ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವುದು ಯಾರು ಗೊತ್ತೇ?? ಸಾಕ್ಷಿ ಸಮೇತ ನೋಡಿ. ಬಿಗ್ ಬಾಸ್ ಮನೆ ತಲ್ಲಣ.
ಬಿಗ್ ಬಾಸ್ ಶೋ ದಿನೇ ದಿನೇ ರಂಗೇರುತ್ತಿದೆ. ಈಗಾಗಲೇ 8 ವಾರಗಳ ಪಯಣ ಮುಗಿಸಿದ ಸ್ಪರ್ಧಿಗಳು 9ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಈಗ ಮನೆಯೊಳಗೆ ಇರುವುದು ಕೇವಲ 11 ಸ್ಪರ್ಧಿಗಳು. ಈ ಸಮಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳು ಟಫ್ ಆಗುತ್ತಿದೆ. ಜೊತೆಗೆ ಸ್ಪರ್ಧಿಗಳ ನಡುವೆ ಕಾಂಪಿಟೇಶನ್ ಹೆಚ್ಚಾಗಿದೆ. ಈಗಾಗಲೇ ಸ್ಪರ್ಧಿಗಳ ಅರ್ಧ ಜರ್ನಿ ಮುಗಿದಿದ್ದು ಇನ್ನರ್ಧ ಜರ್ನಿ ಬಾಕಿ ಉಳಿದಿದೆ.
8 ವಾರಗಳು ಕಳೆದಿದ್ದರು ಕೂಡ ಇನ್ನು ವೈಲ್ಡ್ ಕಾರ್ಡ್ ಎಂಟ್ರಿ ಆಗಿಲ್ಲ ಎಂದು ಬಿಗ್ ಬಾಸ್ ಅಭಿಮಾನಿಗಳು ಕುತೂಹಳಗೊಂಡಿದ್ದರು. ಇದೀಗ ಬಿಗ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದು, ದೀಪಿಕಾ ದಾಸ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರೀಎಂಟ್ರಿ ಕೋಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಾಕ್ಷಿ ಇಂದಿನ ಎಪಿಸೋಡ್ ನ ಪ್ರೋಮೋ ಆಗಿದೆ. ಅದರಲ್ಲಿ ಹೊಸ ಸ್ಪರ್ಧಿ ಮನೆಗೆ ಬಂದಿರುವ ಹಾಗೆ ತೋರಿಸಲಾಗಿದ್ದು, ಅದು ದೀಪಿಕಾ ದಾಸ್ ಅವರೇ ಎಂದು ಹೇಳಲಾಗುತ್ತಿದೆ.
ದೀಪಿಕಾ ದಾಸ್ ಬಹಳ ಸ್ಟ್ರಾಂಗ್ ಆದ ಸ್ಪರ್ಧಿಯಾಗಿದ್ದರು. ಟಾಸ್ಕ್ ಗಳಲ್ಲಿ ಉತ್ತಮವಾಗಿ ಆಡುತ್ತಾ, ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದರು. ಇಂತಹ ಸ್ಟ್ರಾಂಗ್ ಸ್ಪರ್ಧಿ ಇಷ್ಟು ಬೇಗ ಎಲಿಮಿನೇಟ್ ಆಗಿದ್ದಕ್ಕೆ ಎಲ್ಲರೂ ಆಶ್ಚರ್ಯ ಪಟ್ಟಿದ್ದಂತು ನಿಜ. ಇದೀಗ ದೀಪಿಕಾ ಅವರೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆಯೊಳಗೆ ಬರುತ್ತಾರೆ ಎನ್ನುವುದು ಇನ್ನಷ್ಟು ಒಳ್ಳೆಯ ವಿಚಾರ ಆಗಿದ್ದು, ಅವರ ಅಭಿಮಾನಿಗಳು ಈ ವಿಚಾರ ತಿಳಿದು ಸಂತೋಷಗೊಂಡಿದ್ದಾರೆ.