ಚಿಕ್ಕ ವಯಸಿನಿನಲ್ಲಿಯೇ ಡೇಟಿಂಗ್ ಆರಂಭ ಮಾಡಿದ ಖ್ಯಾತ ನಾಯಕಿ ಹಾಗೂ ನಟಿ ಆಂಡ್ರಿಯಾ ಪರಿಸ್ಥಿತಿ ಏನಾಗಿದೆ ಗೊತ್ತೇ??
ತಮಿಳು ಚಿತ್ರರಂಗದ ಖ್ಯಾತ ನಟಿ ಆಂಡ್ರಿಯಾ (Andrea Jeremiah) ಸೆನ್ಸೇಷನ್ ಕೇರ್ ಆಫ್ ಅಡ್ರೆಸ್ ಎನ್ನುವ ಹಾಗಿದ್ದಾರೆ. ಆಗಾಗ ಕೆಲವು ವಿಚಾರಗಳ ಬಗ್ಗೆ ಸೆನ್ಸೇಷನಲ್ ಕಮೆಂಟ್ಸ್ ಮಾಡುವ ಮೂಲಕ ತಮಿಳು ಚಿತ್ರರಂಗದಲ್ಲಿ ಸುದ್ದಿಯಾಗುತ್ತಾರೆ ಆಂಡ್ರಿಯಾ. ಇವರ ಸುತ್ತ ಇದುವರೆಗೂ ಹಲವು ವಿವಾದಗಳು ಕೇಳಿಬಂದಿದೆ. ಇದೀಗ ಆಂಡ್ರಿಯಾ ಅವರು ಮತ್ತೊಂದು ಸೆನ್ಸೇಷನಲ್ ಹೇಳಿಕೆ ನೀಡಿದ್ದು, ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತಾವು ಒಬ್ಬ ವ್ಯಕ್ತಿಯನ್ನು ನಂಬಿ ಮೋಸ ಹೋಗಿದ್ದಾಗಿ ಹೇಳಿದ್ದರು, ಆತನಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ ಅದರಿಂದಲೇ ಚಿತ್ರರಂಗದಿಂದ ಸ್ವಲ್ಪ ಸಮಯ ದೂರ ಉಳಿದಿದ್ದೆ ಎಂದು ಹೇಳಿಕೆ ನೀಡಿದ್ದಾರೆ ನಟಿ ಆಂಡ್ರಿಯಾ..
ಪ್ರಸ್ತುತ ಈ ನಟಿ ಮತ್ತೊಮ್ಮೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗ ಆಂಡ್ರಿಯಾ ನಾಯಕಿ ಆಗಿ ನಟಿಸಿರುವ ಅನಲ್ ಮೇಲೇ ಪನಿತುಳಿ (Anal Mele Panithuli) ಸಿನಿಮಾ ಒಟಿಟಿ ಸ್ಟ್ರೀಮ್ ಆಗಲು ಸಿದ್ಧವಾಗಿದೆ. ಜೊತೆಗೆ ಪಿಶಾಚಿ 2 (Pishachi 2) ಸಿನಿಮಾದಲ್ಲಿ ಆಂಡ್ರಿಯಾ ನಟಿಸುತ್ತಿದ್ದಾರೆ. ಸಿನಿಮಾ ಪ್ರೊಮೋಷನ್ ಗಳ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಆಂಡ್ರಿಯಾ ಮತ್ತೊಮ್ಮೆ ಸೆನ್ಸೇಷನಲ್ ಕಮೆಂಟ್ ಮಾಡಿದ್ದಾರೆ. 20 ವರ್ಷದವರಾಗಿದ್ದಾಗ, ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೆ ಎಂದು ಹೇಳಿರುವ ಆಂಡ್ರಿಯಾ ಅವರು, “ನಾನು ಅವನನ್ನು ಮದುವೆಯಾಗಲು ಬಯಸಿದ್ದೆ ಆದರೆ ಅದು ವರ್ಕ್ ಔಟ್ ಆಗಲಿಲ್ಲ..” ಎಂದು ಹೇಳಿದ್ದಾರೆ. ಆ ವ್ಯಕ್ತಿಯಿಂದ ತಮಗೆ ತುಂಬಾ ಮೋಸ ಆಗಿದೆ ಎಂದು ಹೇಳಿದ್ದಾರೆ ಆಂಡ್ರಿಯಾ. ಇದನ್ನು ಓದಿ.. ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವುದು ಯಾರು ಗೊತ್ತೇ?? ಸಾಕ್ಷಿ ಸಮೇತ ನೋಡಿ. ಬಿಗ್ ಬಾಸ್ ಮನೆ ತಲ್ಲಣ.
ಮದುವೆ ಬಗ್ಗೆ ತಮಗಿರುವ ಅಭಿಪ್ರಾಯದ ಬಗ್ಗೆ ಮಾತನಾಡಿರುವ ನಟಿ ಆಂಡ್ರಿಯಾ, ಸಧ್ಯಕ್ಕೆ ಮದುವೆಯಾಗುವ ಯೋಚನೆ ಇಲ್ಲ, ಇನ್ನು ಮುಂದಕ್ಕಿರುವ ಜೀವನವನ್ನು ಸಂತೋಷದಿಂದ ಕಳೆಯಲು ಬಯಸುತ್ತೇನೆ ಎಂದಿದ್ದಾರೆ. ಅನೇಕ ಹುಡುಗಿಯರು ಮದುವೆಯ ನಂತರ ಸಂತೋಷವಾಗಿಲ್ಲ ಎಂದು ಹೇಳಿರುವ ಆಂಡ್ರಿಯಾ, ಹಲವು ಜನರು ಮದುವೆಯಾಗದೆ ಸಂತೋಷದಿಂದ ಬದುಕುತ್ತಾರೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಮದುವೆಯಾಗುವ ಯೋಚನೆ ಇಲ್ಲದ ಆಂಡ್ರಿಯಾ ಮುಂದಾದರೂ ಮನಸ್ಸು ಬದಲಾಯಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನು ಓದಿ.. ದೇಶದೆಲ್ಲೆಡೆ ವಿವಾದ ಸೃಷ್ಟಿ ಮಾಡುತ್ತಿರುವ ಬೆನ್ನಲ್ಲೇ ಮತ್ತೊಂದು ಹೆಜ್ಜೆ ಇಡಲು ಮುಂದಾದ ನರೇಶ್-ಪವಿತ್ರ. ಮಾಡುತ್ತಿರುವುದು ಏನು ಗೊತ್ತೇ??