Kannada News: ಮತ್ತೊಮ್ಮೆ ಕನ್ನಡ ಚಿತ್ರರಂಗವನ್ನು ಟಾಪ್ ಗೆ ಏರಿಸುವ ಸಿನಿಮಾ ನಿರ್ಧಾರ: ಕಾಂತಾರ ನಂತರ ಕೊರಗಜ್ಜನ ಸಿನಿಮಾ ಮಾಡಲು ನಿರ್ಧಾರ ಮಾಡಿದ್ಯಾರು ಗೊತ್ತೇ?

11

Get real time updates directly on you device, subscribe now.

Kannada News: ಕನ್ನಡ ಚಿತ್ರರಂಗವನ್ನು ವಿಶ್ವದ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಸಿನಿಮಾ ಕಾಂತಾರ (Kantara), ಈ ಸಿನಿಮಾದಲ್ಲಿ ತೋರಿಸಿರುವ ಕರಾವಳಿ ಭಾಗದ ಗುಳಿಗ ಮತ್ತು ಪಂಜುರ್ಲಿ ದೈವದ ಬಗ್ಗೆ ಈಗ ಇಡೀ ದೇಶದ ಜನರೇ ಚರ್ಚೆ ಮಾಡುವ ಹಾಗೆ ಆಗಿದೆ. ಕಾಂತಾರ ಸಿನಿಮಾ ಇಂದ ವಿಶ್ವಕ್ಕೆ ಕರಾವಳಿ ಪ್ರದೇಶದ ಆಚರಣೆಗಳು ಗೊತ್ತಾಗಿದೆ, ಕಾಂತಾರ ಸಕ್ಸಸ್ ಬೆನ್ನಲ್ಲೇ ಈಗ, ಕರಾವಳಿ ಭಾಗದ ಮತ್ತೊಂದು ಕೊರಗಜ್ಜನ ಕಥೆ ಹೇಳಲು ಮುಂದಾಗುತ್ತಿದೆ. ಕರಿ ಹೈದ ಕರಿ ಅಜ್ಜ (Kari Haida Kari Ajja)ಎಂದು ಸಿನಿಮಾಗೆ ಟೈಟಲ್ ಇಡಲಾಗಿದೆ. ಕರಾವಳಿ ಭಾಗದಲ್ಲಿ ಪೂಜಿಸಲ್ಪಡುವ ಮತ್ತೊಂದು ದೈವ ಕೊರಗಜ್ಜ.

ಇವರು ಬಹಳ ಪವರ್ ಫುಲ್ ದೇವರು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂದು ಹೇಳುತ್ತಾರೆ. ಕೊರಗಜ್ಜನ ಕಥೆಯನ್ನು ಸುಧೀರ್ ಅತ್ತಾವರ್ (Sudhir Attavar) ಅವರು ನಿರ್ದೇಶನ ಮಾಡುತ್ತಾರೆ ಎನ್ನಲಾಗಿದೆ. ಇದರಲ್ಲಿ ಕೊರಗಜ್ಜ ಅವರ ಕಥೆ, ಪವಾಡ ಎಲ್ಲವನ್ನು ತೋರಿಸಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. 12ನೇ ಶತಮಾನದವರು ಈ ಕೊರಗಜ್ಜ, ಓಡಿ ಮತ್ತು ಅಚ್ಚು ಮೈರಿದಿ ಎನ್ನುವ ದಂಪತಿಯ ಮಗನಾಗಿ ತನಿಯ ಕೊರಗ ಜನಿಸುತ್ತಾರೆ, ಬಹಳ ಬೇಗ ತಮ್ಮ ತಂದೆ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಇವರನ್ನು ಬೈದರೆ ಜನಾಂಗಕ್ಕೆ ಸೇರಿದ ಮೈರಕ್ಕ ಬೈದರೆ ಅವರು ಬೆಳೆಸುತ್ತಾರೆ. ಮೈರಕ್ಕ ಅವರು ಸೇಂದಿ ತಯಾರಿಕೆ ಮಾಡುವವರಾಗಿರುತ್ತಾರೆ.. ಇದನ್ನು ಓದಿ.. Viral Video: ಮದುವೆ ಮನೆಯಲ್ಲಿ ಗ್ರಾಂಡ್ ಎಂಟ್ರಿ ಕೊಟ್ಟ ಮಧು ಮಗಳು: ವೈರಲ್ ಆಯ್ತು ಎಲ್ಲರೂ ಇದ್ದಾರೆ ಎನ್ನುವುದನ್ನು ನೋಡದೆ ಹಾಕಿ ಸ್ಟೆಪ್ಸ್. ಹೇಗಿದೆ ಗೊತ್ತೇ?

ಒಂದು ದಿನ ಕೊರಗಜ್ಜ ಸೇಂದಿ ತಯಾರಿಕೆಗೆ ಬಣ್ಣ ತರಲು ಹೋದಾಗ ನಾಪತ್ತೆಯಾಗುತ್ತಾರೆ ಎನ್ನುವ ನಂಬಿಕೆ ಇದೆ. ಅಂದಿನಿಂದ ಇವರನ್ನು ದೈವಾವಾಗಿ ಪೂಜೆ ಮಾಡುತ್ತಾರೆ. ಕೊರಗಜ್ಜನ ಬಳಿ ಬಂದ ಭಕ್ತರು, ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಂಡರೆ, ಅವರು ನೆರವೇರಿಸುತ್ತಾರೆ, ಅದಕ್ಕೆ ಉದಾಹರಣೆಯಾಗಿ ಹಲವು ಪವಾಡಗಳು ನಡೆದಿರುವ ಉದಾಹರಣೆ ಇದೆ ಎಂದು ಜನರು ನಂಬಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ಸಕ್ರಿಯರಾಗಿರುವ ನಟ ಕಬೀರ್ ಬೇಡಿ (Kabir Bedi) ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಹಿರಿಯ ನಟಿ ಶ್ರುತಿ (Shruti) ಅವರು ಮತ್ತು ಭವ್ಯ (Bhavya) ಅವರು ಕೂಡ ನಟಿಸುತ್ತಾರೆ ಎನ್ನಲಾಗಿದೆ. ಇದನ್ನು ಓದಿ..Kannada News: ದಿಡೀರ್ ಎಂದು ಆರೋಗ್ಯವಾಗಿದ್ದ 24 ವರ್ಷದ ಖ್ಯಾತ ಕಿರುತೆರೆ ನಟಿ ಐಂದ್ರಿಲಾ ಶರ್ಮ ವಿಧಿವಶ. ಕೊನೆ ಕ್ಷಣದಲ್ಲಿ ಏನಾಗಿತ್ತು ಗೊತ್ತೇ?? ಈ ವಯಸ್ಸಿಗೆ ಏನಾಯಿತು ಗೊತ್ತೇ??

Get real time updates directly on you device, subscribe now.