Kannada News: ಇದ್ದಕ್ಕಿದ್ದ ಹಾಗೆ ಜಪಾನ್ ನಿಂದ ಬಂದು ರಾಘಣ್ಣ ರವರನ್ನು ಭೇಟಿ ಮಾಡಿದ ಜನ ಯಾರು ಗೊತ್ತೇ?? ರಾಘಣ್ಣ ರಾವರಿಗಾಗಿ ಅವರು ಬಂದಿಲ್ಲ.

15

Get real time updates directly on you device, subscribe now.

Kannada News: ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಒಂದು ವರ್ಷ ಕಳೆದಿದ್ದರು ಸಹ ಇಂದಿಗೂ ಅವರ ನೆನಪುಗಳು ಕಡಿಮೆಯಾಗಿಲ್ಲ. ಅಪ್ಪು ಅವರ ಹೆಸರಿನಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಅಭಿಮಾನಿಗಳು ಪ್ರತಿದಿನ ಬಂದು ಅವರ ಸಮಾಧಿಯ ದರ್ಶನ ಪಡೆಯುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎನ್ನುವ ಈ ಹೆಸರು ನಮ್ಮ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ..

ಅಪ್ಪು ಅವರ ಅಭಿಮಾನಿಗಳು ದೇಶದ ಹಲವೆಡೆ, ಹೊರದೇಶಗಳಲ್ಲಿ ಸಹ ಇದ್ದಾರೆ. ನಮ್ಮ ಜನರು ಹೇಗೆ ಅಪ್ಪು ಅವರ ನೆನಪಿನಲ್ಲಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೋ, ಅದೇ ರೀತಿ ಅಲ್ಲಿನ ಅಭಿಮಾನಿಗಳು ಕೂಡ ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇದೀಗ ಅಪ್ಪು ಅವರ ಅಭಿಮಾನಿಗಳು ದೂರದ ಜಪಾನ್ ಇಂದ ಬಂದಿದ್ದಾರೆ. ಜಪಾನ್ ರಾಜಧಾನಿ ಟೋಕಿಯೋ ಇಂದ ಅಪ್ಪು ಅವರ ಅಭಿಮಾನಿಗಳು ಬೆಂಗಳೂರಿಗೆ ಬಂದಿದ್ದು, ಅಪ್ಪು ಅವರ ನೆನಪಲ್ಲಿ ರಾಘಣ್ಣ ಅವರನ್ನು ಭೇಟಿ ಮಾಡಿದ್ದಾರೆ.

ಹೊರದೇಶದ ಅಪ್ಪು ಅವರ ಅಭಿಮಾನಿಗಳ ಜೊತೆಗೆ ರಾಘಣ್ಣ ಅವರು ಭೇಟಿ ಮಾಡಿ, ಸ್ವಲ್ಪ ಹೊತ್ತು ಸಮಯ ಕಳೆದು, ಅವರೆಲ್ಲರ ಜೊತೆಗೆ ಮಾತನಾಡಿದ್ದಾರೆ. ಇದನ್ನು ನೋಡಿದರೆ, ನಮ್ಮ ಅಪ್ಪು ಅವರ ಒಳ್ಳೆಯ ಗುಣ ಎಂಥದ್ದು ಎನ್ನುವುದು ಗೊತ್ತಾಗುತ್ತದೆ. ಅಪ್ಪು ಅವರನ್ನು ವಿಶ್ವ ಮಾನವ ದೈವ ಮಾನವ ಎಂದು ಕರೆಯುತ್ತಿದ್ದಾರೆ. ಅದು ನಿಜವೇ, ಈ ರೀತಿ ಅಭಿಮಾನಿಗಳು ಬಂದು ಭೇಟಿ ಆಗುವುದು, ಅಪ್ಪು ಅವರ ವಿಚಾರದಲ್ಲಿ ಮಾತ್ರ ಸಾಧ್ಯ ಎಂದರೆ ತಪ್ಪಾಗುವದಿಲ್ಲ.

Get real time updates directly on you device, subscribe now.