಿ ಪಡೆದ ಮಾರ್ಕ್ ತಿಳಿದರೆ ಶಾಕ್ ಆಗ್ತೀರಾ. ಅದರಲ್ಲೂ ವಿಶೇಷತೆ ಮೆರೆದಿದ್ದ ಟಾಪ್ ನಟ.

44

Get real time updates directly on you device, subscribe now.

ಸೆಲೆಬ್ರಿಟಿಗಳು ಚಿತ್ರರಂಗದಲ್ಲಿ ಇರುವ ಕಲಾವಿದರ ಬಗ್ಗೆ ತಿಳಿದುಕೊಳ್ಳಬೇಕುಬೆನ್ನುವ ಕುತೂಹಲ ಎಲ್ಲಾ ಅಭಿಮಾನಿಗಳಲ್ಲಿ ಇರುತ್ತದೆ. ಅವರುಗಳು ಓದಿದ್ದು ಎಲ್ಲಿ, ಶಾಲಾ ಕಾಲೇಜು ದಿನಗಳಲ್ಲಿ ಪಡೆದ ಮಾರ್ಕ್ಸ್ ಎಷ್ಟು, ಹೀಗೆ ಅವರ ವೈಯಕ್ತಿಕ ಜೀವನದ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಬಯಸುತ್ತಾರೆ. ಅದೇ ರೀತಿ ನಟ ದರ್ಶನ್ ಅವರ ಬಗ್ಗೆ ಅಭಿಮಾನಿಗಳಿಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚು. ದರ್ಶನ್ ಅವರ ಬಗ್ಗೆ ಸಹ ಇದೆ ರೀತಿಯ ಕುತೂಹಲ ಇದೆ.

ದರ್ಶನ್ ಅವರು ಹಲವು ಸಂದರ್ಶನಗಳಲ್ಲಿ ತಮಗೆ ಓದಲು ಆಸಕ್ತಿ ಇರಲಿಲ್ಲ ಎಂದು ಹೇಳಿಕೊಂಡಿದ್ದರು. ಪ್ರಸ್ತುತ ದರ್ಶನ್ ಅವರು ಮಾಡಿರುವ ಕ್ರಾಂತಿ ಸಿನಿಮಾ ವಿದ್ಯಾಭ್ಯಾಸದ ಬಗ್ಗೆಯೇ ಆಗಿದ್ದು, ಇಂಟರ್ವ್ಯೂಗಳಲ್ಲಿ ದರ್ಶನ್ ಅವರು ತಮ್ಮ ಶಾಲಾ ದಿನಗಳ ಬಗ್ಗೆ ಸಹ ಮಾತನಾಡಿದ್ದಾರೆ. ದರ್ಶನ್ ಅವರು 10ನೇ ತರಗತಿಯಲ್ಲಿ ಪಡೆದ ಅಂಕಗಳು ಎಷ್ಟು ಎನ್ನುವುದನ್ನು ಕೂಡ ರಿವೀಲ್ ಮಾಡಿದ್ದಾರೆ ಡಿಬಾಸ್. ದರ್ಶನ್ ಅವರು ಓದಿದ್ದು ಬೆಳೆದದ್ದು ಎಲ್ಲವೂ ಮೈಸೂರಿನಲ್ಲಿ.

ಮೈಸೂರಿನ ಟೇರಿಶಿಯನ್ ಸ್ಕೂಲ್, ಜೆ.ಎಸ್.ಎಸ್. ಸ್ಕೂಲ್ ಮತ್ತು ವೈಶಾಲಿ ಸ್ಕೂಲ್ ನಲ್ಲಿ ದರ್ಶನ್ ಅವರು ಓದಿದ್ದಾರೆ. ದರ್ಶನ್ ಅವರು ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆ ಎರಡರಲ್ಲೂ ಓದಿದ್ದರು ಅವರ ಸಮಯದಲ್ಲಿ ಶಾಲೆಯ ಫೀಸ್ ಬಹಳ ಕಡಿಮೆ ಇತ್ತು. ದರ್ಶನ್ ಅವರು ಹೇಳುವ ಹಾಗೆ,10ನೇ ತರಗತಿಯಲ್ಲಿ ಅವರು ಗಳಿಸಿರುವುದು 210 ಅಂಕಗಳು. ಆಗ ಪಾಸ್ ಆಗಲು ಎಲ್ಲಾ ವಿಷಯಗಳಲ್ಲೂ 35 ಅಂಕ ಗಳಿಸಬೇಕಿತ್ತು, ಹಿಂದಿ ಪರೀಕ್ಷೆ ಇರುತ್ತಿದ್ದದ್ದು 80 ಅಂಕಗಳಿಗೆ. ಆಗಿನ ಕಾಲದಲ್ಲಿ ಡಿಬಾಸ್ ಅವರು 10ನೇ ತರಗತಿಯಲ್ಲಿ ಗಳಿಸಿದ್ದು ಇಷ್ಟು ಮಾರ್ಕ್ಸ್.

Get real time updates directly on you device, subscribe now.